Yash: ಯಶ್ ಇಂಗ್ಲಿಷ್ನಲ್ಲಿ ಟ್ವೀಟ್ ಮಾಡಿದ್ದಕ್ಕೆ ಟ್ರೋಲ್; ಸರಿಯಾಗಿ ಉತ್ತರ ಕೊಟ್ಟ ಅಭಿಮಾನಿಗಳು
ಆರಂಭದಲ್ಲಿ ಯಶ್ಗೆ ಕರ್ನಾಟಕದಲ್ಲಿ ಮಾತ್ರ ಅಭಿಮಾನಿಗಳು ಇದ್ದರು. ಈ ಕಾರಣಕ್ಕೆ ಅವರು ಕನ್ನಡದಲ್ಲಿ ಮಾತ್ರ ಟ್ವೀಟ್ ಮಾಡುತ್ತಿದ್ದರು. ಆದರೆ, ಈಗ ಹಾಗಲ್ಲ. ಅಭಿಮಾನಿ ಬಳಗದಲ್ಲಿ ಹೊರ ರಾಜ್ಯದವರೂ ಇದ್ದಾರೆ. ಹೇಳುವ ವಿಚಾರ ಎಲ್ಲರಿಗೂ ಅರ್ಥ ಆಗಬೇಕು ಎನ್ನುವ ಕಾರಣಕ್ಕೆ ಯಶ್ ಇಂಗ್ಲಿಷ್ನಲ್ಲಿ ಟ್ವೀಟ್ ಮಾಡುತ್ತಾರೆ. ಹ
ಸ್ಯಾಂಡಲ್ವುಡ್ನ (Sandalwood) ಎಲ್ಲಾ ಸ್ಟಾರ್ ನಟರಿಗೂ ಕನ್ನಡದ ಮೇಲೆ ವಿಶೇಷವಾದ ಪ್ರೀತಿ ಇದೆ. ಕನ್ನಡದ ಪರ ಹೋರಾಟಗಳಾದಾಗ, ನೀರಿಗಾಗಿ ಆಂದೋಲನಗಳು ನಡೆದಾಗ ಅದಕ್ಕೆ ಕೈ ಜೋಡಿಸಿದ ಉದಾಹರಣೆ ಸಾಕಷ್ಟಿದೆ. ಆದರೆ, ಕೆಲವೊಮ್ಮೆ ಅವರು ಸೋಶಿಯಲ್ ಮೀಡಿಯಾದಲ್ಲಿ ಇಂಗ್ಲಿಷ್ ಬಳಕೆ ಮಾಡಿದರೆ ತೀವ್ರ ಟೀಕೆಗೆ ಗುರಿಯಾಗುತ್ತಾರೆ. ಕನ್ನಡ ಬಳಕೆ ಮಾಡದೆ, ಇಂಗ್ಲಿಷ್ನಲ್ಲಿ ಟ್ವೀಟ್ ಮಾಡೋದು ಏಕೆ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಾರೆ. ಈಗ ಇದೇ ವಿಚಾರ ಇಟ್ಟುಕೊಂಡು ಕೆಲವರು ಯಶ್ (Yash) ಅವರ ಬಗ್ಗೆ ಕೊಂಕು ನುಡಿದಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ.
‘ಕೆಜಿಎಫ್’ ತೆರೆಕಂಡ ನಂತರದಲ್ಲಿ ಯಶ್ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡರು. ಅವರಿಗೆ ಬಾಲಿವುಡ್, ಟಾಲಿವುಡ್ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಹೊರ ರಾಷ್ಟ್ರದಲ್ಲೂ ಯಶ್ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈಗ ಅವರ ನಟನೆಯ ‘ಕೆಜಿಎಫ್ 2’ ತೆರೆಗೆ ಬರೋಕೆ ರೆಡಿ ಆಗಿದ್ದು, ಇದರ ಬಗ್ಗೆಯೂ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಕಾರಣಕ್ಕೆ ಯಶ್ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.
View this post on Instagram
ಆರಂಭದಲ್ಲಿ ಯಶ್ಗೆ ಕರ್ನಾಟಕದಲ್ಲಿ ಮಾತ್ರ ಅಭಿಮಾನಿಗಳು ಇದ್ದರು. ಈ ಕಾರಣಕ್ಕೆ ಅವರು ಕನ್ನಡದಲ್ಲಿ ಮಾತ್ರ ಟ್ವೀಟ್ ಮಾಡುತ್ತಿದ್ದರು. ಆದರೆ, ಈಗ ಹಾಗಲ್ಲ. ಅಭಿಮಾನಿ ಬಳಗದಲ್ಲಿ ಹೊರ ರಾಜ್ಯದವರೂ ಇದ್ದಾರೆ. ಹೇಳುವ ವಿಚಾರ ಎಲ್ಲರಿಗೂ ಅರ್ಥ ಆಗಬೇಕು ಎನ್ನುವ ಕಾರಣಕ್ಕೆ ಯಶ್ ಇಂಗ್ಲಿಷ್ನಲ್ಲಿ ಟ್ವೀಟ್ ಮಾಡುತ್ತಾರೆ. ಹಲವು ವಿಚಾರಗಳನ್ನೂ ಅವರು ಆಂಗ್ಲ ಭಾಷೆ ಬಳಸಿಯೇ ಹೇಳುತ್ತಾರೆ. ಈ ಮೂಲಕ ಹೊರ ರಾಜ್ಯ ಹಾಗೂ ಹೊರ ದೇಶದ ಫ್ಯಾನ್ಸ್ ಜತೆಯೂ ಅವರು ಸಂಪರ್ಕ ಸಾಧಿಸುತ್ತಿದ್ದಾರೆ. ಆದರೆ, ಈ ವಿಚಾರ ಕೆಲವರ ಕಣ್ಣು ಕುಕ್ಕಿದೆ.
