‘ಪುಷ್ಪ 2’, ‘ಬಾಹುಬಲಿ 2’ ದಾಖಲೆ ಮುರಿದ ‘ಇರುಮುಡಿ’
Irumudi movie record: ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಯ್ತು ತೆಲುಗು ಸಿನಿಮಾ ‘ಇರುಮುಡಿ’. ‘ಟಾಕ್ಸಿಕ್’ನಿಂದ ಪ್ರಬಲ ಸ್ಪರ್ಧೆ ಇದ್ದರೂ ಸಹ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಇದೀಗ ಈ ಸಿನಿಮಾ ಸಾರ್ವಕಾಲಿಕ ಬ್ಲಾಕ್ ಬಸ್ಟರ್ಗಳು ಎನಿಸಿಕೊಂಡಿರುವ ‘ಪುಷ್ಪ 2’ ಮತ್ತು ‘ಬಾಹುಬಲಿ 2’ ಸಿನಿಮಾಗಳ ದಾಖಲೆಗಳನ್ನು ಸಹ ಮುರಿದಿದೆ.

ಮುಖ್ಯಾಂಶಗಳು
- ದಾಖಲೆಗಳನ್ನು ಬರೆಯುತ್ತಿದೆ ತೆಲುಗು ಸಿನಿಮಾ ‘ಇರುಮುಡಿ’
- ‘ಇರುಮುಡಿ’ ಸಿನಿಮಾ ಇದೀಗ ಪುಷ್ಪ 2, ಬಾಹುಬಲಿ 2 ದಾಖಲೆಗಳ ಮುರಿದಿದೆ.
- ‘ಇರುಮುಡಿ’ ಸಿನಿಮಾ ಮುರಿದ ದಾಖಲೆಗಳು ಯಾವುವು?
ಸಿನಿಮಾದ (Cinema) ಬಜೆಟ್ಗೂ ಬಾಕ್ಸ್ ಆಫೀಸ್ ಪ್ರದರ್ಶನಕ್ಕೂ ಸಂಬಂಧವಿಲ್ಲ ಎಂಬುದನ್ನು ‘ಇರುಮುಡಿ’ ಸಿನಿಮಾ ಸಾಬೀತು ಮಾಡುತ್ತಿದೆ. 500-1000 ಕೋಟಿ ಬಜೆಟ್ ಕಾಲದಲ್ಲಿ ಕೇವಲ 40 ಕೋಟಿ ಬಜೆಟ್ ಹಾಕಿ, ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕುತ್ತಿದೆ ಈ ಸಿನಿಮಾ. ಬಾಕ್ಸ್ ಆಫೀಸ್ನಲ್ಲಿ ‘ಇರುಮುಡಿ’ ಚಿತ್ರದ ಅಸಾಧಾರಣ ಓಟ ಮುಂದುವರಿದಿದ್ದು, ಈಗ ಇದು ಕೆಲವು ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಸಿನಿಮಾಗಳ ದಾಖಲೆಗಳನ್ನು ಸಹ ಮುರಿದು ಮೂಲೆಗುಂಪು ಮಾಡುತ್ತಿದೆ. ಸಿನಿಮಾ ಬಿಡುಗಡೆ ಆಗಿ ಎರಡು ವಾರವಾಗಿದ್ದು, ಎರಡನೇ ವಾರಕ್ಕೆ ಚಿತ್ರ ಕಾಲಿಟ್ಟಿದೆ. ಇದೀಗ ಸಿನಿಮಾ ‘ಪುಷ್ಪ 2’, ‘ಬಾಹುಬಲಿ 2’, ‘ಕಲ್ಕಿ 2898 ಎಡಿ’ ಸಿನಿಮಾದ ದಾಖಲೆಗಳನ್ನು ಮುರಿದಿದೆ.
ಎರಡನೇ ಶುಕ್ರವಾರ ‘ಇರುಮುಡಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸುಮಾರು 12 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆಲ್ಟೈಮ್ ಬ್ಲಾಕ್ ಬಸ್ಟರ್ ಸಿನಿಮಾ ‘ಬಾಹುಬಲಿ 2’ ತನ್ನ ಎರಡನೇ ಶುಕ್ರವಾರ ಸುಮಾರು 10.5 ಕೋಟಿ ಗಳಿಸಿತ್ತು, ‘ಪುಷ್ಪ 2’ ಮತ್ತು ‘ಕಲ್ಕಿ 2898 AD’ ಚಿತ್ರಗಳು ಅನುಕ್ರಮವಾಗಿ ಸರಿಸುಮಾರು 9 ಕೋಟಿ ಮತ್ತು 7 ಕೋಟಿ ಗಳಿಸಿದ್ದವು. ‘ಆರ್ಆರ್ಆರ್’ ಸಿನಿಮಾ ಮಾತ್ರವೇ 15 ಕೋಟಿ ಗಳಿಸಿತ್ತು. ಇದೀಗ ‘ಇರುಮುಡಿ’ ಸಿನಿಮಾ ‘ಆರ್ಆರ್ಆರ್’ಗೆ ಹತ್ತಿರದಲ್ಲಿದೆ.
