‘ಜವಾನ್’ ಸಿನಿಮಾ ಒಪ್ಪಿಕೊಳ್ಳೋಕೆ ಅಸಲಿ ಕಾರಣ ಕೊಟ್ಟ ನಯನತಾರಾ

‘ನಾನು ಜವಾನ್ ರೀತಿಯ ಸಿನಮಾಗಾಗಿ ಹುಡುಕಾಟ ನಡೆಸುತ್ತಿದ್ದೆ. ದೊಡ್ಡ ಪಾತ್ರವರ್ಗ ಇರಬೇಕು, ಜೊತೆಗೆ ಸಿನಿಮಾ ಕೂಡ ದೊಡ್ಡ ಸ್ಕೇಲ್​ನಲ್ಲಿ ಇರಬೇಕು. ನನ್ನ ಪಾತ್ರಕ್ಕೂ ತೂಕ ಇರಬೇಕು ಎಂದು ಅಂದುಕೊಂಡಿದ್ದೆ ಎಂದಿದ್ದಾರೆ ನಯನತಾರಾ. ಅದೇ ರೀತಿಯಲ್ಲಿ ಸಿನಿಮಾ ಇತ್ತು

‘ಜವಾನ್’ ಸಿನಿಮಾ ಒಪ್ಪಿಕೊಳ್ಳೋಕೆ ಅಸಲಿ ಕಾರಣ ಕೊಟ್ಟ ನಯನತಾರಾ
ನಯನತಾರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 09, 2024 | 12:03 PM

‘ಜವಾನ್’ ಸಿನಿಮಾ (Jawan Movie) ಸೂಪರ್ ಹಿಟ್ ಆಯಿತು. ಸಿನಿಮಾ ರಿಲೀಸ್ ಆಗಿ ವರ್ಷ ಕಳೆಯುತ್ತಾ ಬಂದರೂ ಚಿತ್ರದ ಬಗ್ಗೆ ಇನ್ನೂ ಮಾತು ನಿಂತಿಲ್ಲ. ಈ ಚಿತ್ರದಲ್ಲಿ ನಯನತಾರಾ ಅವರು ನಾಯಕಿ ಆಗಿ ಮಿಂಚಿದ್ದರು. ಕೆಲವರು ಈ ಪಾತ್ರವನ್ನು ಟೀಕೆ ಮಾಡಿದ್ದರು. ಅವರ ಪಾತ್ರಕ್ಕಿಂತ ದೀಪಿಕಾ ಪಡುಕೋಣೆ ಪಾತ್ರವೇ ಹೆಚ್ಚು ಹೈಲೈಟ್ ಆಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ನಯನತಾರಾ ಅವರು ಅಪ್ಸೆಟ್ ಆಗಿದ್ದಾರೆ ಎಂದು ಕೂಡ ವರದಿ ಆಗಿತ್ತು. ಆದರೆ, ಇದೆಲ್ಲ ಸುಳ್ಳು ಅನ್ನೋದು ಸ್ಪಷ್ಟವಾಗಿದೆ. ನಯನತಾರಾ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

‘ಜವಾನ್’ ಸಿನಿಮಾ ವಿಶೇಷವಾಗಿತ್ತು. ಇದಕ್ಕೆ ಕಾರಣ ಆಗಿದ್ದು ಅಟ್ಲಿ ನಿರ್ದೇಶನ. ಶಾರುಖ್ ಖಾನ್ ಅವರು ಹಲವು ಶೇಡ್​ಗಳಲ್ಲಿ ಗಮನ ಸೆಳೆದಿದ್ದರು. ಶಾರುಖ್ ಖಾನ್, ನಯನತಾರಾ ಜೊತೆ ದೀಪಿಕಾ ಪಡುಕೋಣೆ, ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಸುನಿಲ್ ಗ್ರೋವರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದರು. ನಯನತಾರಾ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ಬಗ್ಗೆ ನಯನತಾರಾ ಮಾತನಾಡಿದ್ದಾರೆ.