ಜನ್ಮದಿನದ ಅಂಗವಾಗಿ ಯಶ್ ಇಂಗ್ಲಿಷ್ನಲ್ಲಿ ಟ್ವೀಟ್ ಮಾಡಿದ್ದರು. ಇದನ್ನು ಟೀಕಿಸಲಾಗಿದೆ. ‘ಬೆಳೆಯುವಾಗ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಇರಲಿ, ರಾಜ್, ವಿಷ್ಣು, ಅಂಬಿ ಅಂತಹ ದಿಗ್ಗಜರ ಹುಟ್ಟುಹಬ್ಬ ಇರಲಿ. ಮರೆಯದೇ ಶುಭಕೋರುತ್ತಿದ್ದ ಹುಡುಗ. ಕನ್ನಡದಲ್ಲೇ ಪೋಸ್ಟ್ ಹಾಕುತ್ತಿದ್ದ ಹುಡುಗ. ಇತರ ನಟರಿಗೆ ಸಾಕಷ್ಟು ಗೌರವ ಕೊಡುತ್ತಿದ್ದ ಹುಡುಗ. ‘ಕೆಜಿಎಫ್’ ನಂತರ ಕನ್ನಡ ರಾಜ್ಯೋತ್ಸವ, ರಾಜ್, ವಿಷ್ಣು ಅಂಬಿ ಹುಟ್ಟುಹಬ್ಬ ಮರೆತ ಹಾಗೂ ಯಾವುದೇ ಕನ್ನಡ ಪರ ಧ್ವನಿ ಎತ್ತದ ಹುಡುಗ. ‘ಕೆಜಿಎಫ್’ ನಂತರ ಇತರ ನಟರಿಗೆ ಮೊದಲಿನಂತೆ ಗೌರವ ಕೊಡದ ಹುಡುಗ. ಪೋಸ್ಟ್ಗಳಲ್ಲಿ ಕನ್ನಡವೂ ಮಾಯ’ ಎಂದು ಕೆಲವರು ಬರೆದುಕೊಂಡಿದ್ದರು.
View this post on Instagram
ಇದಕ್ಕೆ ಟ್ರೋಲ್ ಪೇಜ್ಗಳು, ಯಶ್ ಅಭಿಮಾನಿಗಳು ಉತ್ತರ ನೀಡಿದ್ದಾರೆ. ‘ಎಲ್ಲಾ ಕಡೆ ಈ ಪೋಸ್ಟ್ ಟ್ರೋಲ್ ಆಗುತ್ತಿದೆ. ಆದರೆ, ಯಶ್ ಅವರೇ ಅಲ್ವಾ ಇಡೀ ದೇಶವು ನಮ್ಮ ಇಂಡಸ್ಟ್ರಿ ಕಡೆ ತಿರುಗಿ ನೋಡೋ ಹಾಗೆ ಮಾಡಿದ್ದು?’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, ‘ಹೊರ ರಾಜ್ಯದವರಿಗೂ ಅರ್ಥವಾಗಬೇಕು ಎಂದರೆ ಯಶ್ ಇಂಗ್ಲಿಷ್ನಲ್ಲೇ ಟ್ವೀಟ್ ಮಾಡಬೇಕು’ ಎಂದಿದ್ದಾರೆ. ‘ಯಶ್ ಮೊದಲಿನಷ್ಟೇ ನಟರಿಗೆ ಗೌರವ ಕೊಡುತ್ತಿದ್ದಾರೆ’ ಎಂದು ಹಲವರು ಯಶ್ ಪರ ಬ್ಯಾಟ್ ಬೀಸಿದ್ದಾರೆ .
ಇದನ್ನೂ ಓದಿ: Yash Birthday: ಯಶ್ ಜನ್ಮದಿನಕ್ಕೆ ಆಯ್ರಾ, ಯಥರ್ವ್ ಕೊಟ್ಟ ಗಿಫ್ಟ್ ಏನು? ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
Yash Birthday: ಯಶ್ ಬರ್ತ್ಡೇಗೆ ವಿಶೇಷ ಕೇಕ್; ಗನ್ ಹಿಡಿದು ನಿಂತ ರಾಕಿಂಗ್ ಸ್ಟಾರ್