AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​ಗೆ ಟೈಮ್​ಸೆನ್ಸ್ ಇಲ್ಲ ಎಂದು ಅಕ್ಷಯ್​ಗೆ ಮೂಡಿತೆ ಸಿಟ್ಟು? ಸ್ಪಷ್ಟನೆ ನೀಡಿದ ನಟ

Salman Khan: ಅಕ್ಷಯ್ ಕುಮಾರ್ ಕೆಲ ದಿನಗಳ ಹಿಂದಷ್ಟೆ ಬಿಗ್​ಬಾಸ್ ಹಿಂದಿ ಸೀಸನ್ 18 ರಲ್ಲಿ ಅತಿಥಿಯಾಗಿ ಭಾಗವಹಿಸಲು ತೆರಳಿದ್ದರು. ಆದರೆ ಸೆಟ್​ನಿಂದ ಹೊರನಡೆದರು. ಸಲ್ಮಾನ್ ಖಾನ್ ಶೂಟ್​ಗೆ ತಡವಾಗಿ ಬಂದಿದ್ದರಿಂದ ಅಕ್ಷಯ್ ಬೇಸರಗೊಂಡು ತೆರಳಿದರು ಎನ್ನಲಾಯ್ತು. ಆದರೆ ಈ ಬಗ್ಗೆ ಅಕ್ಷಯ್ ಕುಮಾರ್ ಇದೀಗ ಸ್ಪಷ್ಟನೆ ನೀಡಿದ್ದಾರೆ.

ಸಲ್ಮಾನ್​ಗೆ ಟೈಮ್​ಸೆನ್ಸ್ ಇಲ್ಲ ಎಂದು ಅಕ್ಷಯ್​ಗೆ ಮೂಡಿತೆ ಸಿಟ್ಟು? ಸ್ಪಷ್ಟನೆ ನೀಡಿದ ನಟ
Bigg Boss Hindi
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 22, 2025 | 8:06 AM

Share

‘ಬಿಗ್ ಬಾಸ್ ಹಿಂದಿ ಸೀಸನ್ 18’ ಇತ್ತೀಚೆಗೆ ಪೂರ್ಣಗೊಂಡಿದೆ. ಕರಣ್ ವೀರ್ ಮೆಹ್ರಾ ಅವರು ಶೋನ ಗೆದ್ದಿದ್ದಾರೆ. ಈ ಎಪಿಸೋಡ್ನಲ್ಲಿ ಅಕ್ಷಯ್ ಕುಮಾರ್ ಕೂಡ ಇರಬೇಕಿತ್ತು. ಆದರೆ, ಸಲ್ಮಾನ್ ಖಾನ್ ತಡವಾಗಿ ಬಂದರು ಎಂಬ ಕಾರಣಕ್ಕೆ ಅವರು ಅಲ್ಲಿಂದ ತೆರಳಿದರು. ಸಲ್ಮಾನ್ ಖಾನ್ ಮೇಲೆ ಅಕ್ಷಯ್​ಗೆ ಕೋಪ ಬಂದಿದೆ ಎಂದೆಲ್ಲ ಹೇಳಲಾಗಿತ್ತು. ಇದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ.

