AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ಕೋಟಿ ರೂ. ಸಿನಿಮಾ, ಗಳಿಸಿದ್ದು 1,700 ಕೋಟಿ; ಅಬ್ಬಬ್ಬಾ ಹೊಸ ದಾಖಲೆ

ಕರ್ರಿ ಬಾರ್ಕರ್ ನಿರ್ದೇಶನದ ಹಾಲಿವುಡ್ ಹಾರರ್ ಸಿನಿಮಾ 'ಒಬ್ಸೆಷನ್' ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದೆ. ಕೇವಲ 7.12 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಈಗಾಗಲೇ 1697 ಕೋಟಿ ರೂ.ಗೂ ಹೆಚ್ಚು ಗಳಿಸಿ ದಾಖಲೆ ಬರೆದಿದೆ. ಆದರೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಚಿತ್ರದ ಬಜೆಟ್ ಕೇವಲ 70 ಲಕ್ಷ ರೂ. ಎಂದು ಪ್ರಶ್ನಿಸಿರುವುದು ಹೊಸ ಚರ್ಚೆಗೆ ನಾಂದಿ ಹಾಡಿದೆ.

7 ಕೋಟಿ ರೂ. ಸಿನಿಮಾ, ಗಳಿಸಿದ್ದು 1,700 ಕೋಟಿ; ಅಬ್ಬಬ್ಬಾ ಹೊಸ ದಾಖಲೆ
ಒಬ್ಸೆಷನ್
ರಾಜೇಶ್ ದುಗ್ಗುಮನೆ
|

Updated on: Jun 08, 2026 | 12:30 PM

Share

ಸದ್ಯ ಹಾರರ್ ಸಿನಿಮಾವೊಂದು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ನಿರ್ದೇಶಕ ಕರ್ರಿ ಬಾರ್ಕರ್ ಆ್ಯಕ್ಷನ್ ಕಟ್ ಹೇಳಿರುವ ಹಾಲಿವುಡ್​ನ ಸೂಪರ್‌ನ್ಯಾಚುರಲ್ ಸೈಕಲಾಜಿಕಲ್ ಹಾರರ್ ಸಿನಿಮಾ ‘ಒಬ್ಸೆಷನ್’ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಕೇವಲ ಕೋಟಿಗಳಲ್ಲಿ ತಯಾರಾದ ಈ ಸಿನಿಮಾ ಈಗ ಸಾವಿರಾರು ಕೋಟಿ ಕೊಳ್ಳೆ ಹೊಡೆಯುವತ್ತ ಮುನ್ನುಗ್ಗುತ್ತಿದೆ.

ಬಜೆಟ್‌ಗಿಂತ 230 ಪಟ್ಟು ಹೆಚ್ಚು ಗಳಿಕೆ!

ಹಾಲಿವುಡ್ ರಿಪೋರ್ಟರ್ ವರದಿಗಳ ಪ್ರಕಾರ, ‘ಒಬ್ಸೆಷನ್’ ಸಿನಿಮಾವನ್ನು ಕೇವಲ 7,50,000 ಡಾಲರ್ ಅಂದರೆ ಭಾರತೀಯ ಮೌಲ್ಯದಲ್ಲಿ ಸುಮಾರು 7.12 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಆದರೆ ಬಾಕ್ಸ್ ಆಫೀಸ್ ಗಳಿಕೆ ನೋಡೋದಾದರೆ ಈ ಚಿತ್ರ ಈಗಾಗಲೇ ಜಾಗತಿಕವಾಗಿ ಬರೋಬ್ಬರಿ 1,697.51 ಕೋಟಿ ರೂಪಾಯಿ (178.78 ಮಿಲಿಯನ್ ಡಾಲರ್) ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದೆ. ಅಂದರೆ ತನ್ನ ಬಜೆಟ್‌ಗಿಂತ ಬರೋಬ್ಬರಿ 230 ಪಟ್ಟು ಹೆಚ್ಚು ಹಣವನ್ನು ಇದು ಬಾಚಿಕೊಂಡಿದೆ!

ಇನ್ನು ಭಾರತದಲ್ಲೂ ಈ ಹಾರರ್ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಸ್ಯಾಕ್ನಿಲ್ಕ್ ವರದಿ ಪ್ರಕಾರ ಭಾರತವೊಂದರಲ್ಲೇ ಒಟ್ಟು 34.15 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರದ ಲೈಫ್‌ಟೈಮ್ ಕಲೆಕ್ಷನ್ ವಿಶ್ವಾದ್ಯಂತ 3,000 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಟ್ರೇಡ್ ಅನಾಲಿಟಿಕ್ಸ್ ಅಂದಾಜಿಸಿದ್ದಾರೆ.

ಆರ್​ಜಿವಿ ಹೇಳಿದ್ದೇನು?

ಚಿತ್ರದ ಅಧಿಕೃತ ಬಜೆಟ್ 7 ಕೋಟಿ ರೂಪಾಯಿ ಎಂದು ವರದಿಯಾಗಿದ್ದರೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಇದನ್ನು ಒಪ್ಪುತ್ತಿಲ್ಲ. ಈ ಬಗ್ಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಅವರು, ಚಿತ್ರದ ಬಜೆಟ್ ಅನ್ನು ಖಡಾಖಂಡಿತವಾಗಿ ಪ್ರಶ್ನಿಸಿದ್ದಾರೆ. ‘ಈ ಚಿತ್ರದ ಮೇಕಿಂಗ್ ವೆಚ್ಚ ಯಾವುದೇ ಕಾರಣಕ್ಕೂ 70 ಲಕ್ಷ ರೂಪಾಯಿಗಿಂತ ಹೆಚ್ಚಿರಲು ಸಾಧ್ಯವೇ ಇಲ್ಲ’ ಎಂದು ಆರ್​ಜಿವಿ ಹೇಳಿದ್ದಾರೆ.

ಇದನ್ನೂ ಓದಿ: 1 ಕೋಟಿ ಕೊಟ್ಟು ಗಣೇಶನ ಪುಟ್ಟ ಮೂರ್ತಿ ಖರೀದಿಸಿದ ಹಾಲಿವುಡ್ ಸ್ಟಾರ್

‘ಸಿನಿಮಾದ ತಾಂತ್ರಿಕ ಸಂಭಾವನೆಗಳನ್ನು ಹೊರತುಪಡಿಸಿ ನೋಡಿದರೆ, ಇದರ ಪ್ಯೂರ್ ಮೇಕಿಂಗ್ ಕಾಸ್ಟ್ 70 ಲಕ್ಷ ದಾಟಲ್ಲ. ಏಕೆಂದರೆ ಇಡೀ ಸಿನಿಮಾವನ್ನು ಕೇವಲ ಮೂರೇ ಮೂರು ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿದೆ. ಹೀಗಿರುವಾಗ ಇದಕ್ಕೆ 7 ಕೋಟಿ ಖರ್ಚಾಗಲು ಹೇಗೆ ಸಾಧ್ಯ’ ಎಂದು ಆರ್​ಜಿವಿ ಪ್ರಶ್ನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್