‘ನಮ್ಮ ಬ್ಯಾನರ್​ನಲ್ಲಿ ಸಿನಿಮಾ ಮಾಡಿ​’; ಅಲ್ಲು ಅರ್ಜುನ್ ತಂದೆ ಕೋರಿಕೆಗೆ ತಕ್ಷಣ ಒಪ್ಪಿದ ರಿಷಬ್ ಶೆಟ್ಟಿ

ಚಿತ್ರ ಒಳ್ಳೆಯ ಬಿಸ್ನೆಸ್ ಮಾಡುತ್ತಿದೆ. ಹೀಗಾಗಿ, ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್​ಗೆ ಒಳ್ಳೆಯ ಲಾಭ ಆಗಿದೆ. ಇದೇ ಖುಷಿಯಲ್ಲಿ ಅವರು ರಿಷಬ್ ಜತೆ ಸಿನಿಮಾ ಮಾಡು ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕೆ ರಿಷಬ್ ಓಕೆ ಎಂದಿದ್ದಾರೆ.  

‘ನಮ್ಮ ಬ್ಯಾನರ್​ನಲ್ಲಿ ಸಿನಿಮಾ ಮಾಡಿ​’; ಅಲ್ಲು ಅರ್ಜುನ್ ತಂದೆ ಕೋರಿಕೆಗೆ ತಕ್ಷಣ ಒಪ್ಪಿದ ರಿಷಬ್ ಶೆಟ್ಟಿ
ರಿಷಬ್, ಅಲ್ಲು ಅರ್ಜುನ್, ಅಲ್ಲು ಅರವಿಂದ್
Edited By:

Updated on: Oct 20, 2022 | 2:03 PM

ರಿಷಬ್ ಶೆಟ್ಟಿ (Rishab Shetty) ಅವರ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ‘ಕಿರಿಕ್ ಪಾರ್ಟಿ’, ‘ಸ.ಹಿ.ಪ್ರಾ. ಶಾಲೆ ಕಾಸರಗೋಡು’ ಅಂತಹ ಸೂಪರ್ ಹಿಟ್ ಚಿತ್ರ ನೀಡಿರುವ ಅವರಿಗೆ ‘ಕಾಂತಾರ’ದಿಂದ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದೆ. ಈ ಚಿತ್ರವನ್ನು ಪರಭಾಷಿಗರು ಕೂಡ ಒಪ್ಪಿದ್ದಾರೆ. ಈಗ ರಿಷಬ್ ಶೆಟ್ಟಿ ಖ್ಯಾತಿ ಹೆಚ್ಚಿದೆ. ಅವರು ಅಲ್ಲು ಅರ್ಜುನ್ (Allu Arjun) ತಂದೆ ಅಲ್ಲು ಅರವಿಂದ್ ಅವರ ‘ಗೀತಾ ಆರ್ಟ್ಸ್​’ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲು ಒಪ್ಪಿದ್ದಾರೆ. ಈ ಮಾತನ್ನು ಸ್ವತಃ ಅಲ್ಲು ಅರವಿಂದ್ ಅವರು ಖಚಿತಪಡಿಸಿದ್ದಾರೆ.

‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಸ್ಯಾಂಡಲ್​ವುಡ್​ ಮಂದಿ ಒಳ್ಳೆಯ ರೇಟಿಂಗ್ ನೀಡಿದರು. ಇದನ್ನು ನೋಡಿ ಪರಭಾಷಿಗರಿಗೂ ಕುತೂಹಲ ಹೆಚ್ಚಿತು. ಅವರು ಕೂಡ ಸಿನಿಮಾ ನೋಡಲು ಆಸಕ್ತಿ ತೋರಿದರು. ಈ ಸಿನಿಮಾ ಹಿಂದಿ, ತೆಲುಗು ಹಾಗೂ ತಮಿಳಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತು. ಇಂದು (ಅಕ್ಟೋಬರ್ 20) ಚಿತ್ರ ಮಲಯಾಳಂನಲ್ಲಿ ರಿಲೀಸ್ ಆಗಿದೆ. ಈ ಬೆನ್ನಲ್ಲೇ ಹೊಸ ಸುದ್ದಿ ಹೊರಬಿದ್ದಿದೆ.