‘ನಾನು ಜವಾನ್ ರೀತಿಯ ಸಿನಮಾಗಾಗಿ ಹುಡುಕಾಟ ನಡೆಸುತ್ತಿದ್ದೆ. ದೊಡ್ಡ ಪಾತ್ರವರ್ಗ ಇರಬೇಕು, ಜೊತೆಗೆ ಸಿನಿಮಾ ಕೂಡ ದೊಡ್ಡ ಸ್ಕೇಲ್​ನಲ್ಲಿ ಇರಬೇಕು. ನನ್ನ ಪಾತ್ರಕ್ಕೂ ತೂಕ ಇರಬೇಕು ಎಂದು ಅಂದುಕೊಂಡಿದ್ದೆ ಎಂದಿದ್ದಾರೆ ನಯನತಾರಾ. ಅದೇ ರೀತಿಯಲ್ಲಿ ಸಿನಿಮಾ ಇತ್ತು. ಶಾರುಖ್ ಖಾನ್ ಅವರು ‘ಜವಾನ್’ ಮಾಡಲು ಮುಖ್ಯ ಕಾರಣ ಎಂದಿದ್ದಾರೆ ನಯನತಾರಾ. ಶಾರುಖ್ ಜೊತೆ ನಟಿಸಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ. ನಯನತಾರಾಗೂ ಅಂಥದ್ದೊಂದು ಆಸೆ ಇತ್ತು.

‘ಯಾರು ಶಾರುಖ್ ಖಾನ್ ಅವರ ಅಭಿಮಾನಿ ಅಲ್ಲ ಎಂದು ಹೇಳಿ. ಅವರ ಸಿನಿಮಾಗಳನ್ನು ನೋಡಿ ಬೆಳೆದವರು ನಾವು. ಅವರು ಮಹಿಳೆಯರನ್ನು ಸಾಕಷ್ಟು ಗೌರವಿಸುತ್ತಾರೆ. ಜವಾನ್ ಸಿನಿಮಾ ದೊಡ್ಡ ಬದಲಾವಣೆ ತರುತ್ತದೆ ಎಂದು ನನಗೆ ಗೊತ್ತಿತ್ತು. ಇಷ್ಟು ವರ್ಷ ಸಿನಿಮಾಗಳಲ್ಲಿ ಕೆಲಸ ಮಾಡಿದ ನನಗೆ ಯಾವ ಸಿನಿಮಾ ಗೆಲುವು ಕಾಣುತ್ತದೆ, ಯಾವುದು ಕಾಣುವುದಿಲ್ಲ ಅನ್ನೋದು ಗೊತ್ತಾಗುತ್ತದೆ ಎಂದಿದ್ದಾರೆ ಅವರು.

ಇದನ್ನೂ ಓದಿ: ಶಾಕಿಂಗ್ ಆಗಿತ್ತು ಪ್ರಭುದೇವ-ನಯನತಾರಾ ಲವ್ ಅಫೇರ್ ವಿಚಾರ; ಏನಿದು ಪ್ರಕರಣ?

ನಯನತಾರಾ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ಜವಾನ್’ ಸಿನಿಮಾ ಗೆದ್ದ ಬಳಿಕ ಅವರು ಕೇವಲ ದೊಡ್ಡ ಸ್ಟಾರ್ ಸಿನಿಮಾನೇ ಬೇಕು ಎಂದು ಕುಳಿತಿಲ್ಲ. ಸಣ್ಣ ಸಿನಿಮಾ, ಯುವ ನಿರ್ದೇಶಕ ಸಿನಿಮಾಗಳನ್ನೂ ಒಪ್ಪಿ ಬಣ್ಣ ಹಚ್ಚುತ್ತಿದ್ದಾರೆ. ಅವರು ‘ಮಣ್ಣಂಗಟ್ಟಿ: ಸಿನ್ಸ್ 1960’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಡ್ಯೂಡ್ ವಿಕ್ಕಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸಿದ್ದಾರ್ಥ್, ತ್ರಿಶಾ, ಆರ್​ ಮಾಧವನ್ ಮೊದಲಾದವರು ನಟಿಸುತ್ತಿದ್ದಾರೆ. ನಿರ್ಮಾಪಕ ಶಶಿಕಾಂತ್ ಅವರ ಮೊದಲ ನಿರ್ದೇಶನದ ಸಿನಿಮಾದಲ್ಲೂ ನಯನತಾರಾ ಅವರು ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರ ಈ ವರ್ಷ ರಿಲೀಸ್ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು