Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamanna Bhatia: ಎಲ್ಲೆಲ್ಲೂ ‘ಕಾವಾಲಾ’ ಹಾಡಿನ ಗುಂಗು; ಏರ್​ಪೋರ್ಟ್​​ನಲ್ಲೂ ಡ್ಯಾನ್ಸ್​ ಮಾಡಿದ ತಮನ್ನಾ

ತಮನ್ನಾ ಭಾಟಿಯಾ ಅವರು ಏರ್​ಪೋರ್ಟ್​ ಒಳಗೆ ತೆರಳುತ್ತಿದ್ದರು. ಆ ವೇಳೆ ಪಾಪರಾಜಿಗಳು ಒಂದು ಮನವಿ ಮಾಡಿಕೊಂಡರು. ‘ಅಯ್ಯೋ ನನ್ನ ವಿಮಾನ ತಪ್ಪಿಹೋಗುತ್ತೆ..’ ಎಂದು ತಮನ್ನಾ ಗೊಣಗಿದರು.

Tamanna Bhatia: ಎಲ್ಲೆಲ್ಲೂ ‘ಕಾವಾಲಾ’ ಹಾಡಿನ ಗುಂಗು; ಏರ್​ಪೋರ್ಟ್​​ನಲ್ಲೂ ಡ್ಯಾನ್ಸ್​ ಮಾಡಿದ ತಮನ್ನಾ
ತಮನ್ನಾ ಭಾಟಿಯಾ
Follow us
ಮದನ್​ ಕುಮಾರ್​
|

Updated on: Jul 12, 2023 | 11:20 AM

ಇತ್ತೀಚೆಗೆ ಬಿಡುಗಡೆ ಆಗಿರುವ ‘ಕಾವಾಲಾ..’ (Kaavaalaa) ಹಾಡಿನ ಹವಾ ಜೋರಾಗಿದೆ. ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿರುವ ಈ ಹಾಡಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದು ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾದ (Jailer Movie) ಸಾಂಗ್​. ಈ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರು ಕುಣಿದ ಪರಿ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಹಾಡಿನಿಂದಾಗಿ ತಮನ್ನಾ ಅವರ ಫ್ಯಾನ್​ ಫಾಲೋಯಿಂಗ್​ ಹೆಚ್ಚಾಗಿದೆ. ಇತ್ತೀಚೆಗೆ ಮುಂಬೈ ಏರ್​​ಪೋರ್ಟ್​​ನಲ್ಲಿ ಅವರು ಅಭಿಮಾನಿಯ ಜೊತೆ ‘ಕಾವಾಲಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಅಭಿಮಾನಿಯ ಜೊತೆ ತಮನ್ನಾ (Tamannaah Bhatia) ಅವರು ಕೂಲ್​ ಆಗಿ ನಡೆದುಕೊಂಡಿದ್ದಾರೆ.

ತಮನ್ನಾ ಭಾಟಿಯಾ ಅವರು ಏರ್​ಪೋರ್ಟ್​ ಒಳಗೆ ತೆರಳುತ್ತಿದ್ದರು. ಆ ವೇಳೆ ಪಾಪರಾಜಿಗಳು ಒಂದು ಮನವಿ ಮಾಡಿಕೊಂಡರು. ಅಭಿಮಾನಿಯೊಬ್ಬರ ಡ್ಯಾನ್ಸ್​ ನೋಡಿಕೊಂಡು ಹೋಗುವಂತೆ ತಮನ್ನಾಗೆ ರಿಕ್ವೆಸ್ಟ್​ ಮಾಡಲಾಯಿತು. ‘ಅಯ್ಯೋ ನನ್ನ ವಿಮಾನ ತಪ್ಪಿಹೋಗುತ್ತೆ..’ ಎಂದು ತಮನ್ನಾ ಗೊಣಗಿದರು. ಕೂಡಲೇ ಅಲ್ಲಿದ್ದ ಅಭಿಮಾನಿಯು ‘ಕಾವಾಲಾ..’ ಹಾಡಿಗೆ ಸ್ಟೆಪ್​ ಹಾಕಿದರು. ಅವರ ಜೊತೆ ತಮನ್ನಾ ಕೂಡ ಡ್ಯಾನ್ಸ್​ ಮಾಡಿದರು. ‘ಇವರು ನನಗಿಂತ ಚೆನ್ನಾಗಿ ಡ್ಯಾನ್ಸ್​ ಮಾಡಿದ್ದಾರೆ’ ಎಂದು ಅಭಿಮಾನಿಗೆ ತಮನ್ನಾ ಮೆಚ್ಚುಗೆ ಸೂಚಿಸಿದರು.