‘ಕಾಂತಾರ’ ಚಿತ್ರವನ್ನು ತೆಲುಗಿನಲ್ಲಿ ಅಲ್ಲು ಅರವಿಂದ್ ಹಂಚಿಕೆ ಮಾಡಿದ್ದಾರೆ. ಈ ಸಿನಿಮಾವನ್ನು ಅವರು 3 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರು ಎನ್ನಲಾಗಿದೆ. ಈಗ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡುತ್ತಿದೆ. ಹೀಗಾಗಿ, ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್​ಗೆ ಒಳ್ಳೆಯ ಲಾಭ ಆಗಿದೆ. ಇದೇ ಖುಷಿಯಲ್ಲಿ ಅವರು ರಿಷಬ್ ಜತೆ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕೆ ರಿಷಬ್ ಓಕೆ ಎಂದಿದ್ದಾರೆ.

ಇದನ್ನೂ ಓದಿ
Kantara Movie: ‘ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತ’; ರಿಷಬ್ ಸಿನಿಮಾಗೆ ಪ್ರಭಾಸ್​ ಹೊಗಳಿಕೆ
Sapthami Gowda: ಜನರ ಮಧ್ಯೆ ‘ಕಾಂತಾರ’ ನಾಯಕಿ ಸಪ್ತಮಿ ಗೌಡ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?

ಇತ್ತೀಚೆಗೆ ಅಲ್ಲು ಅರವಿಂದ್ ಅವರು ಮಾಧ್ಯಮದ ಜತೆ ಈ ವಿಚಾರ ಹಂಚಿಕೊಂಡಿದ್ದಾರೆ. ‘ಗೀತಾ ಆರ್ಟ್ಸ್‌ ಬ್ಯಾನರ್ ಅಡಿಯಲ್ಲಿ ತುರ್ತಾಗಿ ಒಂದು ಸಿನಿಮಾ ಮಾಡುವಂತೆ ರಿಷಬ್‌ಗೆ ಕೇಳಿದೆ. ಅವರು ತಕ್ಷಣ ಒಪ್ಪಿಕೊಂಡರು. ನಾವು ಶೀಘ್ರದಲ್ಲೇ ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ. ಈ ವಿಚಾರ ಕೇಳಿ ರಿಷಬ್ ಫ್ಯಾನ್ಸ್ ಖುಷಿಯಾಗಿದ್ದಾರೆ.

ಇದನ್ನೂ ಓದಿ: ‘ಕಾಂತಾರ’ ಮಸ್ತ್ ಕಲೆಕ್ಷನ್; ‘ವಿಕ್ರಾಂತ್ ರೋಣ’ ಕಲೆಕ್ಷನ್ ಹಿಂದಿಕ್ಕಲು ಕೆಲವೇ ಕೋಟಿ ಬಾಕಿ

ಅಲ್ಲು ಅರವಿಂದ್ ಬ್ಯಾನರ್ ಅಡಿಯಲ್ಲಿ ಸಿದ್ಧವಾಗುವ ಸಿನಿಮಾಗೆ ರಿಷಬ್ ಅವರು ನಿರ್ದೇಶನ ಮಾಡುತ್ತಾರಾ ಅಥವಾ ನಟಿಸುತ್ತಾರಾ ಎಂಬ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ರಿಷಬ್​ಗೆ ತೆಲುಗು ಮಾತ್ರವಲ್ಲದೆ ಬೇರೆ ಭಾಷೆಗಳಿಂದಲೂ ಸಾಕಷ್ಟು ಆಫರ್ ಬರುತ್ತಿದೆ.

Published On - 11:53 am, Thu, 20 October 22