Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಶಿಫ್ಟ್ ಮಾಡೋ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಸೈಫ್ ಅಲಿ ಖಾನ್

ಸೈಫ್ ಅಲಿ ಖಾನ್ ಅವರು ಕಳ್ಳತನ ಮಾಡಲು ಬಂದ ವ್ಯಕ್ತಿಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ, ಜನವರಿ 21ರಂದು ಡಿಸ್ಚಾರ್ಜ್ ಆಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಭದ್ರತಾ ಕಾರಣಗಳಿಂದಾಗಿ ಅವರು ಬಾಂದ್ರಾದ ತಮ್ಮ ಮನೆಯನ್ನು ಬಿಟ್ಟು ಫಾರ್ಚೂನ್ ಹೈಟ್ಸ್‌ಗೆ ತೆರಳುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇಲ್ಲಿ ಅವರಿಗೆ ಮತ್ತೊಂದು ಮನೆ ಮತ್ತು ಕಚೇರಿಯಿದೆ.

ಮನೆ ಶಿಫ್ಟ್ ಮಾಡೋ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಸೈಫ್ ಅಲಿ ಖಾನ್
ಸೈಫ್
Follow us
ರಾಜೇಶ್ ದುಗ್ಗುಮನೆ
|

Updated on: Jan 21, 2025 | 1:12 PM

ಕಳ್ಳತನ ಮಾಡಲು ಬಂದ ವ್ಯಕ್ತಿಯಿಂದ ಹಲ್ಲೆಗೆ ಒಳಗಾದ ಸೈಫ್ ಅಲಿ ಖಾನ್ ಅವರು ಕಳೆದ ಗುರುವಾರದಿಂದ (ಜನವರಿ 15) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ಕೂಡ ಪೂರ್ಣಗೊಂಡಿದ್ದು, ಇಂದು (ಜನವರಿ 21) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಮಾರಣಾಂತಿಕ ದಾಳಿಯ ನಂತರ ಮನೆ ಶಿಫ್ಟ್ ಮಾಡುವ ವಿಚಾರದಲ್ಲಿ ಸೈಫ್ ಅಲಿ ಖಾನ್ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಮಾಹಿತಿ ಇದೆ.

ಸೈಫ್-ಕರೀನಾ ಅವರ ಕಳೆದ ಕೆಲ ವರ್ಷಗಳಿಂದ ಬಾಂದ್ರಾದಲ್ಲಿರುವ ‘ಸದ್ಗುರು ಶರಣ್’ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದರು. ಸೈಫ್ ಮನೆಗೆ ನುಗ್ಗಿದ ಕಳ್ಳ ಹಣಕ್ಕಾಗಿ ಬೇಡಿಕೆ ಇಟ್ಟಿದ್ದೂ ಅಲ್ಲದೆ, ಅವರ ಮೇಲೆ ದಾಳಿ ಮಾಡಿದ್ದ. ಈ ವೇಳೆ ಭದ್ರತೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಏಳುವಂತೆ ಆಗಿವೆ. ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ, ಸೈಫ್ ಅವರು ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಈ ಮನೆಗೆ ಹಿಂತಿರುಗುವುದಿಲ್ಲ ಎನ್ನಲಾಗಿದೆ. ಅವರು ಬೇರೆಡೆಗೆ ಶಿಫ್ಟ್ ಆಗುವ ಸಾಧ್ಯತೆಯಿದೆ.

ಸೈಫ್ ಸ್ಥಿತಿ ಚೆನ್ನಾಗಿದ್ದರೂ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅವರು ಕೆಲ ತಿಂಗಳು ಚಿತ್ರೀಕರಣ, ಜಾಹೀರಾತು ಶೂಟ್​ಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅವರು ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಆ ನಂತರ ಸೈಫ್ ಅಲಿ ಖಾನ್ ಅವರು ‘ಫಾರ್ಚೂನ್ ಹೈಟ್ಸ್’ ಕಟ್ಟಡಕ್ಕೆ ಶಿಫ್ಟ್ ಆಗಬಹುದು ಎನ್ನಲಾಗಿದೆ.

ಸೈಫ್ ಅವರು ಬಾಂದ್ರಾದ ಫಾರ್ಚೂನ್ ಹೈಟ್ಸ್‌ನಲ್ಲಿ ಫ್ಲ್ಯಾಟ್ಸ್ ಹೊಂದಿದ್ದಾರೆ. ಇಲ್ಲಿಯೇ ಅವರ ಕಚೇರಿ ಕೂಡ ಇದೆ. ಇದರಲ್ಲಿ ಅವರು ಮನೆಯನ್ನು ಕೂಡ ಹೊಂದಿದ್ದಾರೆ. ಅವರು ಇಲ್ಲಿಯೇ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ಹಳೆಯ ಕಟ್ಟಡದಲ್ಲಿ ಇದ್ದರೆ ಕೆಟ್ಟ ನೆನಪು ಕಾಡಬಹುದು ಎಂಬುದು ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸೈಫ್-ಕರೀನಾ ಅವರ ಮನೆಯ ಕೆಲವು ವಸ್ತುಗಳನ್ನು ಈ ಮನೆಗೆ ಶಿಫ್ಟ್ ಮಾಡಲು ತಯಾರಿ ನಡೆದಿದೆಯಂತೆ.

ಇದನ್ನೂ ಓದಿ: ಸೈಫ್ ಅಲಿ ಖಾನ್ ಪ್ರಕರಣ: ದಾಳಿಕೋರನನ್ನು ಪೊಲೀಸರು ಹಿಡಿದಿದ್ದು ಹೇಗೆ?

ಸೈಫ್ ಅವರು ಇಂದು (ಜನವರಿ 21) ಮಧ್ಯಾಹ್ನ ಬಿಡುಗಡೆ ಹೊಂದಲಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರು ಎಷ್ಟು ದಿನ ಸಿನಿಮಾ ಕೆಲಸಗಳಿಂದ ದೂರ ಇರುತ್ತಾರೆ ಎಂಬ ವಿಚಾರ ಇನ್ನೂ ರಿವೀಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.