ತಮನ್ನಾ ಅವರು ಈಗ ಭರ್ಜರಿ ಟ್ರೆಂಡ್​ನಲ್ಲಿ ಇದ್ದಾರೆ. ತಮನ್ನಾ ಅಭಿನಯಿಸಿದ ಚಿತ್ರಗಳು ಬ್ಯಾಕ್​ ಟು ಬ್ಯಾಕ್​ ಜನರ ಎದುರು ಬಂದು ಮನರಂಜನೆ ನೀಡುತ್ತಿವೆ. ಒಟಿಟಿಯಲ್ಲಿ ಬಿಡುಗಡೆಯಾದ ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾದಲ್ಲಿ ಅವರು ಕಾಣಿಸಿಕೊಂಡ ಪರಿ ನೋಡಿ ಪ್ರೇಕ್ಷಕರು ಬೆರಗಾದರು. ‘ಜೀ ಕರ್ದಾ’ ವೆಬ್​ ಸರಣಿ ಕೂಡ ಚರ್ಚೆ ಹುಟ್ಟು ಹಾಕಿತು. ಈಗ ‘ಕಾವಾಲಾ..’ ಸಾಂಗ್​ ಸಹ ಎಲ್ಲೆಲ್ಲೂ ಸದ್ದು ಮಾಡುತ್ತಿದೆ.

ಇದನ್ನೂ ಓದಿ: Tamannaah Bhatia: ‘ಇಂಡಿಯನ್​ ಶಕೀರಾ’: ಅಭಿಮಾನಿಗಳು ಕೊಟ್ಟ ಹೊಸ ಬಿರುದನ್ನು ಸ್ವೀಕರಿಸಿದ ತಮನ್ನಾ ಭಾಟಿಯಾ

ಅನಿರುದ್ಧ್​ ರವಿಚಂದರ್​ ಅವರ ಸಂಗೀತ ನಿರ್ದೇಶನದಲ್ಲಿ ‘ಕಾವಾಲಾ..’ ಹಾಡು ಮೂಡಿಬಂದಿದೆ. ಯೂಟ್ಯೂಬ್​ನಲ್ಲಿ 2.6 ಕೋಟಿಗೂ ಹೆಚ್ಚು ಸಲ ಈ ಸಾಂಗ್​ ವೀಕ್ಷಣೆ ಕಂಡಿದೆ. ದಿನದಿನಕ್ಕೂ ಈ ಹಾಡಿನ ಕ್ರೇಜ್​ ಜಾಸ್ತಿ ಆಗುತ್ತಿದೆ. ‘ಸೂಪರ್​ ಸ್ಟಾರ್​’ ರಜನಿಕಾಂತ್​ ಮತ್ತು ತಮನ್ನಾ ಭಾಟಿಯಾ ಅವರು ಈ ಹಾಡಿನಲ್ಲಿ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ‘ಸನ್​ ಪಿಕ್ಚರ್ಸ್​’ ಬ್ಯಾನರ್​ ಮೂಲಕ ‘ಜೈಲರ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ನೆಲ್ಸನ್​ ದಿಲೀಪ್​ಕುಮಾರ್​ ಅವರು ನಿರ್ದೇಶನ ಮಾಡಿದ್ದಾರೆ. ಶಿವರಾಜ್​ಕುಮಾರ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!