‘ನನ್ನ ಮಗನಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಂತೆ ಅನಿಸುತ್ತಿದೆ’; ಪ್ರಕಾಶ್ ರಾಜ್ ಹೀಗೆ ಹೇಳಿದ್ದು ಏಕೆ?

|

Updated on: Oct 23, 2023 | 7:07 AM

ಅಲ್ಲು ಅರ್ಜುನ್, ದೇವಿ ಶ್ರೀ ಪ್ರಸಾದ್ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆ. ಇವರಿಗೆ ಗೌರವ ಸಲ್ಲಿಸಲು ಮೈತ್ರಿ ಮೂವೀ ಮೇಕರ್ಸ್​ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇಲ್ಲಿ ಅವರು ಮಾತನಾಡಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಹೊಗಳಿದ್ದಾರೆ.

‘ನನ್ನ ಮಗನಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಂತೆ ಅನಿಸುತ್ತಿದೆ’; ಪ್ರಕಾಶ್ ರಾಜ್ ಹೀಗೆ ಹೇಳಿದ್ದು ಏಕೆ?
ಪ್ರಕಾಶ್ ರಾಜ್
Follow us on

ನಟ ಪ್ರಕಾಶ್ ರಾಜ್ (Prakash Raj) ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ತಂದೆಯಾಗಿ, ವಿಲನ್ ಆಗಿ ಹೀಗೆ ಹಲವು ರೀತಿಯ ಪಾತ್ರಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ಕೆಲವು ವಿವಾದಗಳ ಮೂಲಕವೂ ಅವರು ಸುದ್ದಿ ಆಗಿದ್ದಾರೆ. ಅವರಿಗೆ ಐದು ರಾಷ್ಟ್ರ ಪ್ರಶಸ್ತಿಗಳು ಸಿಕ್ಕಿವೆ. ಈಗ ಅವರು ಕೆಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಓರ್ವ ಹೀರೋ ಅವಾರ್ಡ್ ಗೆದ್ದರೆ ಎಲ್ಲರೂ ಅವರನ್ನು ಅಭಿನಂದಿಸಬೇಕು. ಆದರೆ, ಆ ರೀತಿಯ ಕೆಲಸ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲು ಅರ್ಜುನ್, ದೇವಿ ಶ್ರೀ ಪ್ರಸಾದ್ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆ. ಇವರಿಗೆ ಗೌರವ ಸಲ್ಲಿಸಲು ಮೈತ್ರಿ ಮೂವೀ ಮೇಕರ್ಸ್​ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇಲ್ಲಿ ಅವರು ಮಾತನಾಡಿದ್ದಾರೆ. ‘ರಾಷ್ಟ್ರ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್‌ ಅವರಂಥವರನ್ನು ಸನ್ಮಾನಿಸಲು ಸಿನಿಮಾ ಇಂಡಸ್ಟ್ರಿ ಏಕೆ ಒಗ್ಗೂಡುತ್ತದೆ? ಅವರು ರಾಷ್ಟ್ರಪ್ರಶಸ್ತಿ ಪಡೆದರೆ ಅದು ಎಲ್ಲ ನಟರಿಗೂ ಹೆಮ್ಮೆಯ ವಿಷಯ. ರಾಜಮೌಳಿ ಆಸ್ಕರ್‌ ವಿನ್ ಆದರೆ ಅದು ತೆಲುಗು ಇಂಡಸ್ಟ್ರಿಗೆ ಮತ್ತು ತೆಲುಗು ಜನರಿಗೆ ಹೆಮ್ಮೆಯ ವಿಷಯ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

‘ನನ್ನ ನಟನೆಯನ್ನು ರೆಕಾರ್ಡ್ ಮಾಡಲು ಸಣ್ಣ ಕ್ಯಾಮೆರಾದೊಂದಿಗೆ ಬರುತ್ತಿದ್ದ ಅಲ್ಲು ಅರ್ಜುನ್ ಅವರನ್ನು ನೋಡಿದ್ದೇನೆ. ಈ ಬಾಲಕ ಸಾಧನೆ ಮಾಡುತ್ತಾನೆ ಎಂದು ನಾನು ಭವಿಷ್ಯ ನುಡಿದಿದ್ದೆ. ಏನಾದರು ಮಾಡಬೇಕು ಎಂಬ ಹಸಿವಿನಿಂದ ಅವರು ಈ ಹಂತಕ್ಕೆ ತಲುಪಿದ್ದಾರೆ. ಇವತ್ತು ನನ್ನ ಮಗನಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಂತೆ ಅನಿಸುತ್ತಿದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ತಮಿಳು ನಟ ಸಿದ್ದಾರ್ಥ್ ಬಳಿ ‘ಕನ್ನಡಿಗರ ಪರವಾಗಿ ಕ್ಷಮಿಸಿ’ ಎಂದ ಪ್ರಕಾಶ್ ರಾಜ್

‘ಇತಿಹಾಸ ನೋಡಿದರೆ ರಾಷ್ಟ್ರ ಪ್ರಶಸ್ತಿಗಳ ವಿಚಾರದಲ್ಲಿ ತೆಲುಗು ಸಿನಿಮಾ ದೊಡ್ಡ ಸಾಧನೆ ಮಾಡಿಲ್ಲ. ಆದರೆ ಈಗ ರಾಷ್ಟ್ರದ ಅತ್ಯುತ್ತಮ ನಟ ತೆಲುಗಿನವರು, ಸಂಗೀತ ನಿರ್ದೇಶಕರು ತೆಲುಗಿನವರು ಮತ್ತು ನಿರ್ದೇಶಕರು ತೆಲುಗಿನವರು. ಇಂದು ನಾವು ಅವರ ಸಾಧನೆಯ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಇಲ್ಲಿ ಯುವ ನಿರ್ದೇಶಕರು ಇದ್ದಾರೆ, ಆದರೆ ದೊಡ್ಡ ದೊಡ್ಡ ನಿರ್ದೇಶಕರು ಎಲ್ಲಿದ್ದಾರೆ? ತೆಲುಗು ಚಿತ್ರರಂಗ ಸಾಧನೆ ಮಾಡುತ್ತಿರುವಾಗ ನಮ್ಮದೇ ಕುಟುಂಬದವರು ಮೊದಲು ಅವರನ್ನು ಗೌರವಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