ಅಕ್ಷಯ್ ಕುಮಾರ್ ಅವರು ಮುಂಬರುವ ‘ಸ್ಕೈ ಫೋರ್ಸ್’ ಚಿತ್ರವನ್ನು ಪ್ರಚಾರ ಮಾಡಬೇಕಿತ್ತು. ಆದರೆ, ಸಲ್ಮಾನ್ ಖಾನ್ ಅವರು ಶೂಟ್​ಗೆ ಸಾಕಷ್ಟು ತಡವಾಗಿ ಬಂದರು. ಆದರೆ, ಅಕ್ಷಯ್​ಗೆ ಅಷ್ಟೆಲ್ಲ ಕಾಯುವ ತಾಳ್ಮೆ ಇರಲೇ ಇಲ್ಲ. ಹೀಗಾಗಿ, ಅಕ್ಷಯ್ ಅಲ್ಲಿಂದ ತೆರಳೇ ಬಿಟ್ಟರು. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಅಷ್ಟೊಂದು ತಡವೇನು ಆಗಿರಲಲಿಲ್ಲ. ಅವರಿಗೆ ಕೆಲವು ವೈಯಕ್ತಿಕ ಕೆಲಸಗಳು ಇದ್ದವು. ಹೀಗಾಗಿ, ಸ್ವಲ್ಪ ತಡವಾಗುತ್ತದೆ ಎಂದು ತಿಳಿಸಿದರು. 35-40 ನಿಮಿಷ ತಡವಾಗುತ್ತದೆ ಎಂಬ ಮಾಹಿತಿ ನನನಗೆ ಬಂತು. ಹೀಗಾಗಿ, ನಾನು ತೆರಳಬೇಕಾಯಿತು. ನಾನು ಸಲ್ಮಾನ್ ಜೊತೆ ಈ ಬಗ್ಗೆ ಮಾತನಾಡಿದೆ ಮತ್ತು ಅಲ್ಲಿಂದ ತೆರಳಿದೆ. ನನ್ನ ಸಹ ನಟ ವೀರ್ ಅವರು ಅಲ್ಲಿಯೇ ಇದ್ದರು’ ಎಂದಿದ್ದಾರೆ ಅಕ್ಷಯ್ ಕುಮಾರ್.

ಅಕ್ಷಯ್ ಅವರು ಸಮಯಪಾಲನೆ ಮಾಡುತ್ತಾರೆ. ಈ ಕಾರಣದಿಂದಲೇ ಅವರು ಅಷ್ಟೊಂದು ಖ್ಯಾತಿಯನ್ನು ಹೊಂದಿದ್ದಾರೆ. ಆದರೆ ಸಲ್ಮಾನ್ ಹಾಗಲ್ಲ. ಅವರು ಸಮಯ ಪಾಲನೆ ಮಾಡಿದ್ದು ತುಂಬಾನೇ ಕಡಿಮೆ ಎನ್ನಲಾಗಿದೆ. ಈ ಕಾರಣಕ್ಕೆ ಅಕ್ಷಯ್ ಕಾಯಲಾಗದೆ ತೆರಳಿಯೇ ಬಿಟ್ಟಿದ್ದಾರೆ.

ಇದನ್ನೂ ಓದಿ:ಬಿಗ್ ಬಾಸ್ ನಡೆಸಿಕೊಡಲು ಸಲ್ಮಾನ್ ಖಾನ್ ತೆಗೆದುಕೊಂಡ ಸಂಭಾವನೆ ಎಷ್ಟು?

ಈ ಮೊದಲು ಸಿನಿಮಾ ನಿರ್ಮಾಪಕ ಅನೀಸ್ ಬಾಜ್ಮೀ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿದ್ದರು. ‘ಅಕ್ಷಯ್ ಬಹಳ ಸಮಯ ಪ್ರಜ್ಞೆಯ ವ್ಯಕ್ತಿ. ಅವರೊಂದಿಗೆ ಕೆಲಸ ಮಾಡುವುದು ನಿಜಕ್ಕೂ ಚಾಲೆಂಜ್. ಬೆಳಿಗ್ಗೆ 7 ಗಂಟೆ ಎಂದರೆ ಅವರು ಆ ಸಮಯಕ್ಕೆ ರೆಡಿ ಇರುತ್ತಾರೆ. ನಮಗೆ ಅಷ್ಟು ಬೇಗ ಎದ್ದು ಅಭ್ಯಾಸ ಇಲ್ಲ. ನಾವು ಸಲ್ಮಾನ್ ಜೊತೆ ತುಂಬಾ ಆರಾಮವಾಗಿರುತ್ತೇವೆ. ಅವರು 1 ಗಂಟೆಗೆ ಬರುತ್ತಾರೆ. ಆ ಬಳಿಕ ಊಟ ಮಾಡುತ್ತಾರೆ. ನಂತರ ಅವರು ದಿನದ ಅಂತ್ಯದವರೆಗೆ ಇರುತ್ತಾರೆ’ ಎಂದಿದ್ದಾರೆ ಅವರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Tue, 21 January 25

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!