AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಬಾಕ್ಸಾಫೀಸ್​​ನಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ‘ಸ್ಪೈಡರ್​ಮ್ಯಾನ್ ನೋ ವೇ ಹೋಮ್’; ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು ಗೊತ್ತಾ?

Spider Man No Way Home Box Office Collection: ‘ಸ್ಪೈಡರ್​ಮ್ಯಾನ್ ನೋ ವೇ ಹೋಮ್’ ಚಿತ್ರ ಭಾರತೀಯ ಬಾಕ್ಸಾಫೀಸ್​ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಏನದು? ಇಲ್ಲಿದೆ ಮಾಹಿತಿ.

ಭಾರತೀಯ ಬಾಕ್ಸಾಫೀಸ್​​ನಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ‘ಸ್ಪೈಡರ್​ಮ್ಯಾನ್ ನೋ ವೇ ಹೋಮ್’; ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು ಗೊತ್ತಾ?
ಸ್ಪೈಡರ್​ ಮ್ಯಾನ್​
TV9 Web
| Updated By: shivaprasad.hs|

Updated on:Jan 03, 2022 | 2:03 PM

Share

ಟಾಮ್ ಹಾಲಂಡ್ ನಟನೆಯ ‘ಸ್ಪೈಡರ್​ಮ್ಯಾನ್ ನೋ ವೇ ಹೋಮ್’ ಚಿತ್ರ ಸದ್ಯ ಜಾಗತಿಕ ಬಾಕ್ಸಾಫೀಸ್ ಲೆಕ್ಕಾಚಾರದಲ್ಲಿ ದಾಖಲೆಯ ಕಲೆಕ್ಷನ್ ಮೂಲಕ ಮುನ್ನುಗ್ಗುತ್ತಿದೆ. ಡಿಸೆಂಬರ್ 16ರಂದು ಬಿಡುಗಡೆಯಾದ ಈ ಚಿತ್ರ ಭಾರತೀಯ ಬಾಕ್ಸಾಫೀಸ್​ನಲ್ಲೂ ಉತ್ತಮ ಗಳಿಕೆ ಮಾಡುತ್ತಿದೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅಭಿನಯದ ‘83’, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ: ದಿ ರೈಸ್’ ಚಿತ್ರದ ತೀವ್ರ ಪೈಪೋಟಿಯ ನಡುವೆಯೂ ‘ಸ್ಪೈಡರ್​ಮ್ಯಾನ್..’ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಬಾಲಿವುಡ್​ನಲ್ಲಿ ಸ್ಟಾರ್ ನಟರ ಚಿತ್ರಗಳೇ ಮಕಾಡೆ ಮಲಗುತ್ತಿವೆ. ಅದರಲ್ಲೂ ಕೊರೊನಾ ಎರಡನೇ ಅಲೆಯ ನಂತರ ಕಮರ್ಷಿಯಲ್ ಹಿಟ್ ಆದ ಚಿತ್ರಗಳು ಕೆಲವೇ ಕೆಲವು. ಅವೆಲ್ಲವುಗಳ ಗಳಿಕೆಯನ್ನೂ ಮೀರಿಸಿದ ‘ಸ್ಪೈಟರ್​ಮ್ಯಾನ್​..’ ಪಾರಮ್ಯ ಮೆರೆದಿದ್ದಾನೆ.

ಭಾರತೀಯ ಬಾಕ್ಸಾಫೀಸ್​ ಗಳಿಕೆ ಎಷ್ಟು? ಭಾರತೀಯ ಬಾಕ್ಸಾಫೀಸ್​ನಲ್ಲಿ ‘ಸ್ಪೈಡರ್​ಮ್ಯಾನ್ ನೋ ವೇ ಹೋಮ್’ ಚಿತ್ರವು ₹ 200 ಕೋಟಿ ಕ್ಲಬ್ ಸೇರಿದೆ. ಕೊರೊನಾ ಮುನ್ನೆಚ್ಚರಿಕಾ ನಿಯಮಗಳಿಂದ ಚಿತ್ರಮಂದಿರಗಳ ಸಾಮರ್ಥ್ಯದ ಮೇಲೆ ನಿರ್ಬಂಧ ಹೇರಲಾಗುತ್ತಿದ್ದರೂ, ಚಿತ್ರ 200 ಕೋಟಿ ಕ್ಲಬ್ ಸೇರಿದೆ. ಬಾಕ್ಸಾಫೀಸ್ ತಜ್ಞ ತರಣ್ ಆದರ್ಶ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಚಿತ್ರ ಈ ವರೆಗೆ ಭಾರತೀಯ ಬಾಕ್ಸಾಫೀಸ್​ನಲ್ಲಿ ₹ 202.34 ಕೋಟಿ ಕಮಾಯಿ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ಹೊಸ ವರ್ಷ ಹಾಗೂ ನಂತರದ ರಜಾ ದಿನಗಳು ಚಿತ್ರದ ಗಳಿಕೆಗೆ ಪೂರಕವಾಗಿದೆ. ಶನಿವಾರ ಹಾಘೂ ಭಾನುವಾರ ಚಿತ್ರ ತಲಾ 4 ಕೋಟಿ ರೂ ಗಳಿಸಿದೆ. ಈ ಮೂಲಕ 200 ಕೋಟಿ ಕ್ಲಬ್ ಸೇರಿದೆ ಎಂದು ತರಣ್ ಮಾಹಿತಿ ನೀಡಿದ್ದಾರೆ.

