ಕಾಲಿಟ್ಟಲ್ಲೆಲ್ಲ ಕಾಂಟ್ರವರ್ಸಿ ಮಾಡಿಕೊಳ್ಳುವುದು ನಟಿ ಕಂಗನಾ ರಣಾವತ್ ಅವರ ಗುಣ. ತಮಗೆ ಸಂಬಂಧವೇ ಇಲ್ಲದ ವಿಚಾರಗಳಿಗೆ ತಲೆ ಹಾಕಿ ಕಿರಿಕ್ ಮಾಡಿಕೊಳ್ಳುವ ಈ ನಟಿ ಕೆಲವೇ ದಿನಗಳ ಹಿಂದೆ ಟಿಟ್ವಿರ್ನಿಂದ ಹೊರದಬ್ಬಿಸಿಕೊಂಡಿದ್ದರು. ಟ್ವಿಟರ್ನ ನಿಯಮಗಳನ್ನು ಪದೇಪದೇ ಉಲ್ಲಂಘನೆ ಮಾಡಿದ್ದಕ್ಕಾಗಿ ಶಾಶ್ವತವಾಗಿ ಅವರ ಖಾತೆಯನ್ನು ಟ್ವಿಟರ್ ಡಿಲೀಟ್ ಮಾಡಿತ್ತು. ಆ ನಂತರ ಕಂಗನಾ ಇನ್ಸ್ಟಾಗ್ರಾಮ್ಗೆ ಶಿಫ್ಟ್ ಆಗಿದ್ದಾರೆ. ಆದರೆ ಇನ್ಸ್ಟಾಗ್ರಾಮ್ನಲ್ಲಿಯೂ ಅವರು ಹೆಚ್ಚು ದಿನ ಉಳಿಯುವ ಲಕ್ಷಣ ಕಾಣಿಸುತ್ತಿಲ್ಲ.
ದೇಶದ ತುಂಬೆಲ್ಲ ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಮಹಾಮಾರಿಗೆ ಬಲಿ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಕಂಗನಾಗೂ ಕೊರೊನಾ ಪಾಸಿಟಿವ್ ಆಗಿತ್ತು. ಅದನ್ನು ಅಭಿಮಾನಿಗಳಿಗೆ ತಿಳಿಸುವ ಸಲುವಾಗಿ ಅವರು ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಆದರೆ ಆ ಪೋಸ್ಟ್ ಈಗ ಮಾಯವಾಗಿದೆ. ಅಂದರೆ, ಅದನ್ನು ಇನ್ಸ್ಟಾಗ್ರಾಮ್ ಡಿಲೀಟ್ ಮಾಡಿದೆ!
ತಾವು ಕೊರೊನಾ ಪಾಸಿಟಿವ್ ಆಗಿರುವುದನ್ನು ತಿಳಿಸುವ ಸಲುವಾಗಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದ ಕಂಗನಾ, ‘ಕೊರೊನಾ ಒಂದು ಸಣ್ಣ ಜ್ವರ’ ಎಂದು ಬರೆದುಕೊಂಡಿದ್ದರು. ಇಡೀ ದೇಶದಲ್ಲಿ ಸಾವಿರಾರು ಜನರು ಕೊರೊನಾದಿಂದ ಸಾಯುತ್ತಿರುವಾಗ ಅದನ್ನು ಒಂದು ಸಣ್ಣ ಜ್ವರ ಎಂದು ಹೇಳಿ ತಪ್ಪು ಮಾಹಿತಿ ಹರಡಿ, ಎಲ್ಲರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಕ್ಕಾಗಿ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಕಮೆಂಟ್ಗಳ ಮೂಲಕ ಕಂಗನಾಗೆ ಛೀಮಾರಿ ಹಾಕಿದ್ದರು. ಪರಿಣಾವಾಗಿ ಕಂಗನಾ ಅವರ ಆ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ಡಿಲಿಟ್ ಮಾಡಿದೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಕೊವಿಡ್ ನಾಶ ಮಾಡುತ್ತೇನೆ ಎಂದು ಹೇಳಿದ್ದ ಪೋಸ್ಟ್ನಿಂದ ಕೆಲವರಿಗೆ ಹರ್ಟ್ ಆಗಿದ್ದರಿಂದ ಅದನ್ನು ಇನ್ಸ್ಟಾಗ್ರಾಮ್ ಡಿಲೀಟ್ ಮಾಡಿದೆ. ಟ್ವಿಟರ್ನಲ್ಲಿ ಭಯೋತ್ಪಾದಕರಿಗೆ ಮತ್ತು ಕಮ್ಯೂನಿಸ್ಟ್ಗಳಿಗೆ ಬೆಂಬಲ ನೀಡುವವರ ಬಗ್ಗೆ ಕೇಳಿದ್ದೆ. ಆದರೆ ಇನ್ಸ್ಟಾಗ್ರಾಮ್ನಲ್ಲಿ ಕೊವಿಡ್ ಫ್ಯಾನ್ ಕ್ಲಬ್ ಇರುವುದು ಅದ್ಭುತ. ನಾನು ಇನ್ಸ್ಟಾಗ್ರಾಮ್ಗೆ ಬಂದು 2 ದಿನ ಆಯ್ತು. ಇಲ್ಲಿ ಒಂದು ವಾರಕ್ಕಿಂತ ಹೆಚ್ಚು ಕಾಲ ಇರುತ್ತೇನೆ ಎಂದು ನನಗೆ ಅನಿಸುತ್ತಿಲ್ಲ’ ಎಂದು ಕಂಗನಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
Kangana Ranaut: ಕಂಗನಾ ರಣಾವತ್ಗೆ ಕೊರೊನಾ ಪಾಸಿಟಿವ್; ಇದೊಂದು ಸಣ್ಣ ಜ್ವರ ಎಂದ ನಟಿ
Kangana Ranaut: ಕಂಗನಾ ರಣಾವತ್ ಟ್ವಿಟರ್ ಖಾತೆ ಸಸ್ಪೆಂಡ್; ವಿಡಿಯೋ ಮೂಲಕ ಕಣ್ಣೀರು ಹಾಕಿದ ನಟಿ