ಜನವರಿ 7ರಂದು ‘ಆರ್ಆರ್ಆರ್’ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾ ತಂಡ ಅಬ್ಬರದ ಪ್ರಚಾರ ಮಾಡುತ್ತಿದೆ. ದಕ್ಷಿಣ ಭಾರತ ಹಾಗೂ ಬಾಲಿವುಡ್ನಲ್ಲಿ ಚಿತ್ರಕ್ಕೆ ಹೈಪ್ ಕೊಡುವ ಕೆಲಸ ನಡೆಯುತ್ತಿದೆ. ಈಗ ಕೊವಿಡ್ ಸಂಖ್ಯೆ ಹೆಚ್ಚುತ್ತಿದ್ದು ಮತ್ತೆ ಚಿತ್ರಮಂದಿರಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಸರ್ಕಾರ ಆದೇಶಿಸುವ ಸಾಧ್ಯತೆ ಇದೆ. ಹಾಗಾದಲ್ಲಿ ‘ಆರ್ಆರ್ಆರ್’ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡಲಿದೆ. ಈಗ ರಾಜಮೌಳಿ ತಂಡಕ್ಕೆ ಮೊದಲ ಹಿನ್ನಡೆ ಆಗಿದೆ.
‘ಆರ್ಆರ್ಆರ್’ ಚಿತ್ರತಂಡ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಹೈದರಾಬಾದ್ನ ಎಲ್ಬಿ ಸ್ಟೇಡಿಯಂನಲ್ಲಿ ಡಿಸೆಂಬರ್ 30ರಂದು ಪ್ರೀ-ರಿಲೀಸ್ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲು ಚಿತ್ರತಂಡ ಆಲೋಚಿಸಿತ್ತು. ಆದರೆ, ಈ ಕಾರ್ಯಕ್ರಮಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ಈ ಇವೆಂಟ್ ಕ್ಯಾನ್ಸಲ್ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು, ಡಿಸೆಂಬರ್ 27ರಂದು ಚೆನ್ನೈನಲ್ಲಿ ‘ಆರ್ಆರ್ಆರ್’ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ವರದಿ ಆಗಿದೆ. ಆದರೆ, ಹೈದರಾಬಾದ್ನಲ್ಲಿ ಈ ಕಾರ್ಯಕ್ರಮಕ್ಕೆ ಒಪ್ಪಿಗೆ ಸಿಗದೆ ಇರುವುದು ಚಿತ್ರತಂಡಕ್ಕೆ ಹಿನ್ನಡೆ ಆಗಿದೆ. ಇತ್ತೀಚೆಗೆ ‘ಪುಷ್ಪ: ದಿ ರೈಸ್’ ಸಕ್ಸಸ್ ಮೀಟ್ಅನ್ನು ಕಾಕಿನಾಡಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ.
‘ಆರ್ಆರ್ಆರ್’ ತಂಡದವರ ಸಂಭಾವನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ರಾಮ್ ಚರಣ್, ಜ್ಯೂ. ಎನ್ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ (Alia Bhatt) ಮತ್ತು ರಾಜಮೌಳಿ ಇವರಲ್ಲಿ ಹೆಚ್ಚು ಸಂಭಾವನೆ ಪಡೆದವರು ಯಾರು ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಉತ್ತರ ಇಲ್ಲಿದೆ.
ಸಂಭಾವನೆ ವಿಚಾರವನ್ನು ಯಾರೂ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಮೂಲಗಳ ಪ್ರಕಾರ ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಅವರು ಸಮನಾಗಿ ಸಂಭಾವನೆ ಪಡೆದಿದ್ದಾರೆ. ಅಂದರೆ ಇಬ್ಬರೂ ಕೂಡ ತಲಾ 45 ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು, ಆಲಿಯಾ ಭಟ್ ಅವರಿಗೆ 9 ಕೋಟಿ ರೂ. ನೀಡಲಾಗಿದೆ. ಅದೇ ರೀತಿ ಬಾಲಿವುಡ್ ಕಲಾವಿದ ಅಜಯ್ ದೇವಗನ್ ಅವರು 25 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಾಜಮೌಳಿ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಅವರು ಈ ಸಿನಿಮಾದ ಲಾಭದಲ್ಲಿ ಶೇ.30ರಷ್ಟು ಪಾಲು ಪಡೆಯಲಿದ್ದಾರೆ ಎನ್ನಲಾಗಿದೆ. ಅದೇ ಅವರ ಸಂಭಾವನೆ ಆಗಿರಲಿದೆ. ಆದರೆ ಈ ಯಾವ ವಿಚಾರಗಳ ಬಗ್ಗೆಯೂ ಚಿತ್ರತಂಡ ಅಧಿಕೃತವಾಗಿ ಮಾತನಾಡಿಲ್ಲ. ಈ ಸಿನಿಮಾವನ್ನು ಡಿವಿವಿ ದಾನಯ್ಯ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: RRR: ರಾಮ್ ಚರಣ್, ಜ್ಯೂ. ಎನ್ಟಿಆರ್, ರಾಜಮೌಳಿ, ಆಲಿಯಾ ಇವರಲ್ಲಿ ಹೆಚ್ಚು ಸಂಭಾವನೆ ಪಡೆದವರು ಯಾರು?
ಹಾಲಿವುಡ್ ಆಫರ್ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ‘ಆರ್ಆರ್ಆರ್’ ನಿರ್ದೇಶಕ ರಾಜಮೌಳಿ
Published On - 8:57 pm, Sat, 25 December 21