ಕೊಟ್ಟ ಸೂಚನೆ ನಿರ್ಲಕ್ಷಿಸಿದ ಖ್ಯಾತ ನಿರ್ದೇಶಕ; ಇದುವೇ ಸಿನಿಮಾ ಸೋಲಿಗೆ ಕಾರಣ ಆಯ್ತು?

Leo Movie: ‘ಲಿಯೋ’ ಸಿನಿಮಾದಲ್ಲಿ ಸಾಕಷ್ಟು ತಪ್ಪುಗಳಿವೆ. ಮೊದಲಾರ್ಧ ಮೆಚ್ಚಿಕೊಂಡಿದ್ದ ಜನರು ದ್ವೀತೀಯಾರ್ಧದ ಬಗ್ಗೆ ಟೀಕೆ ಮಾಡಿದ್ದರು. ವಿಜಯ್ ಫ್ಯಾನ್ಸ್ ಲೋಕೇಶ್ ಬಗ್ಗೆ ಕಿಡಿಕಾರಿದ್ದರು.

ಕೊಟ್ಟ ಸೂಚನೆ ನಿರ್ಲಕ್ಷಿಸಿದ ಖ್ಯಾತ ನಿರ್ದೇಶಕ; ಇದುವೇ ಸಿನಿಮಾ ಸೋಲಿಗೆ ಕಾರಣ ಆಯ್ತು?
ವಿಜಯ್

Updated on: Jan 30, 2024 | 7:09 AM

ಕಳೆದ ವರ್ಷ ಅಕ್ಟೋಬರ್​ನಲ್ಲಿ ರಿಲೀಸ್ ಆದ ದಳಪತಿ ವಿಜಯ್ (Thalapathy Vijay) ನಟನೆಯ ‘ಲಿಯೋ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿದೆ ನಿಜ. ಆದರೆ, ಈ ಚಿತ್ರ ವಿಮರ್ಶೆಯಲ್ಲಿ ಸೋತಿದೆ. ಸಿನಿಮಾ ನೋಡಿದ ಯಾರೊಬ್ಬರಿಗೂ ಅದು ಲೋಕೇಶ್ ಕನಗರಾಜ್ ಸಿನಿಮಾ ಎನ್ನುವ ಫೀಲ್ ನೀಡಲೇ ಇಲ್ಲ. ಈಗ ಹಿರಿಯ ನಿರ್ದೇಶಕ ಹಾಗೂ ದಳಪತಿ ವಿಜಯ್ ತಂದೆ ಎಸ್​ಎ ಚಂದ್ರಶೇಖರ್ ಅವರು ಹೇಳಿಕೆ ಒಂದನ್ನು ನೀಡಿದ್ದಾರೆ. ಇದು ಲೋಕೇಶ್ ಬಗ್ಗೆಯೇ ಹೇಳಿದ ಮಾತು ಎಂದು ಎಲ್ಲರೂ ಊಹಿಸುತ್ತಿದ್ದಾರೆ.

‘ಲಿಯೋ’ ಸಿನಿಮಾದಲ್ಲಿ ಸಾಕಷ್ಟು ತಪ್ಪುಗಳಿದ್ದವು. ಮೊದಲಾರ್ಧ ಮೆಚ್ಚಿಕೊಂಡಿದ್ದ ಜನರು ದ್ವೀತೀಯಾರ್ಧದ ಬಗ್ಗೆ ಅಪಸ್ವರ ತೆಗೆದಿದ್ದರು. ವಿಜಯ್ ಫ್ಯಾನ್ಸ್ ಲೋಕೇಶ್ ಬಗ್ಗೆ ಕಿಡಿಕಾರಿದ್ದರು. ಈಗ ಚಂದ್ರಶೇಖರ್ ನೀಡಿರೋ ಹೇಳಿಕೆಯೂ ಚರ್ಚೆ ಹುಟ್ಟುಹಾಕಿದೆ. ಅವರು ಕಳೆದ ವರ್ಷ ಸಿನಿಮಾ ಒಂದನ್ನು ನೋಡಿ ನಿರ್ದೇಶಕರಿಗೆ ಫಿಡ್​ಬ್ಯಾಕ್ ನೀಡಿದ್ದರಂತೆ. ಆದರೆ, ಇದನ್ನು ನಿರ್ದೇಶಕರು ಸ್ವೀಕರಿಸಲೇ ಇಲ್ಲ.

‘ಕಳೆದ ವರ್ಷ ರಿಲೀಸ್​​ಗೂ ಮೊದಲೇ ಸಿನಿಮಾ ಒಂದನ್ನು ನೋಡಿದ್ದೆ. ಸಿನಿಮಾದ ಮೊದಲಾರ್ಧದ ಬಗ್ಗೆ ಮೆಚ್ಚುಗೆ ಸೂಚಿಸಿದಾಗ ನಿರ್ದೇಶಕರು ಖುಷಿ ಆದರು. ದ್ವೀತಿಯಾರ್ಧದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲು ಸೂಚಿಸಿದ್ದೆ. ಆದರೆ, ಆ ನಿರ್ದೇಶಕರು ಈಗ ಬ್ಯುಸಿ ಇದ್ದೇನೆ ಬಳಿಕ ಕರೆ ಮಾಡುತ್ತೇನೆ ಎಂದರು. ಆ ಬಳಿಕ ಅವರು ಕರೆ ಮಾಡಲೇ ಇಲ್ಲ’ ಎಂದಿದ್ದಾರೆ ಚಂದ್ರಶೇಖರ್. ಎಲ್ಲರೂ ಇದು ‘ಲಿಯೋ’ ಸಿನಿಮಾ ಬಗ್ಗೆ ಹೇಳಿದ ಮಾತು ಎಂದು ಊಹಿಸುತ್ತಿದ್ದಾರೆ.

ಇದನ್ನೂ ಓದಿ: ಮಾಜಿ ನೀಲಿಚಿತ್ರತಾರೆ ಸನ್ನಿ ಲಿಯೋನೆ ಹೊಸ ಬಿಸಿನೆಸ್; ಚಿಕಲೋಕ ಆರಂಭ

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ‘ಚಂದ್ರಶೇಖರ್ ಹೇಳಿದ ಮಾತು ಲಿಯೋ ಬಗ್ಗೆ ಎಂಬುದು ಸ್ಪಷ್ಟವಾಗಿದೆ’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ‘ಲಿಯೋ’ ಸಿನಿಮಾದಲ್ಲಿ ದಳಪತಿ ವಿಜಯ್ ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಪತ್ನಿ ಪಾತ್ರದಲ್ಲಿ ತ್ರಿಷಾ ನಟಿಸಿದ್ದರು. ಈ ಸಿನಿಮಾ ‘ಲೋಕೇಶ್ ಕನಗರಾಜ್ ಯೂನಿವರ್ಸ್’ ಅಡಿಯಲ್ಲಿ ಮೂಡಿ ಬಂದಿದೆ. ಅವರ ಈ ಹಿಂದಿನ ಸಿನಿಮಾಗಳಿಗೆ ನೇರ ಕನೆಕ್ಷನ್ ಇಲ್ಲ. ಮುಂಬರುವ ಚಿತ್ರಗಳ ಜೊತೆ ಕನೆಕ್ಷನ್ ನೀಡೋ ಆಲೋಚನೆಯಲ್ಲಿ ಲೋಕೇಶ್ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us