‘ದುಡ್ಡುಕೊಟ್ರೆ ನಿಮಗಿಂತ ಚೆನ್ನಾಗಿ ಕನ್ನಡ ಮಾತಾಡ್ತೀನಿ’ ಎಂದು ಟೀಕೆ; ಖಡಕ್ ಉತ್ತರ ಕೊಟ್ಟ ಬಾದ್ಶಾ
ಬಾದ್ಶಾ ಅವರು ಬಾಲಿವುಡ್ ಸಿಂಗರ್. ಅವರು ಜನಿಸಿದ್ದು ದೆಹಲಿಯಲ್ಲಿ. ಸೆಪ್ಟೆಂಬರ್ 8ರಂದು ಯುವ ದಸರಾ ಕಾರ್ಯಕ್ರಮದಲ್ಲಿ ಬಾದ್ಶಾ ಭಾಗಿ ಆಗಿದ್ದರು. ಈ ವೇಳೆ ಕನ್ನಡದಲ್ಲಿ ಮಾತನಾಡಿದ ಅವರು, ಕನ್ನಡದ ಒಂದು ಹಾಡು ಕೇಳಿ ಸಖತ್ ಎಮೋಷನಲ್ ಆದರು. ಇದನ್ನು ಅನೇಕರು ಟೀಕಿಸಿದ್ದರು.
ಬಾದ್ಶಾ ಅವರು ಇತ್ತೀಚೆಗೆ ಮೈಸೂರು ಯುವ ದಸರಾದಲ್ಲಿ ಭಾಗಿ ಆಗಿದ್ದರು. ಅವರು ಶೋ ಕೊಟ್ಟಿದ್ದರು. ಈ ವೇಳೆ ಬಾದ್ಶಾ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದರು. ಅವರ ಮಾತುಗಳನ್ನು ಕೆಲವರು ಟೀಕೆ ಮಾಡಿದ್ದರು. ‘ಹಣ ಪಡೆದು ಬಾದ್ಶಾ ಕನ್ನಡ ಮಾತನಾಡಿದ್ದಾರೆ ಅಷ್ಟೇ’ ಎಂದೆಲ್ಲ ಟೀಕೆ ವ್ಯಕ್ತವಾಗಿತ್ತು. ಈ ಟ್ವೀಟ್ ಬಾದ್ಶಾಗೂ ಕಾಣಿಸಿದೆ. ಅವರು ಖಡಕ್ ಆಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಾದ್ಶಾ ಮಾತನಾಡಿದ್ದು ಏನು?
ಯುವ ದಸರಾ ವೇದಿಕೆ ಏರಿದ ಬಳಿಕ ಬಾದ್ಶಾ ಕನ್ನಡದಲ್ಲಿ ಮಾತನಾಡಿದ್ದರು. ‘ಇಲ್ಲಿ ಯಾರೂ ಸ್ಟಾರ್ ಅಲ್ಲ, ಯಾರೂ ಸೂಪರ್ಸ್ಟಾರ್ ಕೂಡ ಅಲ್ಲ. ನಾನು ಗಾಯಕ ಅಲ್ಲ, ನಾನು ಒಬ್ಬ ಬರಹಗಾರ. ನನಗೆ ಹೇಗೆ ಬರೆಯಬೇಕು ಎಂಬುದಷ್ಟೇ ಗೊತ್ತು. ನಾನು ಭಾವನೆಗಳನ್ನು ಬರೆಯುತ್ತೇನೆ. ನಾನು ನಿಮ್ಮಲ್ಲಿ ಒಬ್ಬ. ನಿಮ್ಮ ಆಶೀರ್ವಾದಿಂದ ಇಲ್ಲಿದ್ದೇನೆ. ನಾನು ನಿಮಗೆ ಸದಾ ಚಿರರುಣಿ’ ಎಂದು ಬಾದ್ಶಾ ಕನ್ನಡದಲ್ಲಿ ಮಾತನಾಡಿದ್ದರು.
ಟೀಕೆ
ಪರಭಾಷಿಗರು ಬಾದ್ಶಾನ ಟೀಕೆ ಮಾಡಿದ್ದರು. ‘ಕನ್ನಡಿಗರು ಹಣ ಕೊಟ್ಟರೆ ನಾನು ಅವರಿಗಿಂತ ಚೆನ್ನಾಗಿ ಕನ್ನಡ ಮಾತನಾಡುತ್ತೇನೆ’ ಎಂದು ಅಭಿಷೇಕ್ ಜವ್ಲಾ ಎಂಬಾತ ಹೇಳಿದ್ದ. ಈ ಕಮೆಂಟ್ ಸಾಕಷ್ಟು ವೈರಲ್ ಆಗಿತ್ತು. ಇದು ಬಾದ್ಶಾ ಕಣ್ಣಿಗೂ ಬಿದ್ದಿದೆ.
ಏನ್ ಅಂದ್ರು?
ಬಾದ್ ಶಾ ಅವರು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಶೋ ನಡೆಸಿಕೊಡಲು ಹಣ ಪಡೆದಿದ್ದೇನೆ. ಕನ್ನಡ ಮಾತನಾಡಿದ್ದು ಪ್ರೀತಿಯಿಂದ. ಪ್ರೀತಿಯನ್ನು ಹಂಚಿ’ ಎಂದು ಬಾದ್ಶಾ ಟ್ವೀಟ್ ಮಾಡಿದ್ದಾರೆ. ‘ನಿಮ್ಮ ಮೇಲಿನ ಗೌರವ ಹೆಚ್ಚಿತು’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ.
I was paid to do a show, i spoke kannada because of the love. 🙏🧿 spread love. https://t.co/ZNN0zkpKfw
— BADSHAH (@Its_Badshah) October 9, 2024
ಇದನ್ನೂ ಓದಿ: ಯುವ ದಸರಾ ವೇದಿಕೆ ಮೇಲೆ ಕನ್ನಡದ ಈ ನಟನ ಹಾಡು ಕೇಳುತ್ತಿದ್ದಂತೆ ಎಮೋಷನಲ್ ಆದ ಬಾದ್ಶಾ
ಪುನೀತ್ ಹಾಡು
ಪುನೀತ್ ರಾಜ್ಕುಮಾರ್ ನಟನೆಯ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ..’ ಹಾಡನ್ನು ಪ್ಲೇ ಮಾಡಿದಾಗ ಬಾದ್ಶಾ ಭಾವುಕರಾಗಿ ಕೈ ಮುಗಿದಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.