AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virupaksha Movie: ‘ವಿರೂಪಾಕ್ಷ’ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಗ್ತಿರೋದೇಕೆ? ಅಂಥದೇನಿದೆ ಸಿನಿಮಾದಲ್ಲಿ?

‘ವಿರೂಪಾಕ್ಷ’ ಚಿತ್ರಕ್ಕೆ ‘ಪುಷ್ಪ’ ಖ್ಯಾತಿಯ ಸುಕುಮಾರ್ ಅವರು ಚಿತ್ರಕಥೆ ಬರೆದಿದ್ದಾರೆ. ಕನ್ನಡದ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.  

Virupaksha Movie: ‘ವಿರೂಪಾಕ್ಷ’ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಗ್ತಿರೋದೇಕೆ? ಅಂಥದೇನಿದೆ ಸಿನಿಮಾದಲ್ಲಿ?
ವಿರೂಪಾಕ್ಷ ಸಿನಿಮಾ ಪೋಸ್ಟರ್
ರಾಜೇಶ್ ದುಗ್ಗುಮನೆ
|

Updated on:May 26, 2023 | 7:09 AM

Share

ಎಲ್ಲಾ ಭಾಷೆಗಳ ಸಿನಿಮಾಗಳನ್ನು ಮನೆಯಲ್ಲೇ ಕುಳಿತು ನೋಡುವ ಅವಕಾಶ ನೀಡಿದ್ದು ಒಟಿಟಿ. ಕೊವಿಡ್ ಹೆಚ್ಚಿದ ಬಳಿಕ ಒಟಿಟಿ ವ್ಯಾಪ್ತಿ ಹೆಚ್ಚಾಯಿತು. ಕೆಲ ಸಿನಿಮಾಗಳು ಥಿಯೇಟರ್​ನಲ್ಲಿ ಹೆಚ್ಚು ಸದ್ದು ಮಾಡದೆ ಮಾಯ ಆಗಿ ಬಿಟ್ಟಿರುತ್ತವೆ. ಅಂಥ ಕೆಲ ಸಿನಿಮಾಗಳು ನಂತರ ಒಟಿಟಿಗೆ ಬಂದ ಸದ್ದು ಮಾಡುತ್ತವೆ. ಈಗ ತೆಲುಗಿನ ‘ವಿರೂಪಾಕ್ಷ’ ಸಿನಿಮಾ (Virupaksha Movie) ಒಟಿಟಿಗೆ ಬಂದು ಸಖತ್ ಜನಪ್ರಿಯತೆ ಪಡೆದುಕೊಂಡಿದೆ. ಅಷ್ಟಕ್ಕೂ ಅಂಥದ್ದೇನಿದೆ ಈ ಸಿನಿಮಾದಲ್ಲಿ? ಆ ಬಗ್ಗೆ ಇಲ್ಲಿದೆ ಉತ್ತರ.

‘ವಿರೂಪಾಕ್ಷ’ ಸಿನಿಮಾದಲ್ಲಿ ಸಾಯಿ ಧರಮ್ ತೇಜ ಹಾಗೂ ಸಂಯುಕ್ತಾ ಮೆನನ್ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್ 21ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಅಲ್ಲಿನ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತು. ಮೇ 21ರಂದು ಈ ಚಿತ್ರ ನೆಟ್​ಫ್ಲಿಕ್ಸ್ ಮೂಲಕ ಪ್ರಸಾರ ಕಂಡಿದೆ. ಕಾರ್ತಿಕ್ ವರ್ಮ ದಂಡು ನಿರ್ದೇಶನ ಇರುವ ಈ ಚಿತ್ರಕ್ಕೆ ‘ಪುಷ್ಪ’ ಖ್ಯಾತಿಯ ಸುಕುಮಾರ್ ಅವರು ಚಿತ್ರಕಥೆ ಬರೆದಿದ್ದಾರೆ. ಕನ್ನಡದ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

‘ವಿರೂಪಾಕ್ಷ’ ಸಿನಿಮಾ ಒಂದು ರಿವೇಂಜ್​ ಕಥೆ. ಹಾಗಂತ ಹೊಡೆದು, ಬಡಿದು ರಿವೇಂಜ್ ತೆಗೆದುಕೊಳ್ಳುವ ಕಥೆ ಇದಲ್ಲ. ಹಳ್ಳಿಯಲ್ಲಿ ಒಬ್ಬೊಬ್ಬರಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಆರಂಭಿಸುತ್ತಾರೆ. ಅವರ ಸಾವು ನಿಗೂಢ ರೀತಿಯಲ್ಲಿರುತ್ತದೆ. ಇದನ್ನು ಬೆನ್ನು ಹತ್ತಿ ಹೋಗುತ್ತಾನೆ ಹೀರೋ (ಸಾಯಿ ಧರಮ್ ತೇಜ್). ಆಗ ಕೆಲ ಭಯಾನಕ ಸತ್ಯಗಳು ಗೊತ್ತಾಗುತ್ತವೆ. ಪ್ರಿ ಕ್ಲೈಮ್ಯಾಕ್ಸ್​ನಲ್ಲಿ ಸಿನಿಮಾಗೆ ದೊಡ್ಡ ಟ್ವಿಸ್ಟ್​ ಕೂಡ ಸಿಗುತ್ತದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಹೆಚ್ಚು ಹಾರರ್ ಫೀಲ್ ನೀಡಿದೆ. ಇದರ ಜೊತೆ ಎರಡು ಲವ್​ ಸ್ಟೋರಿ ಕೂಡ ಸಿನಿಮಾದಲ್ಲಿದೆ.

ಇದನ್ನೂ ಓದಿ: ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಗೆ ರೆಡಿ ಆದ ಅಲ್ಲು ಅರ್ಜುನ್; ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ

ಹಲವು ರೀತಿಯ ಹಾರರ್ ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ಅದಕ್ಕಿಂತ ಭಿನ್ನವಾಗಿ ಕಾಣುತ್ತದೆ ಈ ‘ವಿರೂಪಾಕ್ಷ’. ಎಲ್ಲಿಯೂ ದೆವ್ವ ತೆರೆಮೇಲೆ ಬರುವುದಿಲ್ಲ. ಆದಾಗ್ಯೂ ನೋಡುಗರ ಮೈ ಮೇಲಿನ ರೋಮ ಎದ್ದು ನಿಲ್ಲುತ್ತದೆ. ಇಲ್ಲಿ ಕಾಗೆಯೂ ನಿಮ್ಮನ್ನು ಹೆದರಿಸುತ್ತದೆ! ಸುಕುಮಾರ್ ಅವರ ಚಿತ್ರಕಥೆ ಇಲ್ಲಿ ಕೆಲಸ ಮಾಡಿದೆ. ಸಿನಿಮಾ ನೋಡಿದ ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:01 am, Fri, 26 May 23