AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಕೋಟಿ ಕೊಟ್ಟು ಗಣೇಶನ ಪುಟ್ಟ ಮೂರ್ತಿ ಖರೀದಿಸಿದ ಹಾಲಿವುಡ್ ಸ್ಟಾರ್

Will Smith: ಹಾಲಿವುಡ್ ಸ್ಟಾರ್ ನಟಿ ಜೂಲಿಯಾ ರಾಬರ್ಟ್ಸ್, ನಟ ರಸಲ್ ಬ್ರ್ಯಾಂಡ್, ರಾಬರ್ಟ್ ಡೌನಿ ಜೂನಿಯರ್ (ಐರನ್ ಮ್ಯಾನ್) ಇನ್ನೂ ಹಲವು ಹಾಲಿವುಡ್ ಸ್ಟಾರ್ ನಟ, ನಟಿಯರು ತಾವು ಹಿಂದೂ ದೇವತೆಗಳ ಆರಾಧಕರು ಎಂದು ಹೇಳಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಖ್ಯಾತ ಹಾಲಿವುಡ್ ನಟ, ಆಸ್ಕರ್ ವಿಜೇತ ವಿಲ್ ಸ್ಮಿತ ಸಹ ಸೇರಿದ್ದಾರೆ. ಇತ್ತೀಚೆಗಷ್ಟೆ ವಿಲ್ ಸ್ಮಿತ್ ಅವರು ಗಣೇಶನ ಹಾರವೊಂದನ್ನು ಖರೀದಿಸಿ ಕೊರಳಿಗೆ ಧರಿಸಿದ್ದಾರೆ.

1 ಕೋಟಿ ಕೊಟ್ಟು ಗಣೇಶನ ಪುಟ್ಟ ಮೂರ್ತಿ ಖರೀದಿಸಿದ ಹಾಲಿವುಡ್ ಸ್ಟಾರ್
Will Smith
ಮಂಜುನಾಥ ಸಿ.
|

Updated on: Jun 02, 2026 | 6:20 PM

Share

ಭಾರತೀಯರು ಮಾತ್ರವಲ್ಲ ಹಲವು ಹಾಲಿವುಡ್ (Hollywood) ಸ್ಟಾರ್ ನಟ, ನಟಿಯರು, ಉದ್ಯಮಿಗಳು, ಕೆಲ ವಿಜ್ಞಾನಿಗಳು ಸಹ ಹಿಂದೂ ದೇವತೆಗಳಲ್ಲಿ ನಂಬಿಕೆ ಇಟ್ಟಿದ್ದಾರೆ. ಈ ಬಗ್ಗೆ ಹಲವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಅವರಲ್ಲಿ ಪ್ರಮುಖರೆಂದರೆ ಸ್ಟಾರ್ ನಟಿ ಜೂಲಿಯಾ ರಾಬರ್ಟ್ಸ್, ನಟ ರಸಲ್ ಬ್ರ್ಯಾಂಡ್, ರಾಬರ್ಟ್ ಡೌನಿ ಜೂನಿಯರ್ (ಐರನ್ ಮ್ಯಾನ್) ಇನ್ನೂ ಹಲವು ಹಾಲಿವುಡ್ ಸ್ಟಾರ್ ನಟ, ನಟಿಯರು ತಾವು ಹಿಂದೂ ದೇವತೆಗಳ ಆರಾಧಕರು ಎಂದು ಹೇಳಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಖ್ಯಾತ ಹಾಲಿವುಡ್ ನಟ, ಆಸ್ಕರ್ ವಿಜೇತ ವಿಲ್ ಸ್ಮಿತ ಸಹ ಸೇರಿದ್ದಾರೆ. ಇತ್ತೀಚೆಗಷ್ಟೆ ವಿಲ್ ಸ್ಮಿತ್ ಅವರು ಗಣೇಶನ ಹಾರವೊಂದನ್ನು ಖರೀದಿಸಿ ಕೊರಳಿಗೆ ಧರಿಸಿದ್ದಾರೆ.

