AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸರ್ಕಾರಿ ಕೆಲಸದ ಕನಸೇ? UPSC ಯಿಂದ 127 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ!

ಯುಪಿಎಸ್‌ಸಿ 2027ರ ಸಂಯೋಜಿತ ಭೂ-ವಿಜ್ಞಾನಿ ಪರೀಕ್ಷೆಯ ಅಧಿಸೂಚನೆ ಹೊರಡಿಸಿದ್ದು, GSI ಮತ್ತು CGWB ನಲ್ಲಿ ಒಟ್ಟು 127 ಗ್ರೂಪ್ A ಮತ್ತು B ಹುದ್ದೆಗಳನ್ನು ಭರ್ತಿ ಮಾಡಲಿದೆ. ಸೆಪ್ಟೆಂಬರ್ 22ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಿ. ಭೂವಿಜ್ಞಾನ, ರಸಾಯನಶಾಸ್ತ್ರ, ಭೂಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ 21-32 ವಯಸ್ಸಿನ ಅಭ್ಯರ್ಥಿಗಳು ಅರ್ಹರು. ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

ಕೇಂದ್ರ ಸರ್ಕಾರಿ ಕೆಲಸದ ಕನಸೇ? UPSC ಯಿಂದ 127 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ!
ಕೇಂದ್ರ ಲೋಕಸೇವಾ ಆಯೋಗImage Credit source: Getty Images
ಅಕ್ಷತಾ ವರ್ಕಾಡಿ
|

Updated on: Sep 18, 2026 | 2:13 PM

Share

ಕೇಂದ್ರ ಲೋಕಸೇವಾ ಆಯೋಗವು (UPSC) 2027ರ ಸಂಯೋಜಿತ ಭೂ-ವಿಜ್ಞಾನಿ (Combined Geo-Scientist) ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯ ಮೂಲಕ ಗಣಿ ಸಚಿವಾಲಯದ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ಹಾಗೂ ಜಲಶಕ್ತಿ ಸಚಿವಾಲಯದ ಕೇಂದ್ರೀಯ ಅಂತರ್ಜಲ ಮಂಡಳಿ (CGWB) ಯಲ್ಲಿ ಖಾಲಿಯಿರುವ ಒಟ್ಟು 127 ಗ್ರೂಪ್ A ಮತ್ತು ಗ್ರೂಪ್ B ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 22 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ವಿಭಾಗದ ಹುದ್ದೆಗಳು:

ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI – ವರ್ಗ I) ಅಡಿಯಲ್ಲಿ ಒಟ್ಟು 111 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಗ್ರೂಪ್-ಎ ವಿಭಾಗದಲ್ಲಿ 29 ಭೂವಿಜ್ಞಾನಿ (Geologist) ಹಾಗೂ 07 ಕೆಮಿಸ್ಟ್ (Chemist) ಹುದ್ದೆಗಳಿವೆ. ಇವುಗಳ ಜೊತೆಗೆ ಗ್ರೂಪ್-ಬಿ ವಿಭಾಗದಲ್ಲಿ 34 ಸಹಾಯಕ ಭೂವಿಜ್ಞಾನಿ (Assistant Geologist), 35 ಸಹಾಯಕ ಭೂಭೌತಶಾಸ್ತ್ರಜ್ಞ (Assistant Geophysicist) ಹಾಗೂ 06 ಸಹಾಯಕ ರಸಾಯನಶಾಸ್ತ್ರಜ್ಞ (Assistant Chemist) ಹುದ್ದೆಗಳು ಸೇರಿವೆ.

ಕೇಂದ್ರೀಯ ಅಂತರ್ಜಲ ಮಂಡಳಿ (CGWB) ವಿಭಾಗದ ಹುದ್ದೆಗಳು:

ಕೇಂದ್ರೀಯ ಅಂತರ್ಜಲ ಮಂಡಳಿ (CGWB – ವರ್ಗ II) ಅಡಿಯಲ್ಲಿ ಒಟ್ಟು 16 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಗ್ರೂಪ್-ಎ ವಿಭಾಗದಡಿಯಲ್ಲಿ 05 ವಿಜ್ಞಾನಿ-ಬಿ/ಜಲಭೂವಿಜ್ಞಾನ (Scientist-B / Hydrogeology), 01 ವಿಜ್ಞಾನಿ-ಬಿ/ರಾಸಾಯನಿಕ (Scientist-B / Chemical) ಮತ್ತು 01 ವಿಜ್ಞಾನಿ-ಬಿ/ಜಿಯೋಫಿಸಿಕ್ಸ್ (Scientist-B / Geophysics) ಹುದ್ದೆಗಳಿವೆ. ಗ್ರೂಪ್-ಬಿ ವಿಭಾಗದಲ್ಲಿ 07 ಸಹಾಯಕ ಜಲವಿಜ್ಞಾನಿ (Assistant Hydrogeologist), 01 ಸಹಾಯಕ ರಸಾಯನಶಾಸ್ತ್ರಜ್ಞ ಹಾಗೂ 01 ಸಹಾಯಕ ಭೂಭೌತಶಾಸ್ತ್ರಜ್ಞ ಹುದ್ದೆಗಳು ಖಾಲಿಯಿವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ವಿವರ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭೂವಿಜ್ಞಾನ, ಅನ್ವಯಿಕ ಭೂವಿಜ್ಞಾನ, ಭೂಭೌತಶಾಸ್ತ್ರ, ಅನ್ವಯಿಕ ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಜಲಭೂವಿಜ್ಞಾನ ಮುಂತಾದ ಸಂಬಂಧಿತ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ (M.Sc) ಅಥವಾ ಸಂಯೋಜಿತ ಎಂ.ಎಸ್ಸಿ (Integrated M.Sc) ಪೂರ್ಣಗೊಳಿಸಿರಬೇಕು. ಅರ್ಜಿದಾರರ ವಯಸ್ಸು ಜನವರಿ 1, 2027 ಕ್ಕೆ ಅನ್ವಯಿಸುವಂತೆ 21 ರಿಂದ 32 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ:

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಪುರುಷ ಅಭ್ಯರ್ಥಿಗಳಿಗೆ ರೂ. 200 ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳೆಯರು, ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ. ಆಯ್ಕೆ ಪ್ರಕ್ರಿಯೆಯು 3 ಹಂತಗಳಲ್ಲಿ ನಡೆಯಲಿದೆ: ಮೊದಲಿಗೆ 400 ಅಂಕಗಳ ವಸ್ತುನಿಷ್ಟ ಮಾದರಿಯ ಪೂರ್ವಭಾವಿ ಪರೀಕ್ಷೆ (Prelims) ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/3 ರಷ್ಟು ಋಣಾತ್ಮಕ ಅಂಕ ಕಡಿತಗೊಳಿಸಲಾಗುತ್ತದೆ. ನಂತರ 600 ಅಂಕಗಳ ಲಿಖಿತ ಮುಖ್ಯ ಪರೀಕ್ಷೆ (Mains) ಹಾಗೂ 200 ಅಂಕಗಳ ವ್ಯಕ್ತಿತ್ವ ಪರೀಕ್ಷೆ (Interview) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 22 ಕೊನೆಯ ದಿನಾಂಕವಾಗಿದೆ. ಪೂರ್ವಭಾವಿ ಪರೀಕ್ಷೆಯು (Prelims) ಜನವರಿ 10, 2027 ರಂದು ಹಾಗೂ ಮುಖ್ಯ ಪರೀಕ್ಷೆಯು (Mains) 2027ರ ಜೂನ್ 19 ಮತ್ತು 20 ರಂದು ನಡೆಯಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us