ಜೂ ಎನ್​ಟಿಆರ್ ದೇಹತೂಕ ಇಳಿಸಿಕೊಳ್ಳಲು ಕಾರಣ ಯಾರು?

Jr NTR movies: ತೆಲುಗು ಚಿತ್ರರಂಗದ ಫಿಟ್ ಹೀರೋಗಳಲ್ಲಿ ಜೂ ಎನ್​ಟಿಆರ್ ಸಹ ಒಬ್ಬರು. ತೆಲುಗು ಚಿತ್ರರಂಗದಲ್ಲಿ ಸಿಕ್ಸ್ ಪ್ಯಾಕ್ ಮಾಡಿದ ಕೆಲವೇ ನಾಯಕರಲ್ಲಿ ಜೂ ಎನ್​ಟಿಆರ್ ಸಹ ಒಬ್ಬರು. ಆದರೆ ಮೊದಲು ಜೂ ಎನ್​ಟಿಆರ್ ಹೀಗೆ ಫಿಟ್ ಆಗಿರಲಿಲ್ಲ. ಬಹಳ ದಡೂತಿ ದೇಹದವರಾಗಿದ್ದರು. ಆದರೆ ಅವರು ಫಿಟ್ ಆಗಲು ಕಾರಣವಾಗಿದ್ದೇನು?

ಜೂ ಎನ್​ಟಿಆರ್ ದೇಹತೂಕ ಇಳಿಸಿಕೊಳ್ಳಲು ಕಾರಣ ಯಾರು?
Jr Ntr

Updated on: May 20, 2025 | 11:00 AM

ಜೂ ಎನ್​ಟಿಆರ್ (Jr NTR) ಈಗ ತೆಲುಗಿನ ಫಿಟೆಸ್ಟ್ ನಟರಲ್ಲಿ ಒಬ್ಬರು. ‘ಅರವಿಂದ ಸಮೇತ’ ಸಿನಿಮಾಗಾಗಿ ಸಿಕ್ಸ್ ಪ್ಯಾಕ್ ಸಹ ಮಾಡಿದ್ದರು ಜೂ ಎನ್​ಟಿಆರ್. ಈಗ ಪ್ರಶಾಂತ್ ನೀಲ್ ಸಿನಿಮಾನಲ್ಲಿ ನಟಿಸುತ್ತಿರುವ ಜೂ ಎನ್​ಟಿಆರ್ ಇನ್ನಷ್ಟು ದೇಹತೂಕ ಇಳಿಸಿಕೊಂಡಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಜೂ ಎನ್​ಟಿಆರ್ ಹೀಗಿರಲಿಲ್ಲ. ಬಹಳ ದಪ್ಪಗೆ, ದಡೂತಿ ದೇಹಿ ಆಗಿದ್ದರು ಜೂ ಎನ್​ಟಿಆರ್. ಅದೆಷ್ಟು ದಪ್ಪ ದೇಹಿಯಾಗಿದ್ದರೆಂದರೆ ಕ್ಲೋಸ್ ಅಪ್ ದೃಶ್ಯಗಳಲ್ಲಿ ಅವರನ್ನು ನೋಡಲು ಸಹ ಆಗುತ್ತಿರಲಿಲ್ಲ. ‘ರಾಖಿ’ ಸಿನಿಮಾ ಮಾಡುವಾಗ ನೂರು ಕೆಜಿ ತೂಕ ಇದ್ದರಂತೆ ಜೂ ಎನ್​ಟಿಆರ್. ಆ ನಂತರ ದೇಹ ತೂಕ ಇಳಿಸಿಕೊಂಡರು.

‘ರಾಖಿ’ ಸಿನಿಮಾ ದೊಡ್ಡ ಹಿಟ್ ಆಯ್ತು. ಆ ಸಿನಿಮಾದ ವೇಳೆಗೆ ಜೂ ಎನ್​ಟಿಆರ್​ ಬಹಳ ದೇಹತೂಕ ಹೆಚ್ಚಿಸಿಕೊಂಡಿದ್ದರು. ಸಿನಿಮಾ ಹಿಟ್ ಆಯ್ತಾದರೂ ಕೆಲವರು ಜೂ ಎನ್​ಟಿಆರ್ ಅವರ ದೇಹತೂಕದ ಬಗ್ಗೆ ಕಮೆಂಟ್ ಮಾಡಲು ಆರಂಭಿಸಿದ್ದರು. ಸ್ವತಃ ಜೂ ಎನ್​ಟಿಆರ್ ಅವರಿಗೆ ಡ್ಯಾನ್ಸ್ ಮಾಡುವಾಗ, ಫೈಟ್ ಮಾಡುವಾಗ ಕೆಲ ಸಮಸ್ಯೆಗಳು ಎದುರಾಗುತ್ತಿದ್ದವಂತೆ. ಅದೇ ಸಮಯದಲ್ಲಿ ಎಸ್​ಎಸ್ ರಾಜಮೌಳಿ ‘ಯಮದೊಂಗ’ ಸಿನಿಮಾ ಚಿತ್ರಕತೆ ತೆಗೆದುಕೊಂಡು ಜೂ ಎನ್​ಟಿಆರ್ ಬಳಿ ಬಂದಿದ್ದಾರೆ.

ಜೂ ಎನ್​ಟಿಆರ್ ಅವರನ್ನು ಉದ್ದೇಶಿಸಿ, ‘ನೋಡಿ ತಾರಕ್ ನೀವು ನೋಡಲು ಬಹಳ ಕೆಟ್ಟದಾಗಿದ್ದೀರಿ, ನೀವು ಹೀಗಿರುವುದರಿಂದ ಒಂದು ವರ್ಗದ ಆಡಿಯೆನ್ಸ್ ನಿಮ್ಮ ಸಿನಿಮಾ ನೋಡುವುದನ್ನೇ ಬಿಟ್ಟಿದ್ದಾರೆ. ವಿಶೇಷವಾಗಿ ಕಾಲೇಜು ಹುಡುಗರು, ಯುವತಿಯರು ನಿಮ್ಮ ಸಿನಿಮಾ ನೋಡುತ್ತಿಲ್ಲ. ‘ಯಮದೊಂಗ’ ಸಿನಿಮಾ ಮಾಡಬೇಕೆಂದರೆ ನೀವು ದೇಹ ತೂಕದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು’ ಎಂದರಂತೆ.

ಇದನ್ನೂ ಓದಿ:ಜೂನಿಯರ್ ಎನ್​ಟಿಆರ್​ಗೆ ‘9999’ ಸಂಖ್ಯೆ ಮೇಲೆ ಇದೆ ವಿಶೇಷ ಪ್ರೀತಿ; ಕಾರಣ ಏನು?

ಜೂ ಎನ್​ಟಿಆರ್​ಗೂ ಸಹ ಇದು ಸರಿ ಎನಿಸಿ ದೇಹತೂಕದಲ್ಲಿ ಭಾರಿ ಬದಲಾವಣೆ ಮಾಡಿಕೊಂಡರು. 100 ಕೆಜಿ ಇದ್ದವರು 60 ಕೆಜಿಗೆ ಬಂದರು. ಆ ನಂತರ ಬಂದ ‘ಶಕ್ತಿ’ ಸಿನಿಮಾನಲ್ಲಿ ಇನ್ನಷ್ಟು ಸಣ್ಣ ಆಗಿಬಿಟ್ಟರು. ಆದರೆ ಅದಾದ ಮೇಲೆ ಒಂದು ಒಂದು ಸರಿಯಾದ ದೇಹತೂಕವನ್ನು ಮೇಂಟೇನ್ ಮಾಡಿಕೊಂಡು ಬರುತ್ತಿದ್ದಾರೆ. ಈಗ ಪ್ರಶಾಂತ್ ನೀಲ್ ಸಿನಿಮಾಕ್ಕೆ ತುಸು ದೇಹತೂಕ ಕಳೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