ನಟಿ ಜಯಾ ಬಚ್ಚನ್ (Amitabh Bachchan) ಅವರಿಗೆ ಇಂದು (ಏಪ್ರಿಲ್ 9) ಜನ್ಮದಿನ. ಅವರು ಅಮಿತಾಭ್ ಬಚ್ಚನ್ನ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅನೇಕರಿಗೆ ಇವರ ದಾಂಪತ್ಯ ಮಾದರಿಯಾಗಿದೆ. ಇವರ ಹೊಂದಾಣಿಕೆ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಯಾ ಹಾಗೂ ಅಮಿತಾಭ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆ ಪಡೆದು 1973ರ ಜೂನ್ 3ರಂದು ಮದುವೆ ಆದರು. ಈ ದಂಪತಿಯ ಪ್ರೇಮ ಕಹಾನಿ ಇಲ್ಲಿದೆ.
ಅಮಿತಾಭ್ ಬಚ್ಚನ್ ಅವರಿಗೆ ಟ್ರೆಡಿಷನಲ್ ಹಾಗೂ ಮಾಡರ್ನ್ ಗುಣ ಇರುವ ಹುಡುಗಿ ಎಂದರೆ ಇಷ್ಟ ಆಗಿತ್ತು. ಅದೇ ರೀತಿಯಲ್ಲಿ ಇದ್ದಿದ್ದರು ಜಯಾ ಬಚ್ಚನ್. ಮ್ಯಾಗಜಿನ್ ಕವರ್ಫೋಟೋದಲ್ಲಿ ಅವರನ್ನು ನೋಡಿ ಅಮಿತಾಭ್ ಖುಷಿಪಟ್ಟಿದ್ದರು. ಜಯಾ ಅವರ ಕಣ್ಣು ಅಮಿತಾಭ್ಗೆ ಇಷ್ಟ ಆಗಿತ್ತು. ಅವರ ಜೊತೆ ನಟಿಸೋಕೆ ಅವಕಾಶ ಸಿಕ್ಕಾಗ ಅಮಿತಾಭ್ ಖುಷಿಪಟ್ಟಿದ್ದರು.
70ರ ದಶಕದ ಆರಂಭದ ಸಮಯದಲ್ಲಿ ಅಮಿತಾಭ್ ಅವರು ಓರ್ವ ಫ್ಲಾಪ್ ಹೀರೋ ಎಂದು ಎನಿಸಿಕೊಂಡಿದ್ದರು. ಅವರ ಜತೆ ನಟಿಸೋಕೆ ನಾಯಕಿಯರು ಹಿಂದೇಟು ಹಾಕುತ್ತಿದ್ದರು. ಅಮಿತಾಭ್ ಜತೆ ಆ ಸಮಯದಲ್ಲಿ ನಟಿಸೋಕೆ ಜಯಾ ಒಪ್ಪಿದ್ದರು. ಅಮಿತಾಭ್ ಹಾಗೂ ಜಯಾ ಮೊದಲ ಬಾರಿಗೆ ಭೇಟಿ ಮಾಡಿದ್ದು ‘ಬನ್ಸಿ ಬಿರ್ಜು’ (1972) ಚಿತ್ರದ ಸೆಟ್ನಲ್ಲಿ. ಈ ಸಿನಿಮಾದಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ತೆರೆಕಂಡ ಮರುವರ್ಷವೆ ‘ಜಂಜೀರ್’ ಚಿತ್ರದಲ್ಲೂ ಇಬ್ಬರೂ ಒಟ್ಟಾಗಿ ನಟಿಸಿ ಗಮನ ಸೆಳೆದರು.
‘ಜಂಜೀರ್’ ಚಿತ್ರದ ಶೂಟಿಂಗ್ ವೇಳೆ ಅಮಿತಾಭ್ ಹಾಗೂ ಜಯಾ ಮಧ್ಯೆ ಆಪ್ತತೆ ಬೆಳೆಯಿತು. ಈ ಚಿತ್ರ ಹಿಟ್ ಆದರೆ ಜಯಾ ಅವರನ್ನು ಲಂಡನ್ಗೆ ಕರೆದೊಯ್ಯುವ ಪ್ಲ್ಯಾನ್ ಅಮಿತಾಭ್ಗೆ ಇತ್ತು. ಅಲ್ಲಿ ಸೆಲೆಬ್ರೇಷನ್ ಮಾಡುವ ಕನಸು ಕಂಡಿದ್ದರು. ಈ ವಿಚಾರ ಅಮಿತಾಭ್ ತಂದೆ ಹರಿವಂಶ್ ರೈ ಬಚ್ಚನ್ಗೆ ತಿಳಿಯಿತು. ಮದುವೆ ಆಗಿ ವಿದೇಶಕ್ಕೆ ಹೋಗುವಂತೆ ಅವರು ಸೂಚಿಸಿದ್ದರು. ಹೀಗಾಗಿ, 1973ರಲ್ಲಿ ಇವರ ಮದುವೆ ನಡೆದೇ ಹೋಯಿತು.
ಇದನ್ನೂ ಓದಿ: ಐಶ್ವರ್ಯಾನ ಹೊರಗಿನವರು ಎಂದ್ರಾ ಅಮಿತಾಭ್ ಮೊಮ್ಮಗಳು? ವೈರಲ್ ಆಯ್ತು ಹೇಳಿಕೆ
ಅಮಿತಾಭ್ ಗೆಲುವು ಕಾಣುವುದಿಲ್ಲ ಎಂದು ಹೇಳಿದವರಿಗೆ ಅವರ ಗೆಲುವು ಉತ್ತರ ನೀಡಿತ್ತು. 1975ರಲ್ಲಿ ರಿಲೀಸ್ ಆದ ‘ಶೋಲೆ’ ಸಿನಿಮಾ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರವನ್ನು ಫ್ಯಾನ್ಸ್ ಈಗಲೂ ಮೆಚ್ಚಿಕೊಳ್ಳುತ್ತಾರೆ. ಅಮಿತಾಭ್ ಯಶಸ್ಸಿನ ಬಗ್ಗೆ ಜಯಾ ಮೊದಲೇ ಊಹಿಸಿದ್ದರು. 90ರ ದಶಕದಲ್ಲಿ ಅಮಿತಾಭ್ ಸಂಪೂರ್ಣ ನಷ್ಟ ಅನುಭವಿಸಿದಾಗ ಅಮಿತಾಭ್ ಬೆಂಬಲಕ್ಕೆ ನಿಂತರು ಜಯಾ. ನಂತರ ಅಮಿತಾಭ್ ಮತ್ತೆ ಬೌನ್ಸ್ ಬ್ಯಾಕ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