Oscar Members: ಜೂ. ಎನ್​ಟಿಆರ್​, ರಾಮ್​ ಚರಣ್​ ಮತ್ತೊಂದು ಸಾಧನೆ; ಸಿಕ್ತು ಆಸ್ಕರ್​ ಸದಸ್ಯತ್ವ

|

Updated on: Jun 29, 2023 | 11:24 AM

ಆಸ್ಕರ್​ ಸಮಿತಿಯಲ್ಲಿ 10 ಸಾವಿರ ಸದಸ್ಯರು ಇದ್ದಾರೆ. ಪ್ರಪಂಚದ ಬೇರೆ ಬೇರೆ ದೇಶಗಳ ವಿವಿಧ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ಈ ಸಮಿತಿಯಲ್ಲಿದ್ದಾರೆ.

Oscar Members: ಜೂ. ಎನ್​ಟಿಆರ್​, ರಾಮ್​ ಚರಣ್​ ಮತ್ತೊಂದು ಸಾಧನೆ; ಸಿಕ್ತು ಆಸ್ಕರ್​ ಸದಸ್ಯತ್ವ
ಜೂ. ಎನ್​ಟಿಆರ್​, ಮಣಿರತ್ನಂ, ರಾಮ್​ ಚರಣ್​, ಕರಣ್​ ಜೋಹರ್​
Follow us on

ಭಾರತೀಯ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ. ಆಸ್ಕರ್​ ಪಡೆಯವ ಹಂತಕ್ಕೆ ಇಲ್ಲಿನ ಸಿನಿಮಾಗಳು ಶೈನ್​ ಆಗತ್ತಿವೆ. ಅಲ್ಲದೇ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ವಿಶ್ವ ಮಟ್ಟದ ವೇದಿಕೆಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಇಲ್ಲಿದೆ. ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ (Academy Awards) ಕಮಿಟಿಯ ಸದಸ್ಯತ್ವವನ್ನು ಭಾರತದ ಕೆಲವರಿಗೆ ನೀಡಲಾಗುತ್ತಿದೆ. ‘ಆರ್​ಆರ್​ಆರ್​’ ಸಿನಿಮಾದಿಂದ ಆಸ್ಕರ್​ ವೇದಿಕೆಯಲ್ಲಿ ಮಿಂಚಿದ ಜೂನಿಯರ್​ ಎನ್​ಟಿಆರ್​ (Jr NTR), ರಾಮ್​ ಚರಣ್​ ಸೇರಿದಂತೆ ಹಲವರಿಗೆ ಈ ಸದಸ್ಯತ್ವ ಸಿಗುತ್ತಿದೆ. ನಿರ್ದೇಶಕರಾದ ಕರಣ್​ ಜೋಹರ್ (Karan Johar)​, ಮಣಿರತ್ನಂ ಅವರಿಗೂ ಈ ಆಫರ್​ ನೀಡಲಾಗಿದೆ. ಇದು ಅವರ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

ಈಗಾಗಲೇ ಆಸ್ಕರ್​ ಸಮಿತಿಯಲ್ಲಿ 10 ಸಾವಿರ ಸದಸ್ಯರು ಇದ್ದಾರೆ. ಪ್ರಪಂಚದ ಬೇರೆ ಬೇರೆ ದೇಶಗಳ ವಿವಿಧ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ಈ ಸಮಿತಿಯಲ್ಲಿದ್ದಾರೆ. ಪ್ರತಿ ವರ್ಷ ಆಸ್ಕರ್​ ಪ್ರಶಸ್ತಿಗೆ ನಾಮಿನೇಟ್​ ಆಗುವ ಸಿನಿಮಾ ಮತ್ತು ಸೆಲೆಬ್ರಿಟಿಗಳಿಗೆ ಈ ಸದಸ್ಯರು ವೋಟ್​ ಮಾಡುತ್ತಾರೆ. ಆ ಮೂಲಕ ಯಾರಿಗೆ ಪ್ರಶಸ್ತಿ ನೀಡಬೇಕು ಎಂಬುದು ನಿರ್ಧಾರ ಆಗುತ್ತದೆ. ಆಸ್ಕರ್​ ಸದಸ್ಯತ್ವ ಇರುವ ಕೆಲವೇ ಭಾರತೀಯರ ಪಟ್ಟಿಗೆ ಈಗ ರಾಮ್​ ಚರಣ್​, ಕರಣ್ ಜೋಹರ್​, ಜೂನಿಯರ್ ಎನ್​ಟಿಆರ್​ ಮುಂತಾದವರ ಹೆಸರು ಸೇರ್ಪಡೆ ಆಗುತ್ತಿರುವುದು ವಿಶೇಷ.

ಇದನ್ನೂ ಓದಿ: Ram Charan: ನಿಜಕ್ಕೂ ಆಸ್ಕರ್​ ಸಮಾರಂಭದಲ್ಲಿ ನಡೆದಿದ್ದು ಏನು? ಬಹುದಿನಗಳ ಬಳಿಕ ಬಾಯ್ಬಿಟ್ಟ ರಾಮ್ ಚರಣ್​

‘ಆರ್​ಆರ್​ಆರ್​’ ಸಿನಿಮಾದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮತ್ತು ಸಾಹಿತ್ಯ ಬರೆದ ಚಂದ್ರ ಬೋಸ್​ ಅವರು ಆಸ್ಕರ್​ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ಅವರಿಗೂ ಕೂಡ ಆಸ್ಕರ್​ ಸದಸ್ಯತ್ವ ಸ್ವೀಕರಿಸಲು ಆಹ್ವಾನ ನೀಡಲಾಗಿದೆ. ಕಾಸ್ಟಿಂಗ್​ ನಿರ್ದೇಶಕ ಕೆಕೆ ಸೇಂಥಿಲ್​ ಕುಮಾರ್​, ಸಾಕ್ಷ್ಯಚಿತ್ರಗಳ ನಿರ್ಮಾಪಕ ಶೌನಕ್​ ಸೇನ್​ ಅವರಿಗೂ ಸದಸ್ಯತ್ವ ಸಿಗುತ್ತಿದೆ.

ಇದನ್ನೂ ಓದಿ: RRR ತಂಡ 60 ಲಕ್ಷ ರೂ. ಕೊಟ್ಟು ಆಸ್ಕರ್​ ಸಮಾರಂಭದ ಟಿಕೆಟ್​ ಪಡೆಯಿತಾ? ಬಯಲಾಯ್ತು ಬೇರೆ ಸತ್ಯ

‘ವಿವಿಧ ದೇಶಗಳ ತಂತ್ರಜ್ಞರು ಮತ್ತು ಕಲಾವಿದರಿಗೆ ಅಕಾಡೆಮಿ ಸದಸ್ಯತ್ವ ನೀಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ’ ಆಸ್ಕರ್​ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತೀಯ ಸಿನಿಮಾಗಳಿಗೆ ಆಸ್ಕರ್​ ಸಿಗುವುದು ಕಷ್ಟ ಎಂಬ ಮಾತು ಇತ್ತು. ಆದರೆ ಆ ಕಷ್ಟದ ಕೆಲಸವನ್ನು ಮಾಡಿ ತೋರಿಸಿದ್ದು ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು. ಅಲ್ಲದೇ ಭಾರತದ ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಡಾಕ್ಯುಮೆಂಟರಿಗೂ ಈ ವರ್ಷ ಆಸ್ಕರ್​ ಪ್ರಶಸ್ತಿ ಸಿಕ್ಕಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.