ನೆರೆ ಮನೆಯವರ ಎದುರು ಅಶ್ಲೀಲವಾಗಿ ವರ್ತಿಸಿದ ‘ಜೈಲರ್’ ನಟ ವಿನಾಯಕನ್; ವಿಡಿಯೋ ವೈರಲ್

|

Updated on: Jan 21, 2025 | 3:29 PM

ಮೈ ಮೇಲೆ ಬಟ್ಟೆ ಇಲ್ಲದ ಅವತಾರದಲ್ಲಿ ವಿನಾಯಕನ್ ಅವರು ಕಾಣಿಸಿಕೊಂಡಿದ್ದಾರೆ. ನೆರೆಮನೆಯವರಿಗೆ ಅಶ್ಲೀಲವಾಗಿ ಬೈಯ್ದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಅವರ ಅಶ್ಲೀಲ ವರ್ತನೆಯನ್ನು ಕಂಡು ನೆಟ್ಟಿಗರು ಖಾರವಾಗಿ ಕಮೆಂಟ್ ಮಾಡುತ್ತಿದ್ದಾರೆ. ವಿನಾಯಕನ್ ಅವರನ್ನು ಚಿತ್ರರಂಗದಿಂದ ಹೊರಗೆ ಹಾಕಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ನೆರೆ ಮನೆಯವರ ಎದುರು ಅಶ್ಲೀಲವಾಗಿ ವರ್ತಿಸಿದ ‘ಜೈಲರ್’ ನಟ ವಿನಾಯಕನ್; ವಿಡಿಯೋ ವೈರಲ್
Vinayakan
Follow us on

ಮಲಯಾಳಂ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟ ವಿನಾಯಕನ್ ಅವರು ಬರೀ ನೆಗೆಟಿವ್ ಕಾರಣಗಳಿಂದಲೇ ಸುದ್ದಿ ಆಗುತ್ತಿದ್ದಾರೆ. ಅವರಿಗೆ ಜನಪ್ರಿಯತೆಯ ಅಮಲು ತಲೆಗೆ ಏರಿದಂತಿದೆ. ಸೆಲೆಬ್ರಿಟಿಯಾಗಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕವಾಗಿ ಅವರು ಬಹಳ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಈಗ ವಿನಾಯಕನ್ ಅವರ ಒಂದು ವಿಡಿಯೋ ವೈರಲ್ ಆಗಿದೆ. ನೆರೆಮನೆಯವರಿಗೆ ಬೈಯುತ್ತಾ, ಅಶ್ಲೀಲವಾಗಿ ನಡೆದುಕೊಂಡಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಅದನ್ನು ವಿನಾಯಕನ್ ಕೂಡ ಒಪ್ಪಿಕೊಂಡಿದ್ದಾರೆ.

ವಿನಾಯಕನ್ ಅವರು ಮನೆಯ ಬಾಲ್ಕನಿಯಲ್ಲಿ ನಿಂತು ನೆರೆಮನೆಯವರಿಗೆ ಬೈಯ್ದಿದ್ದಾರೆ. ಅವಾಚ್ಯ ಪದಗಳನ್ನು ಅವರು ಬಳಸಿದ್ದಾರೆ. ಲುಂಗಿ ಧರಿಸಿ ಜಗಳಕ್ಕೆ ಬಂದಿದ್ದ ಅವರಿಗೆ ಸರಿಯಾಗಿ ನಿಂತುಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಸೊಂಟದ ಮೇಲಿದ್ದ ಲುಂಗಿ ಉದುರಿ ಹೋದರೂ ಅರಿವಿಲ್ಲದ ಹಾಗೆ ಅವರು ಜಗಳ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

ಹಲವು ವರ್ಷಗಳಿಂದ ವಿನಾಯಕನ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಅತ್ಯುತ್ತಮ ನಟ ಎಂಬುದರಲ್ಲಿ ಅನುಮಾನವೇ ಇಲ್ಲ. ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್​ಫೇರ್​ ಪ್ರಶಸ್ತಿಗಳು ಕೂಡ ಅವರಿಗೆ ಸಿಕ್ಕಿವೆ. ರಜನಿಕಾಂತ್ ನಟನೆ ‘ಜೈಲರ್​’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ವಿನಾಯಕನ್ ಅವರು ಹೆಚ್ಚು ಖ್ಯಾತಿ ಗಳಿಸಿದರು. ಆ ಬಳಿಕ ಅವರ ಕಿರಿಕ್​ಗಳು ಕೂಡ ಜಾಸ್ತಿ ಆದವು.

ಸೋಶಿಯಲ್ ಮೀಡಿಯಾದಲ್ಲಿ ವಿನಾಯಕನ್ ಅವರ ವಿಡಿಯೋ ವೈರಲ್ ಆಗುತ್ತಿದೆ. ‘ಇವನೇನು ನಟನೋ ಅಥವಾ ಕುಡುಕನೋ’ ಎಂದು ಜನರು ಪ್ರಶ್ನಿಸಿದ್ದಾರೆ. ‘ಚಿತ್ರರಂಗದಿಂದ ವಿನಾಯಕನ್ ಅವರನ್ನು ಬ್ಯಾನ್ ಮಾಡಬೇಕು’ ಎಂದು ಕೂಡ ಜನರು ಕಮೆಂಟ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ವಿನಾಯಕನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಜೇಲರ್ ಚಿತ್ರದ ವಿಲನ್ ವಿನಾಯಕನ್ ಕುಡಿತದ ಅಮಲಿನಲ್ಲಿ ಮನೆ ಬಳಿಯೂ ವಿಲನ್ ವರ್ತನೆ, ಪೊಲೀಸರಿಂದ ಬುದ್ಧಿವಾದ!!

‘ಒಬ್ಬ ವ್ಯಕ್ತಿಯಾಗಿ, ಸಿನಿಮಾ ನಟನಾಗಿ ನನಗೆ ಎಷ್ಟೋ ವಿಷಯಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನನ್ನಿಂದ ನೆಗೆಟಿವ್ ಎನರ್ಜಿ ಉಂಟಾಗಿದ್ದಕ್ಕೆ ನನ್ನ ಕಡೆಯಿಂದ ಜನರ ಬಳಿ ಕ್ಷಮೆ ಕೇಳುತ್ತೇನೆ. ಚರ್ಚೆ ಮುಂದುವರಿಯಲಿ’ ಎಂದು ವಿನಾಯಕನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.