Oppenheimer Movie: ಜಪಾನ್​ನಲ್ಲಿ ರಿಲೀಸ್ ‘ಆಪನ್​ಹೈಮರ್’ ಸಿನಿಮಾ; ಎದ್ದಿತು ಅಪಸ್ವರ

|

Updated on: Mar 30, 2024 | 8:30 AM

ಅಮೆರಿಕದಲ್ಲಿ ‘ಆಪನ್​ಹೈಮರ್’ ರಿಲೀಸ್ ಆಗಿ ಏಳು ತಿಂಗಳು ಕಳೆದಿದೆ. ಈ ಚಿತ್ರ ಆಸ್ಕರ್​​ನಲ್ಲಿ ಹಲವು ಪ್ರಶಸ್ತಿ ಗಳಿಸಿದೆ. ಈಗ ಸಿನಿಮಾ ಜಪಾನ್​ನಲ್ಲೂ ಬಿಡುಗಡೆ ಆಗಿದೆ. ಈ ಚಿತ್ರದ ಬಗ್ಗೆ ಹಿರೋಷಿಮಾದ ಮಾಜಿ ಮೇಯರ್ ತಕಾಶ ಹಿರೌಕಾ ಮಾತನಾಡಿದ್ದಾರೆ.

Oppenheimer Movie: ಜಪಾನ್​ನಲ್ಲಿ ರಿಲೀಸ್ ‘ಆಪನ್​ಹೈಮರ್’ ಸಿನಿಮಾ; ಎದ್ದಿತು ಅಪಸ್ವರ
ಆಪನ್​ಹೈಮರ್
Follow us on

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್​ನ ಹಿರೋಷಿಮಾ ಹಾಗೂ ನಾಗಸಕಿ ಮೇಲೆ ಅಮೆರಿಕದವರು ಅಣುಬಾಂಬ್ ದಾಳಿ ಮಾಡಿದರು. ಈ ವೇಳೆ ಲಕ್ಷಾಂತರ ಮಂದಿ ಮೃತಪಟ್ಟರು. ಕ್ಷಣಮಾತ್ರದಲ್ಲಿ ನಗರಕ್ಕೆ ನಗರವೇ ನಾಶವಾಯಿತು. ಈ ಅಣುಬಾಂಬ್ ಕಂಡು ಹಿಡಿದಿದ್ದು ಜೆ. ರಾಬರ್ಟ್​ ಆಪನ್​ಹೈಮರ್. ಅವರಿಗೂ ಈ ಬಾಂಬ್​ ದಾಳಿಗೂ ನೇರ ಸಂಬಂಧವಿಲ್ಲ. ಆದರೆ, ಅಣುಬಾಂಬ್ ಕಂಡು ಹಿಡಿದಿದ್ದು ಅವರೇ. ಹೀಗಾಗಿ ‘ಆಪನ್​ಹೈಮರ್​’ ಸಿನಿಮಾ (Oppenheimer Movie) ಮಾಡಲಾಯಿತು. ಈ ಸಿನಿಮಾದಲ್ಲಿ ರಾಬರ್ಟ್ ಆಪನ್​ಹೈಮರ್ ಮನಸ್ಸಿನ ತುಮುಲಗಳನ್ನು ತೋರಿಸಲಾಗಿದೆ. ಈ ಸಿನಿಮಾ ಈಗ ಜಪಾನ್​ನಲ್ಲಿ ರಿಲೀಸ್ ಆಗಿದೆ.

ಅಮೆರಿಕದಲ್ಲಿ ‘ಆಪನ್​ಹೈಮರ್’ ರಿಲೀಸ್ ಆಗಿ ಏಳು ತಿಂಗಳು ಕಳೆದಿದೆ. ಈ ಚಿತ್ರ ಆಸ್ಕರ್​​ನಲ್ಲಿ ಹಲವು ಪ್ರಶಸ್ತಿ ಗಳಿಸಿದೆ. ಈಗ ಸಿನಿಮಾ ಜಪಾನ್​ನಲ್ಲೂ ಬಿಡುಗಡೆ ಆಗಿದೆ. ಈ ಚಿತ್ರದ ಬಗ್ಗೆ ಹಿರೋಷಿಮಾದ ಮಾಜಿ ಮೇಯರ್ ತಕಾಶ ಹಿರೌಕಾ ಮಾತನಾಡಿದ್ದಾರೆ. ‘ಹಿರೋಷಿಮಾದ ದೃಷ್ಟಿಕೋನದಿಂದ ನೋಡುವುದಾದರೆ ಪರಮಾಣು ಶಸ್ತ್ರಾಸ್ತ್ರಗಳ ಭಯಾನಕತೆಯನ್ನು ಸಿನಿಮಾಗಳಲ್ಲಿ ಸರಿಯಾಗಿ ಚಿತ್ರಿಸಿಲ್ಲ. ಅಮೆರಿಕನ್ನರ ಜೀವ ಉಳಿಸಲು ಪರಮಾಣು ಬಾಂಬ್ ಅನ್ನು ಬಳಸಲಾಗಿದೆ ಎಂಬ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ’ ಎಂದು ಅವರು ಹೇಳಿದ್ದಾರೆ.

ಕೆಲವರು ಸಿನಿಮಾನ ಮೆಚ್ಚಿಕೊಂಡಿದ್ದಾರೆ. ‘ಟೊಕಿಯೋದಲ್ಲಿ ಸಿನಿಮಾ ನೋಡಿದೆ. ಸಿನಿಮಾ ನಿಜಕ್ಕೂ ಉತ್ತಮವಾಗಿದೆ’ ಎಂದು ಕೆಲವರು ಹೇಳಿದ್ದಾರೆ. ಕಳೆದ ವರ್ಷ ‘ಬಾರ್ಬಿ’ ಹಾಗೂ ‘ಆಪನ್​ಹೈಮರ್’ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿದ್ದವು. ಈ ವೇಳೆ ಅನೇಕರು ‘Barbenheimer’ ಹ್ಯಾಶ್​ಟ್ಯಾಗ್ ಟ್ರೆಂಡ್ ಮಾಡಿದ್ದರು. ಈ ಬಗ್ಗೆ ಜಪಾನ್​ನಲ್ಲಿ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ಕಾಶ್ಮೀರದಲ್ಲೂ ಧೂಳೆಬ್ಬಿಸಿದ ಕ್ರಿಸ್ಟೋಫರ್ ನೋಲನ್; ‘ಆಪನ್​ಹೈಮರ್’ ಟಿಕೆಟ್ ಸೋಲ್ಡ್ಔಟ್

ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್​ಹೈಮರ್’ ಸಿನಿಮಾ ಮಾಡಿದ್ದಾರೆ. ಕಿಲಿಯನ್​ ಮರ್ಫಿ ಅವರು ಆಪನ್​ಹೈಮರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶನ ಸೇರಿ ಏಳು ಅವಾರ್ಡ್​ಗಳನ್ನು ಇದು ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