‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದ ಅಮೆರಿಕದ ನಟ ಪೌಲ್ ವಾಕರ್ ಅಪಘಾತದಲ್ಲಿ ಮೃತಪಟ್ಟಿದ್ದರು. 2013ರ ನವೆಂಬರ್ ತಿಂಗಳಲ್ಲಿ ಈ ಅಪಘಾತ ಸಂಭವಿಸಿತ್ತು. ಅವರ ಮಗಳು ಮೆಡೋ ವಾಕರ್ ಈಗ ಬಾಯ್ಫ್ರೆಂಡ್, ನಟ ಲೂಯಿಸ್ ಥಾರ್ಟನ್ ಜತೆ ವಿವಾಹವಾಗಿದ್ದಾರೆ. ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ ಕಲಾವಿದರು ಈ ಮದುವೆಯಲ್ಲಿ ಹೈಲೈಟ್ ಆಗಿದ್ದಾರೆ.
ಅಕ್ಟೋಬರ್ 22ರಂದು ಮೆಡೋ ವಾಕರ್ ಸೋಶಿಯಲ್ ಮೀಡಿಯಾದಲ್ಲಿ ಸಾಲುಸಾಲು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಮದುವೆ ವಿಚಾರವನ್ನು ಅವರು ಖಚಿತ ಪಡಿಸಿದ್ದಾರೆ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಂದ ಶುಭಾಶಯ ಹರಿದುಬಂದಿದೆ.
ಮೆಡೋ ಅವರು ಸಮುದ್ರದ ತಟದಲ್ಲಿ ಮದುವೆ ಆಗಿದ್ದಾರೆ. ಪೌಲ್ ವಾಕರ್ಗೆ ತುಂಬಾನೇ ಆಪ್ತವಾಗಿದ್ದ ನಟ ವಿನ್ ಡೀಸೆಲ್ ಅವರು ತಂದೆ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿಕೊಟ್ಟಿದ್ದಾರೆ. ಅದ್ದೂರಿಯಾಗಿ ಮದುವೆ ಆಗುವ ಆಲೋಚನೆ ಇವರದ್ದಾಗಿತ್ತು. ಆದರೆ, ಕೊವಿಡ್ ಕಾರಣದಿಂದ ಇವುಗಳಿಗೆ ಬ್ರೇಕ್ ಬಿದ್ದಿದೆ. ಹೀಗಾಗಿ, ‘ಈ ಸಾಂಕ್ರಾಮಿಕ ರೋಗವು ನಮ್ಮ ಪ್ಲ್ಯಾನ್ಗಳ ಮೇಲೆ ಪ್ರಭಾವ ಬೀರಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಪೌಲ್ ವಾಕರ್ ಮೃತಪಟ್ಟ ನಂತರದಲ್ಲಿ ಮೆಡೋ ಅವರನ್ನು ಹೆಚ್ಚು ಕಾಳಜಿಯಿಂದ ಸಾಕಿದ್ದು ವಿನ್ ಡೀಸೆಲ್. ಈ ಕಾರಣಕ್ಕೆ ಅವರನ್ನು ಗಾಡ್ಫಾದರ್ ರೀತಿಯಲ್ಲಿ ಕಾಣುತ್ತಾರೆ ಮೆಡೋ. ಹೀಗಾಗಿ, ಮದುವೆ ಸ್ಥಳಕ್ಕೆ ಅವರನ್ನು ಕರೆತಂದಿದ್ದು ಇದೇ ವಿನ್ ಡೀಸೆಲ್. ಕಳೆದ ಎರಡು ತಿಂಗಳ ಹಿಂದೆ ಮೆಡೋ ನಿಶ್ಚಿತಾರ್ಥ ಮಾಡಿಕೊಂಡ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಇದಾದ ಬೆನ್ನಲ್ಲೇ ಅವರ ಮದುವೆ ವಿಚಾರ ಹೊರ ಬಿದ್ದಿದೆ.
ನವೆಂಬರ್ 30, 2013 ರಂದು, ವಾಕರ್ ಮತ್ತು ರೋಜರ್ ರೋಡಾಸ್ ಪೋರ್ಷಾ ಕ್ಯಾರೆರಾ ಜಿಟಿಯಲ್ಲಿ ಸಾಗುತ್ತಿದ್ದರು. ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಿಟಾದ ಸಮೀಪ ಕಾರು ಎರಡು ಮರಗಳಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಕಾರು ಬೆಂಕಿಗೆ ಆಹುತಿ ಆಯಿತು. ಇಬ್ಬರ ದೇಹಗಳನ್ನು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿತ್ತು.
ಇದನ್ನೂ ಓದಿ: ‘777 ಚಾರ್ಲಿ’ ಸಿನಿಮಾ ಶೂಟಿಂಗ್ ಮುಕ್ತಾಯ; ಕುಂಬಳಕಾಯಿ ಒಡೆದ ಸಂಭ್ರಮದಲ್ಲಿ ರಕ್ಷಿತ್
ಚಿತ್ರೀಕರಣದ ವೇಳೆ ಶೂಟ್ ಮಾಡಿದ ನಟ; ಛಾಯಾಗ್ರಾಹಕಿ ನಿಧನ; ನಿರ್ದೇಶಕನಿಗೆ ಗಂಭೀರ ಗಾಯ
Published On - 5:51 pm, Sat, 23 October 21