Oppenheimer: ಬಿಡುಗಡೆಗೂ ಮುನ್ನ ‘ಆಪನ್​ಹೈಮರ್​’ ಸಿನಿಮಾ ಬಗ್ಗೆ ಹೆಚ್ಚಿದ ಕ್ರೇಜ್​; ಇಲ್ಲಿವೆ ಪ್ರಮುಖ ಕಾರಣಗಳು

|

Updated on: Jul 19, 2023 | 3:28 PM

Christopher Nolan: ಪ್ಯಾರಿಸ್​ನಲ್ಲಿ ‘ಆಪರ್​ಹೈಮರ್​’ ಸಿನಿಮಾದ ಪ್ರೀಮಿಯರ್​ ಶೋ ಮಾಡಲಾಗಿದೆ. ಅನೇಕ ಸೆಲೆಬ್ರಿಟಿಗಳು ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ವಿಮರ್ಶಕರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Oppenheimer: ಬಿಡುಗಡೆಗೂ ಮುನ್ನ ‘ಆಪನ್​ಹೈಮರ್​’ ಸಿನಿಮಾ ಬಗ್ಗೆ ಹೆಚ್ಚಿದ ಕ್ರೇಜ್​; ಇಲ್ಲಿವೆ ಪ್ರಮುಖ ಕಾರಣಗಳು
ಕಿಲಿಯನ್​ ಮರ್ಫಿ
Follow us on

ಹಾಲಿವುಡ್​ (Hollywood) ಸಿನಿಮಾಗಳಿಗೆ ವಿಶ್ವಾದ್ಯಂತ ಮಾರುಕಟ್ಟೆ ಇದೆ. ಕಂಟೆಂಟ್​ ಚೆನ್ನಾಗಿದ್ದರೆ ಖಂಡಿತವಾಗಿತೂ ಈ ಸಿನಿಮಾಗಳು ಭಾರತದಲ್ಲಿ ಭರ್ಜರಿ ಕಲೆಕ್ಷನ್​ ಮಾಡುತ್ತವೆ. ಈಗ ‘ಆಪನ್​ಹೈಮರ್​’ ಸಿನಿಮಾ (Oppenheimer Movie) ಕೂಡ ಸಖತ್​ ಲಾಭ ಮಾಡುವ ಸೂಚನೆ ಸಿಕ್ಕಿದೆ. ಜುಲೈ 21ರಂದು ಈ ಸಿನಿಮಾ ಸಾವಿರಾರು ಪರದೆಗಳಲ್ಲಿ ರಿಲೀಸ್​ ಆಗಲಿದೆ. ಕ್ರಿಸ್ಟೋಫರ್​ ನೋಲನ್​ (Christopher Nolan) ಅವರು ನಿರ್ದೇಶನ ಮಾಡಿದ್ದು, ಈಗಾಗಲೇ ಟ್ರೇಲರ್​ ಧೂಳೆಬ್ಬಿಸಿದೆ. ನೈಜ ಘಟನೆ ಆಧಾರಿತ ಈ ಸಿನಿಮಾವನ್ನು ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾರತದಲ್ಲಿ ಸಿನಿಪ್ರಿಯರು ಮುಗಿಬಿದ್ದು ಟಿಕೆಟ್​ ಬುಕ್​ ಮಾಡುತ್ತಿದ್ದಾರೆ. ‘ಆಪನ್​ಹೈಮರ್​’ ಚಿತ್ರದ ಮೇಲೆ ಜನರಿಗೆ ಈ ಪರಿ ಕ್ರೇಜ್​ ಹೆಚ್ಚಲು ಒಂದಷ್ಟು ಕಾರಣಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

