‘ಜೈಲರ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಕೂಡ ಇದ್ದಾರೆ; ಈ ವಿಡಿಯೋ ಗಮನಿಸಿ

ರಜನಿಕಾಂತ್ ಅಭಿನಯದ 'ಜೈಲರ್ 2' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಭಾರಿ ಸದ್ದು ಮಾಡುತ್ತಿದೆ. ಟ್ರೇಲರ್‌ನ ಒಂದು ಸೀನ್‌ನಲ್ಲಿ ಹಿಂಭಾಗದಿಂದ ಕಾಣಿಸುವ ವ್ಯಕ್ತಿ ಬಾಲಿವುಡ್ ನಟ ಹೃತಿಕ್ ರೋಷನ್ ಇರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಅಕ್ಟೋಬರ್ 15ರಂದು ತೆರೆಕಾಣಲಿರುವ ಈ ಚಿತ್ರದಲ್ಲಿ ಹೃತಿಕ್ ಸರ್ಪ್ರೈಸ್ ಕ್ಯಾಮಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.

‘ಜೈಲರ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಕೂಡ ಇದ್ದಾರೆ; ಈ ವಿಡಿಯೋ ಗಮನಿಸಿ
ರಜಿನಿ

Updated on: Oct 07, 2026 | 10:36 AM

ಮುಖ್ಯಾಂಶಗಳು

  • ಜೈಲರ್ 2 ಟ್ರೇಲರ್‌ನಲ್ಲಿ ಹೃತಿಕ್ ರೋಷನ್?
  • ಒಂದೇ ಒಂದು ಸೀನ್‌ನಿಂದ ಜಾಲತಾಣಗಳಲ್ಲಿ ಹವಾ
  • ರಜನಿ ಚಿತ್ರದಲ್ಲಿ ಬಾಲಿವುಡ್ ಗ್ರೀಕ್ ಗಾಡ್:   

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ಟ್ರೇಲರ್ ಅಕ್ಟೋಬರ್ 5ರಂದು ಬಿಡುಗಡೆಯಾಗಿದೆ. ಈ ಟ್ರೇಲರ್ ದೊಡ್ಡ ಬೃಹತ್ ತಾರಾಗಣ ಹಾಗೂ ದೃಶ್ಯ ವೈಭವದ ಸುಳಿವು ನೀಡಿದೆ. ರಜನಿಕಾಂತ್ ಜೊತೆಗೆ ಕನ್ನಡದ ಶಿವರಾಜ್​ಕುಮಾರ್, ಬಾಲಿವುಡ್​ನ ವಿದ್ಯಾ ಬಾಲನ್, ಮಿಥುನ್ ಚಕ್ರವರ್ತಿ, ಜಾಕಿ ಶ್ರಾಫ್ ಮತ್ತು ಮಲಯಾಳಂ ನಟ ಮೋಹನ್ ಲಾಲ್ ಮಿಂಚಿದ್ದಾರೆ. ಈ ಮಧ್ಯೆ ಟ್ರೇಲರ್‌ನ ಒಂದು ನಿರ್ದಿಷ್ಟ ದೃಶ್ಯವು ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಟ್ರೇಲರ್‌ನಲ್ಲಿ ಹಿಂಭಾಗದಿಂದ ಕಾಣಿಸುವ ಒಬ್ಬ ವ್ಯಕ್ತಿಯ ಕ್ಷಣಾರ್ಧದ ದೃಶ್ಯ ವೈರಲ್ ಆಗಿದೆ. ಕಣ್ಣಿಟ್ಟು ನೋಡಿದ ಅಭಿಮಾನಿಗಳು ಈ ಸೀನ್ ಅನ್ನು ಪೋಸ್ ಮಾಡಿ ವಿಶ್ಲೇಷಿಸುತ್ತಿದ್ದಾರೆ. ಈ ನೆರಳು ಮತ್ತು ದೇಹದ ಶೈಲಿಯನ್ನು ನೋಡಿದರೆ ಅದು ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಇರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಹೃತಿಕ್ ರೋಷನ್ ಸರ್ಪ್ರೈಸ್ ಕ್ಯಾಮಿಯೋ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕುತೂಹಲ ಹೆಚ್ಚಿಸಿದೆ.

ಟ್ವಿಟರ್​ನಲ್ಲಿ ಈ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಅನೇಕ ಅಭಿಮಾನಿಗಳು ಟ್ರೇಲರ್‌ನ ಆ ಸ್ಕ್ರೀನ್‌ಶಾಟ್ ಹಂಚಿಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ‘ಜೈಲರ್ 2 ಟ್ರೇಲರ್‌ನಲ್ಲಿ ಹೃತಿಕ್ ರೋಷನ್ ಅವರು ಇರುವ ದೃಶ್ಯವನ್ನು ಯಾರಾದರೂ ಗಮನಿಸಿದಿರಾ?’ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಹೃತಿಕ್ ಅವರ ಅತಿಥಿ ಪಾತ್ರದ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಹೃತಿಕ್ ರೋಷನ್ ಅವರ ಈ ಎಂಟ್ರಿ ‘ಜೈಲರ್ 2’ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ಹೃತಿಕ್ ರೋಷನ್ ಅವರ ಈ ಸರ್ಪ್ರೈಸ್ ಎಂಟ್ರಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸುವುದು ಖಚಿತ’ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

ಅನಿರುದ್ಧ್ ಅವರ ಹಿನ್ನೆಲೆ ಸಂಗೀತದ ಜೊತೆಗೆ ಹೃತಿಕ್ ಎಂಟ್ರಿ ತೆರೆಮೇಲೆ ಹೊಸ ಸಂಚಲನ ಸೃಷ್ಟಿಸಬಹುದು ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಅಕ್ಟೋಬರ್ 15ರಂದು ಸಿನಿಮಾ ತೆರೆಕಾಣಲಿದ್ದು, ಈ ಎಲ್ಲಾ ಕುತೂಹಲಗಳಿಗೆ ಅಂದೇ ತೆರೆ ಬೀಳಲಿದೆ. ನಿಜವಾಗಿಯೂ ಹೃತಿಕ್ ರೋಷನ್ ಈ ಸಿನಿಮಾದಲ್ಲಿ ನಟಿಸಿದ್ದಾರೆಯೇ ಅಥವಾ ಇದು ಕೇವಲಅ ಅಭಿಮಾನಿಗಳ ಊಹಾಪೋಹವೇ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us