ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​ಗೆ ಸಿಕ್ಕ ಮೊದಲ ಸಂಬಳ ಎಷ್ಟು?​ ಖರೀದಿಸಿದ್ದು ಏನು?

|

Updated on: May 29, 2021 | 8:36 AM

Deepika Padukone | Ranbir Kapoor: ಮೊದಲ ಸಂಬಳವನ್ನು ಖರ್ಚು ಮಾಡುವ ವಿಚಾರದಲ್ಲಿ ಇಷ್ಟು ಅಜಗಜಾಂತರ ವ್ಯತ್ಯಾಸ ಇರುವ ರಣಬೀರ್​ ಮತ್ತು ದೀಪಿಕಾ ನಂತರ ಪ್ರೇಮಿಗಳಾದರು. ಬಳಿಕ ಬಾಲಿವುಡ್​ನ ಬಹುಬೇಡಿಕೆಯ ಸ್ಟಾರ್​ಗಳಾಗಿ ಮಿಂಚಿದರು.

ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​ಗೆ ಸಿಕ್ಕ ಮೊದಲ ಸಂಬಳ ಎಷ್ಟು?​ ಖರೀದಿಸಿದ್ದು ಏನು?
ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​
Follow us on

ಮೊದಲ ಸಂಬಳ ಎಂದರೆ ಎಲ್ಲರಿಗೂ ಒಂದು ಬಗೆಯ ಪುಳಕ ಇರುತ್ತದೆ. ಆಗತಾನೆ ಕೆಲಸಕ್ಕೆ ಸೇರಿಕೊಂಡು ಅಥವಾ ಹೊಸ ವ್ಯವಹಾರ ಶುರುಮಾಡಿ ಅದರಿಂದ ಬಂದ ಮೊದಲ ಸಂಬಳದ ಬಗ್ಗೆ ಎಲ್ಲಿಲ್ಲದ ಗೌರವ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಈ ಭಾವ ಇರುತ್ತದೆ. ಇಂದು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಸ್ಟಾರ್​ ಕಲಾವಿದರು ಕೂಡ ಹಲವು ವರ್ಷಗಳ ಹಿಂದೆ ಮೊದಲ ಸಂಬಳದ ಆ ಫೀಲ್​ ಅನುಭವಿಸಿರುತ್ತಾರೆ. ಬಾಲಿವುಡ್​ನಲ್ಲಿ ಇಂದು ಬಹುಬೇಡಿಕೆಯ ಸ್ಟಾರ್​ಗಳಾದ ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್​ ಅವರ ಮೊದಲ ಸ್ಯಾಲರಿಯ ಇಂಟರೆಸ್ಟಿಂಗ್​ ವಿಷಯ ಇಲ್ಲಿದೆ.

ರಣಬೀರ್​ ಕಪೂರ್​ ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಸಾವರಿಯಾ’. ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರು ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಅದರಲ್ಲಿ ರಣಬೀರ್​ಗೆ ಸೋನಮ್​ ಕಪೂರ್​ ನಾಯಕಿ ಆಗಿದ್ದರು. ‘ಸಾವರಿಯಾ’ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ರಣಬೀರ್​ಗೆ ಚಿಕ್ಕ ಸಂಭಾವನೆ ಸಿಕ್ಕಿತ್ತು. ಅದರಲ್ಲಿ ಅವರೊಂದು ವಾಚ್​ ಖರೀದಿಸಿದ್ದರು.

ಸಾವರಿಯಾ ಸಿನಿಮಾದಿಂದ ಬಂದ ಸಂಭಾವನೆಯಲ್ಲಿ ರಣಬೀರ್​ ಕಪೂರ್​ ಹಬ್​ಲಾಟ್​ ಮೆಕ್ಸಿಕನ್​ ಕಂಪನಿಯ ದುಬಾರಿ ವಾಚ್​ ಕೊಂಡುಕೊಂಡಿದ್ದರು. ಅದರ ಬೆಲೆ 8.16 ಲಕ್ಷ ರೂ. ಆಗಿತ್ತು! ಆ ಮೂಲಕ ಅವರು ತಮ್ಮ ಆಸೆಯನ್ನು ಮೊದಲ ಸಂಬಳದಲ್ಲಿ ಈಡೇರಿಸಿಕೊಂಡರು. ಆದರೆ ದೀಪಿಕಾ ಪಡುಕೋಣೆಗೆ ಮೊದಲ ಸಂಬಳ ಇಷ್ಟೆಲ್ಲ ಸಿಕ್ಕಿರಲಿಲ್ಲ.

ನಟಿಯಾಗುವುದಕ್ಕೂ ಮುನ್ನ ದೀಪಿಕಾ ಪಡುಕೋಣೆ ಮಾಡೆಲಿಂಗ್​ ಲೋಕದಲ್ಲಿ ಸಕ್ರಿಯರಾಗಿದ್ದರು. ಆಗ ಅವರಿಗೆ ಸಿಕ್ಕ ಮೊದಲ ಸಂಬಳ 2 ಸಾವಿರ ರೂಪಾಯಿ. ಅದನ್ನು ಅವರು ಬೇಕಾಬಿಟ್ಟು ಖರ್ಚು ಮಾಡಲಿಲ್ಲ. ನೇರವಾಗಿ ಅದನ್ನು ತಂದೆಯ ಕೈಯಲ್ಲಿ ಕೊಟ್ಟು ಯಾವುದರ ಮೇಲಾದರೂ ಹೂಡಿಕೆ ಮಾಡುವಂತೆ ಹೇಳಿದ್ದರಂತೆ. ಮೊದಲ ಸಂಬಳವನ್ನು ಖರ್ಚು ಮಾಡುವ ವಿಚಾರದಲ್ಲಿ ಇಷ್ಟು ಅಜಗಜಾಂತರ ವ್ಯತ್ಯಾಸ ಇರುವ ರಣಬೀರ್​ ಮತ್ತು ದೀಪಿಕಾ ನಂತರ ಪ್ರೇಮಿಗಳಾದರು. ಬಳಿಕ ಬ್ರೇಕಪ್​ ಕೂಡ ಮಾಡಿಕೊಂಡರು.

ಸದ್ಯ ರಣಬೀರ್​ ಕಪೂರ್​ ನಟನೆಯ ‘ಶಂಶೇರಾ’ ಹಾಗೂ ‘ಬ್ರಹ್ಮಾಸ್ತ್ರ’ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ದೀಪಿಕಾ ಪಡುಕೋಣೆ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪತಿ ರಣವೀರ್​ ಸಿಂಗ್​ ಜೊತೆ ನಟಿಸಿರುವ ‘83’ ಚಿತ್ರದ ಬಿಡುಗಡೆ ಲಾಕ್​ಡೌನ್​ ಕಾರಣದಿಂದ ತಡವಾಗಿದೆ.

ಇದನ್ನೂ ಓದಿ:

ಆಲಿಯಾ, ದೀಪಿಕಾ, ಕತ್ರಿನಾ​ ಅಲ್ಲ, ರಣಬೀರ್​ ಕಪೂರ್ ಮದುವೆಯನ್ನು​ ಬೇರೆಯವರ ಜತೆ ನಿಶ್ಚಯಿಸಿದ್ದ ರಿಷಿ ಕಪೂರ್​

ದೀಪಿಕಾ, ಕತ್ರಿನಾ ಮಾತ್ರವಲ್ಲ, ಅನುಷ್ಕಾ ಶೆಟ್ಟಿ ಮೇಲೂ ಕಣ್ಣಿಟ್ಟಿದ್ದ ರಣಬೀರ್; ಬಹಿರಂಗವಾಗಿ ಹೇಳಿಕೊಂಡಿದ್ದ ನಟ