ರಜನಿಕಾಂತ್ ಜೊತೆ ಅತಿಥಿ ಪಾತ್ರ ಮಾಡಲು 50 ಕೋಟಿ ರೂಪಾಯಿ ಕೇಳಿದ ಬಾಲಯ್ಯ

‘ಜೈಲರ್ 2’ ಸಿನಿಮಾದಲ್ಲಿ ಬಾಲಕೃಷ್ಣ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ಅವರಿಗೆ 50 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ. ಚಿತ್ರದ ಶೂಟಿಂಗ್ ಕೇರಳದಲ್ಲಿ ನಡೆಯಲಿದೆ ಮತ್ತು ರಜನಿಕಾಂತ್ ಮುಖ್ಯ ಪಾತ್ರದಲ್ಲಿದ್ದಾರೆ. ಜೈಲರ್ ಚಿತ್ರದ ಯಶಸ್ಸಿನ ನಂತರ, ನಿರ್ದೇಶಕರು ಅತಿಥಿ ಪಾತ್ರಗಳನ್ನು ಬಳಸಿಕೊಂಡು ಚಿತ್ರದ ತೂಕ ಹೆಚ್ಚಿಸೋ ಆಲೋಚನೆಯಲ್ಲಿದ್ದಾರೆ.

ರಜನಿಕಾಂತ್ ಜೊತೆ ಅತಿಥಿ ಪಾತ್ರ ಮಾಡಲು 50 ಕೋಟಿ ರೂಪಾಯಿ ಕೇಳಿದ ಬಾಲಯ್ಯ
ರಜನಿ-ಬಾಲಯ್ಯ
Edited By:

Updated on: May 17, 2025 | 1:22 PM

‘ಜೈಲರ್ 2’ (Jailer 2 Movie) ಸಿನಿಮಾಗೆ ಈಗ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ರಜನಿಕಾಂತ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೂಟ್ ಕೇರಳದಲ್ಲಿ ನಡೆಯಲಿದೆ. ಬಾಲಯ್ಯ ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಅವರು ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳಿಗೆ ಶಾಕ್ ಹಾಗೂ ಅಚ್ಚರಿ ಎರಡೂ ಆಗಿದೆ.

‘ಜೈಲರ್’ ಸಿನಿಮಾದಲ್ಲಿ ನಿರ್ದೇಶಕರು ಒಂದು ತಂತ್ರವನ್ನು ಉಪಯೋಗಿಸಿದ್ದರು. ಅದುವೇ ಅತಿಥಿ ಪಾತ್ರ. ಶಿವರಾಜ್​ಕುಮಾರ್, ಮೋಹನ್​ಲಾಲ್, ಜಾಕಿ ಶ್ರಾಫ್ ಅವರನ್ನು ಅತಿಥಿ ಪಾತ್ರದಲ್ಲಿ ಕರೆತಂದು ಎಲ್ಲರ ಗಮನ ಸೆಳೆದರು. ಅದರಲ್ಲೂ ಶಿವರಾಜ್​ಕುಮಾರ್ ತೋರಿದ ಮಾಸ್ ಅವತಾರಕ್ಕೆ ಫ್ಯಾನ್ಸ್ ಫ್ಲ್ಯಾಟ್ ಆಗಿಬಿಟ್ಟರು. ತಮಿಳು, ತೆಲುಗು ಮಂದಿ ಕೂಡ ಶಿವಣ್ಣನ ಅವತಾರಕ್ಕೆ ಸಿಳ್ಳೆ ಹೊಡೆದರು. ಈಗ ಇದೇ ತಂತ್ರವನ್ನು ಎರಡನೇ ಪಾರ್ಟ್​ನಲ್ಲೂ ಮುಂದುವರಿಸಿಕೊಂಡು ಹೊಗುವ ಆಲೋಚನೆಯಲ್ಲಿ ಅವರಿದ್ದಾರೆ.