‘ಇರುಮುಡಿ’ ಚಿತ್ರ ಎರಡನೇ ವಾರದಲ್ಲೂ ಸಹ ಯಾವ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂಬುದಕ್ಕೆ ಸಿನಿಮಾದ ಎರಡನೇ ವಾರದ ಗಳಿಕೆಯೇ ಸಾಕ್ಷಿ. ಆಗಸ್ಟ್ 21 ರಂದು ಬಿಡುಗಡೆ ಆದ ‘ಇರುಮುಡಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದ್ದು, ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾದ ಬಜೆಟ್ ಅನ್ನು ಮರಳಿ ಪಡೆದು ದಾಖಲೆ ಬರೆದಿತ್ತು. ಇದೀಗ ಸಿನಿಮಾ ಎರಡನೇ ಶುಕ್ರವಾರದಂದು ಅತಿ ಹೆಚ್ಚು ಮೊತ್ತ ಗಳಿಸಿದ ಸಿನಿಮಾ ಎನಿಸಿಕೊಂಡಿದೆ.
ಇದನ್ನೂ ಓದಿ:ಮುಂಬೈನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ಶಿವಣ್ಣ, ಆರ್. ಚಂದ್ರು
ಆಗಸ್ಟ್ 21ರಂದು ‘ಇರುಮುಡಿ’ ಸಿನಿಮಾ ಬಿಡುಗಡೆ ಆಗಿದ್ದು, ಈ ಸಿನಿಮಾಕ್ಕೆ ‘ಟಾಕ್ಸಿಕ್’ ಸಿನಿಮಾ ಪ್ರಬಲ ಸ್ಪರ್ಧೆ ನೀಡಿದೆ. ಹಾಗಿದ್ದರೂ ಸಹ ‘ಇರುಮುಡಿ’ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆಯನ್ನು ಮುಂದುವರೆಸಿದೆ. ಸಿನಿಮಾಕ್ಕೆ ಕುಟುಂಬ ಪ್ರೇಕ್ಷಕರು ತಂಡೋಪತಂಡವಾಗಿ ಬರುತ್ತಿದ್ದು, ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಜೊತೆಗೆ ಸಿನಿಮಾದ ಬಗ್ಗೆ ಬಾಯಿ ಪ್ರಚಾರ (ವರ್ಡ್ ಆಫ್ ಮೌತ್) ಬಹಳ ಚೆನ್ನಾಗಿದ್ದು, ಇದೇ ಕಾರಣಕ್ಕೆ ಹೆಚ್ಚು-ಹೆಚ್ಚು ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಿದ್ದಾರೆ.
‘ಇರುಮುಡಿ’ ಸಿನಿಮಾನಲ್ಲಿ ರವಿತೇಜ ನಾಯಕನಾಗಿ ನಟಿಸಿದ್ದಾರೆ. ಸಿನಿಮಾದ ಹೆಸರೇ ಹೇಳುವಂತೆ ಇರು ಅಯ್ಯಪ್ಪ ಸ್ವಾಮಿ ಭಕ್ತನ ಕತೆ. ಜೊತೆಗೆ ಸಿನಿಮಾನಲ್ಲಿ ಅಪ್ಪ-ಮಗಳ ಸೆಂಟಿಮೆಂಟ್ ಸಹ ಇದೆ. ಹಾಗೂ ಸಿನಿಮಾನಲ್ಲಿ ಅದ್ಭುತವಾದ ಸಸ್ಪೆನ್ಸ್ ಥ್ರಿಲ್ಲರ್ ಅಂಶ, ಆಕ್ಷನ್ ಜೊತೆಗೆ ಕಾಮಿಡಿ ಸಹ ಸಿನಿಮಾನಲ್ಲಿದೆ. ಸಿನಿಮಾ ಅನ್ನು ಕೃಪ ನಿರ್ವಾನ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




