ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಪಾಪ್ ಸಿಂಗರ್ ನಿಕ್ ಜೋನಸ್ನ ಮದುವೆ ಆದ ಬಳಿಕ ಅಮೆರಿಕದಲ್ಲಿ ಸೆಟ್ಲ್ ಆಗಿದ್ದಾರೆ. ಅವರು ಅಲ್ಲಿ ಹೋಟೆಲ್ ಉದ್ಯಮವನ್ನೂ ಆರಂಭಿಸಿದ್ದರು. ಪಾರ್ಟನರ್ ಜೊತೆ ಹೊಂದಾಣಿಕೆ ಆಗದ ಕಾರಣ ಅವರು ಉದ್ಯಮದಿಂದ ಹೊರ ಬಂದರು. ಈಗ ಅವರ ಸಂಪೂರ್ಣ ಗಮನ ನಟನೆಯ ಮೇಲಿದೆ. ಅವರು ಮುಂಬೈ ಜೊತೆಯ ನಂಟನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಉದ್ದೇಶ ಇಟ್ಟುಕೊಂಡಿದ್ದಾರಾ ಎನ್ನುವ ಅನುಮಾನ ಮೂಡುತ್ತಿದೆ.
ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡವರು. ಅವರು ಮುಂಬೈನಲ್ಲೇ ಸೆಟಲ್ ಆಗಿದ್ದರು. ಈ ಸಂದರ್ಭದಲ್ಲಿ ಅವರು ಮುಂಬೈನಲ್ಲಿ ಹಲವು ಪ್ರಾಪರ್ಟಿಗಳನ್ನು ಖರೀದಿ ಮಾಡಿದ್ದರು. ಇದನ್ನು ಈಗ ಒಂದೊಂದಾಗಿಯೇ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ ಕೆಲವು ಪ್ರಾಪರ್ಟಿಗಳನ್ನು ಪ್ರಿಯಾಂಕಾ ಮಾರಿದ್ದರು. ಈಗ ಅವರು ಮತ್ತೆರಡು ಪೆಂಟ್ಹೌಸ್ಗಳನ್ನು ಮಾರಿದ್ದಾರೆ.
ದೀಪಾವಳಿ ಆಚರಣೆಗೆ ಪ್ರಿಯಾಂಕಾ ಅವರು ಮುಂಬೈಗೆ ಬಂದಿದ್ದರು. ಈ ವೇಳೆ ಮುಂಬೈನ ಅಂದೇರಿಯಲ್ಲಿರುವ ಎರಡು ಪೆಂಟ್ಹೌಸ್ಗಳನ್ನು ನಿರ್ಮಾಪಕ, ನಿರ್ದೇಶಕ ಅಭಿಷೇಕ್ ಚೌಬೆಗೆ ಮಾರಾಟ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರಿಗೆ 6 ಕೋಟಿ ರೂಪಾಯಿ ಸಿಕ್ಕಿದೆ ಎಂದು ವರದಿ ಆಗಿದೆ. ಈ ಮೂಲಕ ಪ್ರಿಯಾಂಕಾ ಒಂದೊಂದೇ ಮನೆಯನ್ನು ಮಾರಾಟ ಮಾಡುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಓಶಿವಾರದಲ್ಲಿರು ಪೆಂಟ್ಹೌಸ್ನ 2.25 ಕೋಟಿ ರೂಪಾಯಿಗೆ ಹಾಗೂ ಎರಡನೇ ಪೆಂಟ್ಹೌಸ್ನ 3.75 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಎರಡು ಪ್ರಾಪರ್ಟಿಗಳಿಂದ 36 ಲಕ್ಷ ರೂಪಾಯಿ ಸ್ಟಾಂಪ್ ಡ್ಯೂಟಿನ ಕಟ್ಟಲಾಗಿದೆ. ಅಕ್ಟೋಬರ್ 23 ಹಾಗೂ 25ರಂದು ಈ ವ್ಯವಹಾರ ನಡೆದಿದೆ.
ಇದನ್ನೂ ಓದಿ: ‘ಗ್ಲೋಬಲ್ ಸ್ಟಾರ್’ ಪ್ರಿಯಾಂಕಾ ಚೋಪ್ರಾಗೆ ಟಾಂಗ್ ಕೊಟ್ಟ ದೀಪಿಕಾ ಪಡುಕೋಣೆ
ಪ್ರಿಯಾಂಕಾ ಚೋಪ್ರಾ ಅವರು ಇಂಗ್ಲಿಷ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ‘ಸಿಟಾಡೆಲ್’ ವೆಬ್ ಸೀರಿಸ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈಗ ಎರಡನೇ ಸೀಸನ್ ಶೂಟಿಂಗ್ನಲ್ಲಿ ಅವರು ಬ್ಯುಸಿ ಇದ್ದಾರೆ. ಇನ್ನೂ ಕೆಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಹಿಂದಿ ಸಿನಿಮಾ ಒಂದರಲ್ಲಿ ಅವರು ನಟಿಸಬೇಕಿತ್ತು. ಆದರೆ, ಅವರು ಚಿತ್ರದಿಂದ ಹೊರ ನಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