ಬಾಲಯ್ಯ ಅವರಿಗೆ ಈ ಚಿತ್ರದ ಆಫರ್ ನೀಡಲಾಗಿದೆ. ಬರೋಬ್ಬರಿ 20 ದಿನಗಳ ಕಾಲ ಚಿತ್ರದ ಶೂಟ್​ಗೆ ಪ್ಲ್ಯಾನ್ ಮಾಡಲಾಗಿದೆ. ಇದಕ್ಕಾಗಿ ಬಾಲಯ್ಯ ತೆಗೆದುಕೊಳ್ಳುತ್ತಿರುವು 50 ಕೋಟಿ ರೂಪಾಯಿ. ಅಂದರೆ ಒಂದು ದಿನದ ಶೂಟ್​ಗೆ ಅವರು ಬರೋಬ್ಬರಿ 2.5 ಕೋಟಿ ರೂಪಾಯಿ ಚಾರ್ಜ್ ಮಾಡಿದಂತಾಗಲಿದೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಇದನ್ನೂ ಓದಿ
ರಾಧಿಕಾ ಪಂಡಿತ್ ಕೂದಲ ಮೇಲೆ ಯಶ್​ಗೆ ಇದೆ ವಿಶೇಷ ಪ್ರೀತಿ; ಇಲ್ಲಿದೆ ಸಾಕ್ಷಿ
ಪ್ರೀತಿಯಿಂದ ವಿಜ್ಜು ಎಂದು ಕರೆದು ಬರ್ತ್​ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ
‘ಪಾಕಿಗಳು ರಕ್ತಸಿಕ್ತ ಜಿರಳೆಗಳು, ಭೂಪಟದಿಂದಲೇ ಇಲ್ಲದಂತೆ ಮಾಡಬೇಕು’; ಕಂಗನಾ
ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ನಟನ ಕಿರಿಕ್

2023ರಲ್ಲಿ ‘ಜೈಲರ್’ ಸಿನಿಮಾ ರಿಲೀಸ್ ಆಗಿ ಹಿಟ್ ಆಯಿತು. ರಜನಿಕಾಂತ್ ಅವರು ‘ಟೈಗರ್’ ಮುತ್ತವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡರು. ನಿವೃತ್ತ ಜೈಲರ್ ಕಥೆಯನ್ನು ಇದು ಒಳಗೊಂಡಿತ್ತು. ರಜನಿಕಾಂತ್ ಅವರ ಬೋಲ್ಡ್ ಅವತಾರ ನೋಡಿ ಫ್ಯಾನ್ಸ್ ಖುಷಿಯಾಗಿದ್ದರು. ಇದರಲ್ಲಿ ವಿನಾಯಕನ್ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಮ್ಯಾ ಕೃಷ್ಣನ್ ಅವರು ರಜನಿ ಪತ್ನಿ ಪಾತ್ರ ಮಾಡಿದ್ದರು. ತಮನ್ನಾ ಭಾಟಿಯಾ ಅವರು ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದರು.

ಇದನ್ನೂ ಓದಿ: ‘ಕೂಲಿ’ ಚಿತ್ರಕ್ಕೆ ರಜನಿಕಾಂತ್ ತೆಗೆದುಕೊಂಡ ಸಂಭಾವನೆಯಲ್ಲಿ ಮೂರು ಕೆಜಿಎಫ್ ಸಿನಿಮಾ ಮಾಡಬಹುದು

ರಜನಿಕಾಂತ್ ಅವರ ‘ಕೂಲಿ’ ಸಿನಿಮಾ ಈ ವರ್ಷ ಆಗಸ್ಟ್ 14ರಂದು ತೆರೆಗೆ ಬರಲಿದೆ. ಆ ಬಳಿಕ ಅವರ ನಟನೆಯ ‘ಜೈಲರ್ 2’ ಬಿಡುಗಡೆ ಕಾಣಲಿದೆ. ನೆಲ್ಸನ್ ದಿಲೀಪ್​ಕುಮಾರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:55 am, Sat, 10 May 25