  1. ನಿರ್ದೇಶಕ ಕ್ರಿಸ್ಟೋಫರ್​ ನೋಲನ್​: ಹಾಲಿವುಡ್​ನಲ್ಲಿ ಕ್ರಿಸ್ಟೋಫರ್​ ನೋಲನ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಸಿನಿಮಾಗಳಲ್ಲಿ ಏನಾದರೂ ವಿಶೇಷತೆ ಇದ್ದೇ ಇರುತ್ತದೆ ಎಂಬ ನಂಬಿಕೆ ಜನರಿಗೆ ಇದೆ. ಆ ಕಾರಣದಿಂದ ‘ಆಪನ್​ಹೈಮರ್​’ ಸಿನಿಮಾ ಕೌತುಕ ಮೂಡಿದೆ.
  2. ಜೆ. ರಾಬರ್ಟ್​ ಆಪನ್​ಹೈಮರ್​ ಜೀವನದ ಕಥೆ: ಆಟಂ ಬಾಂಬ್​ ಕಂಡು ಹಿಡಿದ ಜೆ. ರಾಬರ್ಟ್​ ಆಪನ್​ಹೈಮರ್​ ಅವರ ಜೀವನವನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಆಪನ್​ಹೈಮರ್​ ಪಾತ್ರಕ್ಕೆ ಕಿಲಿಯನ್​ ಮರ್ಫಿ ಬಣ್ಣ ಹಚ್ಚಿದ್ದಾರೆ. ಅವರ ಲುಕ್​ ಗಮನ ಸೆಳೆಯುತ್ತಿದೆ.
  3. ಅದ್ದೂರಿ ಮೇಕಿಂಗ್​: ಕ್ರಿಸ್ಟೋಫರ್​ ನೋಲನ್​ ಅವರು ಕಂಟೆಂಟ್​ ಜೊತೆಗೆ ಮೇಕಿಂಗ್​ಗೆ ಹೆಚ್ಚು ಮಹತ್ವ ನೀಡುತ್ತಾರೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಈಗಾಗಲೇ ಟ್ರೇಲರ್​ನಲ್ಲಿ ಅದರ ಝಲಕ್​ ಕಾಣಿಸಿದೆ. ಅದರಿಂದ ಸಿನಿಮಾ ಮೇಲಿನ ಕೌತುಕ ಹೆಚ್ಚಿದೆ.
  4. ಪಾತ್ರವರ್ಗದಲ್ಲಿ ಸ್ಟಾರ್​ ಕಲಾವಿದರು: ಹಾಲಿವುಡ್​ನ ಜನಪ್ರಿಯ ಕಲಾವಿದರಾದ ಕಿಲಿಯನ್​ ಮರ್ಫಿ, ರಾಬರ್ಟ್​ ಡೌನಿ ಜೂನಿಯರ್​, ಮ್ಯಾಟ್​ ಡೇಮನ್​, ಎಮಿಲಿ ಬ್ಲಂಟ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಿಯಲ್​ ಲೈಫ್​ ಪಾತ್ರಗಳನ್ನು ಅವರು ನಿಭಾಯಿಸಿದ್ದಾರೆ.
  5. ನೈಜತೆಗೆ ಹೆಚ್ಚು ಮಹತ್ವ: 1940ರ ಕಾಲಘಟ್ಟದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಎಲ್ಲ ದೃಶ್ಯಗಳನ್ನು ನೈಜವಾಗಿ ಕಟ್ಟಿಕೊಡಬೇಕು ಎಂಬುದು ನಿರ್ದೇಶಕರ ಆಶಯ. ಅದಕ್ಕಾಗಿ ಅವರು ‘ಕಂಪ್ಯೂಟರ್​ ಜೆನರೇಟೆಡ್​ ಇಮೇಜ್​’ ಬಳಸಿಲ್ಲ. ಅದರ ಬದಲಿಗೆ ನೈಜವಾಗಿ ಚಿತ್ರಿಸುವುದಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ.
  6. ಈಗಾಗಲೇ ಸಿಕ್ಕಿದೆ ಮೆಚ್ಚುಗೆ: ಪ್ಯಾರಿಸ್​ನಲ್ಲಿ ‘ಆಪರ್​ಹೈಮರ್​’ ಸಿನಿಮಾದ ಪ್ರೀಮಿಯರ್​ ಶೋ ಮಾಡಲಾಗಿದೆ. ಅನೇಕ ಸೆಲೆಬ್ರಿಟಿಗಳು ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ವಿಮರ್ಶಕರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆ ಕಾರಣದಿಂದಲೂ ಚಿತ್ರದ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ.
  7. 2ನೇ ಮಹಾಯುದ್ಧದ ಚಿತ್ರಣ: ಮನುಕುಲವನ್ನೇ ಬೆಚ್ಚಿ ಬೀಳಿಸಿದ ಎರಡನೇ ಮಹಾಯುದ್ಧದ ಘಟನೆಗಳ ಸುತ್ತ ‘ಆಪನ್​ಹೈಮರ್​’ ಸಿನಿಮಾ ಸಾಗುತ್ತದೆ. ಜಪಾನ್​ ಮೇಲೆ ಅಣು ಬಾಂಬ್​ ಹಾಕಿದ ಘಟನೆಯ ಹಿಂದೆ ಏನೆಲ್ಲ ನಡೆಯಿತು ಎಂಬುದನ್ನು ಈ ಚಿತ್ರ ವಿವರಿಸುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.