AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಸೂಪರ್ ಹಿಟ್ ಸಿನಿಮಾಗಳು: ಇಲ್ಲಿದೆ ಪಟ್ಟಿ

OTT Release this week: ಈ ವಾರ ಚಿತ್ರಮಂದಿರದಲ್ಲಿ ‘ಟಾಕ್ಸಿಕ್’ ಅಬ್ಬರಿಸುತ್ತಿದೆ. ಜೊತೆಗೆ ತೆಲುಗಿನ ‘ಇರುಮುಡಿ’ ಸಹ ಇದೆ. ಚಿತ್ರಮಂದಿರಗಳ ರೀತಿಯಲ್ಲೇ ಒಟಿಟಿಗೂ ಸಹ ಕೆಲವು ಸೂಪರ್ ಹಿಟ್ ಸಿನಿಮಾಗಳು ಈ ವಾರ ಲಗ್ಗೆ ಇಟ್ಟಿವೆ. ಅದರಲ್ಲೂ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆದ ಸಿನಿಮಾ ಒಂದು ಈ ವಾರ ಒಟಿಟಿಗೆ ಬಂದಿದೆ. ಈ ವಾರ ಒಟಿಟಿಗೆ ಬಂದಿರುವ ಹೊಸ ಸಿನಿಮಾ ಯಾವುವು? ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ನೋಡಿ ಮಾಹಿತಿ...

ಮಂಜುನಾಥ ಸಿ.
|

Updated on: Aug 29, 2026 | 3:04 PM

Share
ಪಾಪ್ ಲಿಜೆಂಡ್ ಮೈಖಲ್ ಜಾಕ್ಸನ್ ಜೀವನ ಆಧರಿಸಿದ ‘ಮೈಖಲ್’ ಸಿನಿಮಾ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆಯಿತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ‘ಮೈಖಲ್’ ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ನ ಪಿಕಾಕ್ ಹಬ್​​ನಲ್ಲಿ ವೀಕ್ಷಿಸಬಹುದಾಗಿದೆ.

1 / 6
ರಾಜ್ ಬಿ ಶೆಟ್ಟಿ ನಟಿಸಿರುವ ಮೊದಲ ಹಿಂದಿ ಸಿನಿಮಾ ‘ಬಂದರ್’ ಈ ವಾರ ಒಟಿಟಿಗೆ ಬಂದಿದೆ. ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಅನ್ನು ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಒಂದು ಹಾಡಂತೂ ದೊಡ್ಡ ಹಿಟ್ ಆಗಿದೆ. ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.

2 / 6
ಕೆಲಸದಿಂದ ಅಮಾನತ್ತಾಗಿರುವ ಎಎಸ್​​ಐ ಬಬಿತಾ ಸಿಂಗ್, ತನ್ನ ಸಹೋದರಿಯ ಸೀಮಂತದಲ್ಲಿ ಪಾಲ್ಗೊಳ್ಳಲು ಹಳ್ಳಿಗೆ ಹೋಗುತ್ತಾಳೆ. ಅಲ್ಲಿ ಆಕೆಯ ಬಾಲ್ಯದ ಗೆಳೆಯನ ಕೊಲೆ ಆಗುತ್ತದೆ. ಅಮಾನತ್ತಿನಲ್ಲಿದ್ದರೂ ಆ ಕೇಸಿನ ತನಿಖೆಯನ್ನು ಬಬಿತಾ ಮಾಡುತ್ತಾಳೆ ಆ ಹಾದಿಯಲ್ಲಿ ಎದುರಾಗುವ ಕಷ್ಟಗಳ ಕತೆಯನ್ನು ‘ಬಬಿತಾ ಸಿಂಗ್ ರಿಪೋರ್ಟಿಂಗ್’ ಸಿನಿಮಾ ಒಳಗೊಂಡಿದೆ. ನಿಮಿಷಾ ಸಜಯನ್ ಸಿನಿಮಾದ ನಾಯಕಿ. ಅಮೆಜಾನ್ ಪ್ರೈಂನಲ್ಲಿ ಸಿನಿಮಾ ಲಭ್ಯವಿದೆ.

3 / 6
ಆಲಿಯಾ ಭಟ್, ಶರ್ವರಿ ವಾಘ್ ನಟನೆಯ ‘ಆಲ್ಫಾ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಯಶ್ ರಾಜ್ ಫಿಲಮ್ಸ್ ಅವರ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಇದೊಂದು ಸ್ಪೈ ಯೂನಿವರ್ಸ್ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಈ ಸಿನಿಮಾವನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

4 / 6
ಹಾಸ್ಯಮಯ ಲವ್ ಸ್ಟೋರಿ ಸಿನಿಮಾ ‘ಅನ್ಬೆ ಡಯಾನ’. ಚೆನ್ನೈನಲ್ಲಿ ವಾಸವಾಗಿರುವ ತೆಲುಗು ಕುಟುಂಬದ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಸೋನಿ ಲಿವ್​​ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಗಮನ ಸೆಳೆದಿದೆ.

5 / 6
ಪೃಥ್ವಿರಾಜ್ ಸುಕುಮಾರನ್ ಹಾಗೂ ಪಾರ್ವತಿ ಮೆನನ್ ಒಟ್ಟಿಗೆ ನಟಿಸಿರುವ ಮಲಯಾಳಿ ಸಿನಿಮಾ ‘ಐ ನೋಬಡಿ’ ಈ ವಾರ ಒಟಿಟಿಗೆ ಬಂದಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಅಸಾಮಾನ್ಯ ಸನ್ನಿವೇಶದಲ್ಲಿ ಸಿಲುಕಿಕೊಂಡ ಮೇಲೆ ಅವನ ಬದುಕೇ ಬದಲಾಗಿ ಹೋಗುತ್ತದೆ. ಸಾಮಾನ್ಯನೊಬ್ಬನ ಅಸಾಮಾನ್ಯ ಕತೆ ‘ಐ ನೋಬಡಿ’. ಈ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

6 / 6
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ

ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ

ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ

ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ

ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ

ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ

ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ

ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