ಟಾಮ್ ಹಾಲೆಂಡ್ (Tom Holland) ನಟನೆಯ ‘ಸ್ಪೈಡರ್ ಮ್ಯಾನ್’ (Spider Man) ಸರಣಿಯ ಹೊಸ ಸಿನಿಮಾ ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ (Spider-Man: No Way Home) ಡಿಸೆಂಬರ್ 16ರಂದು ಬಿಡುಗಡೆಯಾಗಿ ಬಾಕ್ಸ್ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಈಗಾಗಲೇ ಭಾರತದಲ್ಲಿ 263 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾವನ್ನು ಶೀಘ್ರದಲ್ಲೇ ಒಟಿಟಿಯಲ್ಲಿ ನೋಡಬೇಕು ಎಂದು ಕಾದು ಕೂತಿದ್ದವರಿಗೆ ನಿರಾಸೆ ಆಗಿದೆ. ಒಟಿಟಿ ರಿಲೀಸ್ ಬಗ್ಗೆ ಚಿತ್ರತಂಡದವರು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಚಿತ್ರ ಈ ಸರಣಿಯ ಫೇವರಿಟ್ ಸಿನಿಮಾ ಎಂದು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿ, ಈ ಸಿನಿಮಾ ಈವರೆಗೆ 263 ಕೋಟಿ ರೂಪಾಯಿ ಬಾಚಿಕೊಂಡಿದೆ. ಈಗ ಕೊವಿಡ್ ಹೆಚ್ಚುತ್ತಿರುವ ಕಾರಣ ಯಾರೂ ಅಷ್ಟಾಗಿ ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ದೇಶದ ಬಹುತೇಕ ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆ ನಿಯಮ ಜಾರಿಗೆ ಬಂದಿದೆ. ಈ ಕಾರಣಕ್ಕೆ ಈ ಸಿನಿಮಾ ಶೀಘ್ರವೇ ಒಟಿಟಿಯಲ್ಲಿ ಬರಬಹುದು ಎಂದು ಭಾವಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ.
ಮುಂದಿನ ಎರಡು ತಿಂಗಳಕಾಲ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಚಿತ್ರ ನೋಡೋಕೆ ಈಗಲೂ ಜನರು ಬರುತ್ತಿದ್ದಾರೆ. ಹೀಗಾಗಿ, ಮಲ್ಟಿಪ್ಲೆಕ್ಸ್ಗಳು ಈ ಸಿನಿಮಾವನ್ನು ಮುಂದಿನ ಎರಡು ತಿಂಗಳು ಪ್ರದರ್ಶನ ಮಾಡಲು ನಿರ್ಧರಿಸಿವೆ. ಆ ಬಳಿಕವೇ ಚಿತ್ರ ಒಟಿಟಿಗೆ ಕಾಲಿಡಲಿದೆ. ಹೀಗಾಗಿ, ಇನ್ನೂ ಕೆಲವು ಸಮಯ ಈ ಚಿತ್ರಕ್ಕಾಗಿ ಕಾಯಬೇಕು.
ವಿಶ್ವಾದ್ಯಂತ ಮತ್ತೆ ಕೊವಿಡ್ ಭಯ ಕಾಡುತ್ತಿದೆ. ನಿಧಾನವಾಗಿ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸಾಕಷ್ಟು ಕಡೆಗಳಲ್ಲಿ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. ಕೆಲ ರಾಷ್ಟ್ರಗಳಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ. ಈ ಎಲ್ಲಾ ಕಾರಣಗಳಿಂದ ಈ ಚಿತ್ರಕ್ಕೆ ಕೊಂಚ ಹಿನ್ನಡೆ ಆಗಿದೆ. ಆದಾಗ್ಯೂ, ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ಈ ಚಿತ್ರ ವಿಶ್ವಾದ್ಯಂತ 10,361 ಕೋಟಿ ಕಲೆಕ್ಷನ್ ಮಾಡಿದೆ.
Yash: ಯಶ್ ಇಂಗ್ಲಿಷ್ನಲ್ಲಿ ಟ್ವೀಟ್ ಮಾಡಿದ್ದಕ್ಕೆ ಟ್ರೋಲ್; ಸರಿಯಾಗಿ ಉತ್ತರ ಕೊಟ್ಟ ಅಭಿಮಾನಿಗಳು