ತರಣ್ ಆದರ್ಶ್ ಟ್ವೀಟ್ ಇಲ್ಲಿದೆ:

ಭಾರತದಲ್ಲಿ ‘ಸ್ಪೈಡರ್​ಮ್ಯಾನ್ ನೋ ವೇ ಹೋಮ್’ ಹೊರತುಪಡಿಸಿದರೆ ಅತ್ಯುತ್ತಮ ಕಲೆಕ್ಷನ್ ಮಾಡಿದ ಚಿತ್ರಗಳು ಕೇವಲ ಎರಡು. ‘ಅವೆಂಜರ್ಸ್ ಎಂಡ್​ಗೇಮ್’ ಹಾಗೂ ‘ಅಮೆಂಜರ್ಸ್ ಇನ್ಫಿನಿಟ್ ವಾರ್’ ಬಾಕ್ಸಾಫೀಸ್​​ನಲ್ಲಿ ಉತ್ತಮ ಮೊತ್ತ ಕಲೆಹಾಕಿದ್ದವು.

ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಸೃಷ್ಟಿಸುತ್ತಿರುವ ‘ಸ್ಪೈಡರ್​ಮ್ಯಾನ್…’: ಒಟ್ಟಾರೆ ಕಲೆಕ್ಷನ್ ಎಷ್ಟು? ‘ಸ್ಪೈಡರ್​ಮ್ಯಾನ್ ನೋ ವೇ ಹೋಮ್’ ಚಿತ್ರ ಭಾರತೀಯ ಗಲ್ಲಾಪೆಟ್ಟಿಗೆಯೊಂದಿಗೆ ವಿಶ್ವದಾದ್ಯಂತ ಬಾಕ್ಸಾಫೀಸ್ ಕೂಡ ದೋಚಿದೆ. ಹೌದು. ಚಿತ್ರದ ಕಲೆಕ್ಷನ್ ಇದುವರೆಗೆ 1.5 ಬಿಲಿಯನ್ ಡಾಲರ್ ಸನಿಹ ತಲುಪಿದೆ ಅರ್ಥಾತ್ ಬರೋಬ್ಬರಿ 11 ಸಾವಿರ ಕೋಟಿ ದಾಟಿದೆ! ಅಚ್ಚರಿಯ ವಿಚಾರವೆಂದರೆ ಚೀನಾ ಹಾಗೂ ಜಪಾನ್​ನಲ್ಲಿ ಇನ್ನಷ್ಟೇ ಚಿತ್ರ ತೆರೆಕಾಣಬೇಕಿದೆ. ಒಟ್ಟಾರೆ ಕೊರೊನಾ, ಒಮಿಕ್ರಾನ್ ಮೊದಲಾದ ಹಲವು ಅಡೆತಡೆಗಳ ನಡುವೆಯೂ ಚಿತ್ರ ಗಳಿಕೆಯಲ್ಲಿ ಮುನ್ನುಗ್ಗುತ್ತಿದ್ದು, ಗಳಿಕೆ ಮತ್ತಷ್ಟು ಏರಲಿದೆ.

ಇದನ್ನೂ ಓದಿ:

ಅಯ್ಯಪ್ಪ ಸ್ವಾಮಿ ಭಕ್ತರಿಂದ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪೂಜೆ; ಇಲ್ಲಿದೆ ವಿಡಿಯೋ

Published On - 1:53 pm, Mon, 3 January 22