ಇತ್ತೀಚೆಗೆ ಇನ್ಸ್ಟಾಗ್ರಾಮ್ ರೀಲ್ಸ್ ಸಖತ್ ಟ್ರೆಂಡಿಂಗ್ನಲ್ಲಿದೆ. ಪ್ರವಾಸಿ ಸ್ಥಳಕ್ಕೆ ತೆರಳಿದರೆ ಸಾಕು ಅನೇಕರು ರೀಲ್ಸ್ ಮಾಡೋಕೆ ಆರಂಭಿಸುತ್ತಾರೆ. ಈಗ ಮಳೆಗಾಲ ಆರಂಭ ಆಗಿದೆ. ಹೊರಗೆ ಸುರಿವ ಮಳೆಗೆ ಡ್ಯಾನ್ಸ್ ಮಾಡಿ ರೀಲ್ಸ್ ಮಾಡಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ. ಆದರೆ ಒಳ್ಳೆಯ ಸಾಂಗ್ ಸಿಕ್ಕಿರುವುದಿಲ್ಲ. ಹಾಗಾದರೆ, ನಾವು ಆ ರೀತಿಯ ಒಂದು ಹಾಡಿನ ಬಗ್ಗೆ ವಿವರಿಸುತ್ತಿದ್ದೇವೆ. ಇದು ನೇಪಾಳಿ (Nepali) ಭಾಷೆಯ ಹಾಡು. ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಯಾವುದು ಆ ಹಾಡು? ‘ಬಾದಲ್ ಬರ್ಸಾ ಬೀಜುಲಿ..’ (Badal Barsa Bijuli).
ರೀಲ್ಸ್ನಲ್ಲಿ ಹಳೆಯ ಸಾಂಗ್ಗಳು, ದೇಶ ವಿದೇಶದ ಹಾಡುಗಳು ವೈರಲ್ ಆಗುತ್ತವೆ. ಅದಕ್ಕೆ ಕಾರಣ ಬೇಕಿರುವುದಿಲ್ಲ. ಹಾಡಿನ ಮ್ಯೂಸಿಕ್ ಚೆನ್ನಾಗಿದ್ದರೆ ಅಷ್ಟೇ ಸಾಕಾಗುತ್ತದೆ. ಇದಕ್ಕೆ ಹೊಸ ಉದಾಹರಣೆ ‘ಬಾದಲ್ ಬರ್ಸಾ ಬೀಜುಲಿ..’ ಹಾಡು. ಇದು ನೇಪಾಳಿ ಸಿನಿಮಾ ‘ಕರ್ತಬ್ಯ’ ಸಿನಿಮಾದ ಹಾಡು. ಈ ಸಿನಿಮಾ ತೆರೆಗೆ ಬಂದಿದ್ದು 2004ರಲ್ಲಿ ಅನ್ನೋದು ವಿಶೇಷ. ಇದರ ಕವರ್ ವರ್ಷನ್ನ ಆನಂದ ಕರ್ಕಿ ಹಾಗೂ ಪ್ರಶ್ನಾ ಶಕ್ಯ ಹಾಡಿದ್ದಾರೆ.
‘ಬಾದಲ್ ಬರ್ಸಾ ಬೀಜುಲಿ..’ ಮಾನ್ಸೂನ್ ಬಗ್ಗೆ ಇರುವ ಸಾಂಗ್. ಪೂರ್ತಿ ಹಾಡು ಮುಂಗಾರು ಮಳೆ, ತಂಪಾದ ವಾತಾವರಣದ ಬಗ್ಗೆಯೇ ಇದೆ. ಈ ಕಾರಣದಿಂದಲೇ ಮಳೆಗಾಲದಲ್ಲಿ ಈ ಹಾಡು ವೈರಲ್ ಆಗುತ್ತಿದೆ. ಆದರೆ, ಬಹುತೇಕರಿಗೆ ಇದು ನೇಪಾಳಿ ಸಿನಿಮಾದ ಹಾಡು ಎಂಬ ವಿಚಾರ ಗೊತ್ತಿಲ್ಲ.
ಇದನ್ನೂ ಓದಿ: ಹೊರಬಿತ್ತು ‘ಸೀತಾ ರಾಮ’ ಟಿಆರ್ಪಿ; ಟಾಪ್ 10ರಲ್ಲಿ ಈ ಧಾರಾವಾಹಿಗೆ ಎಷ್ಟನೇ ಸ್ಥಾನ?
ಕನ್ನಡದ ಕಿರುತೆರೆ ನಟಿಯರು ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ನಟಿ ಸಾರಾ ಅಣ್ಣಯ್ಯ ಮೊದಲಾದವರು ಈ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ. ಈ ರೀಲ್ಸ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಾಡಿಗೆ ನೀವು ಕೂಡ ಡ್ಯಾನ್ಸ್ ಮಾಡಬಹುದು.
(ವಿ.ಸೂ: ರೀಲ್ಸ್ ಮಾಡುವಾಗ ಎಚ್ಚರಿಕೆಯಿಂದ ಇರಿ. ಇದರಿಂದ ಪ್ರಾಣಕ್ಕೆ ತೊಂದರೆ ಆಗಬಹುದು. ಅಪಾಯ ಸ್ಥಳಗಳಲ್ಲಿ ರೀಲ್ಸ್ ಮಾಡುವುದನ್ನು ಟಿವಿ9 ಪ್ರೋತ್ಸಾಹಿಸುವುದಿಲ್ಲ.)
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Thu, 27 July 23