ವಿಲ್ ಸ್ಮಿತ್, ಮುಂಚಿನಿಂದಲೂ ಹಿಂದೂ ದೇವತೆಗಳ ಮೇಲೆ, ಧರ್ಮದ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಕೆಲವು ಬಾರಿ ಮಾತನಾಡಿದ್ದೂ ಸಹ ಇದೆ. ವಿಲ್ ಸ್ಮಿತ್ ಭಾರತದೊಂದಿಗೆ ಆಪ್ತ ನಂಟು ಸಹ ಹೊಂದಿದ್ದಾರೆ. ಇತ್ತೀಚೆಗಷ್ಟೆ ಅವರು ಒಂದು ಕೋಟಿ ರೂಪಾಯಿ ನೀಡಿ ಗಣೇಶ ಮೂರ್ತಿಯ ಲಾಕೆಟ್ ಒಂದನ್ನು ಖರೀದಿಸಿ ಕೊರಳಿಗೆ ಧರಿಸಿದ್ದಾರೆ. ಅವರು ಗಣೇಶನ ಮೂರ್ತಿಯ ಲಾಕೆಟ್ ಖರೀದಿಸಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:ಹಾಲಿವುಡ್ ಖ್ಯಾತ ನಟಿಗೆ ಪ್ರಭಾಸ್ ಸಿನಿಮಾ ಬಲು ಇಷ್ಟವಂತೆ

ವಿಲ್ ಸ್ಮಿತ್ ಅವರು ದೆಹಲಿಯ ಸುಂದರ್ ನಗರ್​​ನಲ್ಲಿನ ಮೋತಿ ಜ್ಯುವೆಲ್ಸ್ ಪ್ಯಾಲೆಸ್​ ಅವರಿಂದ ಚಿನ್ನ ಮತ್ತು ವಜ್ರದಿಂದ ಮಾಡಿರುವ ಗಣೇಶನ ಮೂರ್ತಿಯನ್ನು ಖರೀದಿಸಿದ್ದಾರೆ. ಮೋತಿ ಜ್ಯುವೆಲ್ಸ್​​ನ ಮಾಲೀಕ ಲಂಡನ್​​ಗೆ ಹೋಗಿ ಅಲ್ಲಿ ವಿಲ್ ಸ್ಮಿತ್ ಅವರನ್ನು ಭೇಟಿಯಾಗಿ ಅವರಿಗೆ ಗಣೇಶನ ಲಾಕೆಟ್ ಅನ್ನು ನೀಡಿದ್ದಾರೆ. ಬಲು ಖುಷಿಯಿಂದ ಲಾಕೆಟ್ ಅನ್ನು ಪಡೆದು, ಅದರ ವಿವರಣೆಗಳನ್ನು ಆಸಕ್ತಿಯಿಂದ ಕೇಳಿದ ವಿಲ್ ಸ್ಮಿತ್ ಅವರು, ‘ಇದು ನಿಜಕ್ಕೂ ಖುಷಿಯ ಕ್ಷಣ’ ಎಂದು ಬಣ್ಣಿಸಿದ್ದಾರೆ.

ವಿಲ್ ಸ್ಮಿತ್, ಹಾಲಿವುಡ್​ನ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಮೆನ್ ಇನ್ ಬ್ಲಾಕ್’, ‘ಇಂಡಿಪೆಂಡೆನ್ಸ್ ಡೇ’, ‘ಬ್ಯಾಡ್ ಬಾಯ್ಸ್’, ‘ಎನಿಮಿ ಆಫ್ ದಿ ಸ್ಟೇಟ್’, ‘ಐ ರೊಬಾಟ್’, ‘ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್’, ‘ಸೂಸೈಡ್ ಸ್ಕ್ವಾಡ್’, ‘ಅಲ್ಲಾದಿನ್’ ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕಿಂಗ್ ರಿಚರ್ಡ್ಸ್’ ಸಿನಿಮಾದ ನಟನೆಗೆ ಅವರಿಗೆ ಆಸ್ಕರ್ ಸಹ ಲಭಿಸಿದೆ. ಅಂದಹಾಗೆ ವಿಲ್ ಸ್ಮಿತ್ ಅವರು ಬಾಲಿವುಡ್​ನ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ಸಹ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್