AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಮನೆ ಕಟ್ಟೇ ಬಿಟ್ಟ ‘ಅಣ್ಣಯ್ಯ’ ನಟಿ ನಿಶಾ ರವಿಕೃಷ್ಣನ್; ಅದ್ದೂರಿ ಗೃಹಪ್ರವೇಶ

ಕಿರುತೆರೆ ನಟಿ ನಿಶಾ ರವಿಕೃಷ್ಣನ್ ಅವರು ತಮ್ಮ ಹೊಸ ಮನೆಯ ಗೃಹಪ್ರವೇಶವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ವರ್ಷಗಳ ಕಾಲ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸಿ ಗಳಿಸಿದ ಹಣದಿಂದ ಈ ಮನೆಯನ್ನು ಕಟ್ಟಿಸಿಕೊಂಡಿದ್ದಾರೆ. ಅವರ ಈ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳು ಹರಿದುಬರುತ್ತಿವೆ. 'ಗಟ್ಟಿಮೇಳ' ಮತ್ತು 'ಅಣ್ಣಯ್ಯ' ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ನಿಶಾ.

ಹೊಸ ಮನೆ ಕಟ್ಟೇ ಬಿಟ್ಟ ‘ಅಣ್ಣಯ್ಯ’ ನಟಿ ನಿಶಾ ರವಿಕೃಷ್ಣನ್; ಅದ್ದೂರಿ ಗೃಹಪ್ರವೇಶ
ನಿಶಾ
ರಾಜೇಶ್ ದುಗ್ಗುಮನೆ
|

Updated on: May 10, 2025 | 9:06 AM

Share

ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟಿ ನಿಶಾ ರವಿಕೃಷ್ಣನ್ (Nisha Ravikrishnan) ಅವರು ಈಗ ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟಿ ನಿಶಾ ಅವರು ಹಲವು ವರ್ಷಗಳಿಂದ ಕಿರುತೆರೆಯಲ್ಲಿ ತೊಡಗಿಕೊಂಡಿದ್ದಾರೆ. ಈಗ ನಿಶಾ ತಾವು ಕಷ್ಟಪಟ್ಟು ಕೂಡಿಟ್ಟ ಹಣದಿಂದ ಕನಸಿನ ಮನೆಯನ್ನು ಕಟ್ಟಿಸಿಕೊಂಡು ಅದರ ಗೃಹಪ್ರವೇಶ ಮಾಡಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ನಿಶಾ ಅವರು 2018ರಲ್ಲಿ ಕಿರುತೆರೆಗೆ ಕಾಲಿಟ್ಟರು. ‘ಸರ್ವ ಮಂಗಲ ಮಾಂಗಲ್ಯೆ’ ಅವರ ನಟನೆಯ ಮೊದಲ ಧಾರಾವಾಹಿ. ಈ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಂಡಿತು. 2019ರವರೆಗೆ ಈ ಧಾರಾವಾಹಿ ಪ್ರಸಾರ ಆಯಿತು. 2019ರಲ್ಲಿ ಅವರು ಜೀ ಕನ್ನಡದಲ್ಲಿ ‘ಗಟ್ಟಿಮೇಳ’ ಸೀರಿಯಲ್ ಮಾಡಿದರು. ಈ ಧಾರಾವಾಹಿಯಲ್ಲಿ ಅವರು ಅಮೂಲ್ಯ ಹೆಸರಿನ ಪಾತ್ರ ಮಾಡಿದರು. ಐದು ವರ್ಷಗಳ ಕಾಲ ಪ್ರಸಾರ ಕಂಡ ಈ ಧಾರಾವಾಹಿ ಮೂಲಕ ರೌಡಿ ಬೇಬಿ ಎಂದೇ ಅವರು ಫೇಮಸ್ ಆದರು.

ಇದನ್ನೂ ಓದಿ
Image
ರಾಧಿಕಾ ಪಂಡಿತ್ ಕೂದಲ ಮೇಲೆ ಯಶ್​ಗೆ ಇದೆ ವಿಶೇಷ ಪ್ರೀತಿ; ಇಲ್ಲಿದೆ ಸಾಕ್ಷಿ
Image
ಪ್ರೀತಿಯಿಂದ ವಿಜ್ಜು ಎಂದು ಕರೆದು ಬರ್ತ್​ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ
Image
‘ಪಾಕಿಗಳು ರಕ್ತಸಿಕ್ತ ಜಿರಳೆಗಳು, ಭೂಪಟದಿಂದಲೇ ಇಲ್ಲದಂತೆ ಮಾಡಬೇಕು’; ಕಂಗನಾ
Image
ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ನಟನ ಕಿರಿಕ್

ನಿಶಾ ಅವರು ಸದ್ಯ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ಡಾಕ್ಟರ್ ಪಾರ್ವತಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಹಳ್ಳಿ ಹಿನ್ನೆಲೆಯಲ್ಲಿ ಸಾಗುತ್ತಿದ್ದು, ಪ್ರೇಕ್ಷಕರಿಗೆ ಇಷ್ಟ ಆಗಿದೆ. ಇನ್ನು ನಿಶಾ ಅವರು ತೆಲುಗು ಕಿರುತೆರೆಯಲ್ಲೂ ಫೇಮಸ್ ಆಗಿದ್ದಾರೆ. ‘ಅಮ್ಮಾಯಿಗಾರು’ ಹೆಸರಿನ ಜೀ ತೆಲುಗು ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ.

ಇದನ್ನೂ ನೋಡಿ: ಹೇಗಿದೆ ನೋಡಿ ನಿಶಾ ರವಿಕೃಷ್ಣನ್ ಭರ್ಜರಿ ಡ್ಯಾನ್ಸ್

ನಿಶಾ ಅವರು ತೆಲುಗು ಹಾಗೂ ಕನ್ನಡ ಧಾರಾವಾಹಿ ಶೂಟ್​ನ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಇದು ದೊಡ್ಡ ಚಾಲೆಂಜ್. ಆದಾಗ್ಯೂ ಕಷ್ಟಪಟ್ಟು ಇದನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಅವರು ಹಣ ಸಂಪಾದಿಸಿ ಮನೆ ಕಟ್ಟಿಕೊಂಡಿದ್ದಾರೆ. ಆಪ್ತರು ನಿಶಾ ಅವರ ಮನೆಗೆ ಬಂದು ಶುಭಾಶಯ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?