ಜಯಾ ಜೊತೆ ಲಂಡನ್ ಹೋಗುವ ಪ್ಲ್ಯಾನ್ ಮಾಡಿದ್ದ ಅಮಿತಾಭ್; ಇದರಿಂದ ನಡೆದೋಯ್ತು ಮದುವೆ

ಅಮಿತಾಭ್ ಬಚ್ಚನ್ ಅವರಿಗೆ ಟ್ರೆಡಿಷನಲ್​ ಹಾಗೂ ಮಾಡರ್ನ್ ಗುಣ ಇರುವ ಹುಡುಗಿ ಎಂದರೆ ಇಷ್ಟ ಆಗಿತ್ತು. ಅದೇ ರೀತಿಯಲ್ಲಿ ಇದ್ದಿದ್ದರು ಜಯಾ ಬಚ್ಚನ್. ಮ್ಯಾಗಜಿನ್ ಕವರ್​ಫೋಟೋದಲ್ಲಿ ಅವರನ್ನು ನೋಡಿ ಅಮಿತಾಭ್ ಖುಷಿಪಟ್ಟಿದ್ದರು. ಜಯಾ ಅವರ ಕಣ್ಣು ಅಮಿತಾಭ್​ಗೆ ಇಷ್ಟ ಆಗಿತ್ತು.

ಜಯಾ ಜೊತೆ ಲಂಡನ್ ಹೋಗುವ ಪ್ಲ್ಯಾನ್ ಮಾಡಿದ್ದ ಅಮಿತಾಭ್; ಇದರಿಂದ ನಡೆದೋಯ್ತು ಮದುವೆ
ಜಯಾ-ಅಮಿತಾಭ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 09, 2024 | 9:07 AM

ನಟಿ ಜಯಾ ಬಚ್ಚನ್ (Amitabh Bachchan)​ ಅವರಿಗೆ ಇಂದು (ಏಪ್ರಿಲ್ 9) ಜನ್ಮದಿನ. ಅವರು ಅಮಿತಾಭ್ ಬಚ್ಚನ್​ನ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅನೇಕರಿಗೆ ಇವರ ದಾಂಪತ್ಯ ಮಾದರಿಯಾಗಿದೆ. ಇವರ ಹೊಂದಾಣಿಕೆ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಯಾ ಹಾಗೂ ಅಮಿತಾಭ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆ ಪಡೆದು 1973ರ ಜೂನ್​ 3ರಂದು ಮದುವೆ ಆದರು. ಈ ದಂಪತಿಯ ಪ್ರೇಮ ಕಹಾನಿ ಇಲ್ಲಿದೆ.

ಅಮಿತಾಭ್ ಬಚ್ಚನ್ ಅವರಿಗೆ ಟ್ರೆಡಿಷನಲ್​ ಹಾಗೂ ಮಾಡರ್ನ್ ಗುಣ ಇರುವ ಹುಡುಗಿ ಎಂದರೆ ಇಷ್ಟ ಆಗಿತ್ತು. ಅದೇ ರೀತಿಯಲ್ಲಿ ಇದ್ದಿದ್ದರು ಜಯಾ ಬಚ್ಚನ್. ಮ್ಯಾಗಜಿನ್ ಕವರ್​ಫೋಟೋದಲ್ಲಿ ಅವರನ್ನು ನೋಡಿ ಅಮಿತಾಭ್ ಖುಷಿಪಟ್ಟಿದ್ದರು. ಜಯಾ ಅವರ ಕಣ್ಣು ಅಮಿತಾಭ್​ಗೆ ಇಷ್ಟ ಆಗಿತ್ತು. ಅವರ ಜೊತೆ ನಟಿಸೋಕೆ ಅವಕಾಶ ಸಿಕ್ಕಾಗ ಅಮಿತಾಭ್ ಖುಷಿಪಟ್ಟಿದ್ದರು.

70ರ ದಶಕದ ಆರಂಭದ ಸಮಯದಲ್ಲಿ ಅಮಿತಾಭ್ ಅವರು ಓರ್ವ ಫ್ಲಾಪ್​ ಹೀರೋ ಎಂದು ಎನಿಸಿಕೊಂಡಿದ್ದರು. ಅವರ ಜತೆ ನಟಿಸೋಕೆ ನಾಯಕಿಯರು ಹಿಂದೇಟು ಹಾಕುತ್ತಿದ್ದರು. ಅಮಿತಾಭ್​ ಜತೆ ಆ ಸಮಯದಲ್ಲಿ ನಟಿಸೋಕೆ ಜಯಾ ಒಪ್ಪಿದ್ದರು. ಅಮಿತಾಭ್​ ಹಾಗೂ ಜಯಾ ಮೊದಲ ಬಾರಿಗೆ ಭೇಟಿ ಮಾಡಿದ್ದು ‘ಬನ್ಸಿ ಬಿರ್ಜು’ (1972) ಚಿತ್ರದ ಸೆಟ್​ನಲ್ಲಿ. ಈ ಸಿನಿಮಾದಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ತೆರೆಕಂಡ ಮರುವರ್ಷವೆ ‘ಜಂಜೀರ್’​ ಚಿತ್ರದಲ್ಲೂ ಇಬ್ಬರೂ ಒಟ್ಟಾಗಿ ನಟಿಸಿ ಗಮನ ಸೆಳೆದರು.

‘ಜಂಜೀರ್’ ಚಿತ್ರದ ಶೂಟಿಂಗ್ ವೇಳೆ ಅಮಿತಾಭ್​ ಹಾಗೂ ಜಯಾ ಮಧ್ಯೆ ಆಪ್ತತೆ ಬೆಳೆಯಿತು. ಈ ಚಿತ್ರ ಹಿಟ್​ ಆದರೆ ಜಯಾ ಅವರನ್ನು ಲಂಡನ್​ಗೆ ಕರೆದೊಯ್ಯುವ ಪ್ಲ್ಯಾನ್ ಅಮಿತಾಭ್​ಗೆ ಇತ್ತು. ಅಲ್ಲಿ ಸೆಲೆಬ್ರೇಷನ್ ಮಾಡುವ ಕನಸು ಕಂಡಿದ್ದರು. ಈ ವಿಚಾರ ಅಮಿತಾಭ್​ ತಂದೆ ಹರಿವಂಶ್​ ರೈ ಬಚ್ಚನ್​ಗೆ ತಿಳಿಯಿತು. ಮದುವೆ ಆಗಿ ವಿದೇಶಕ್ಕೆ ಹೋಗುವಂತೆ ಅವರು ಸೂಚಿಸಿದ್ದರು. ಹೀಗಾಗಿ, 1973ರಲ್ಲಿ ಇವರ ಮದುವೆ ನಡೆದೇ ಹೋಯಿತು.

ಇದನ್ನೂ ಓದಿ: ಐಶ್ವರ್ಯಾನ ಹೊರಗಿನವರು ಎಂದ್ರಾ ಅಮಿತಾಭ್ ಮೊಮ್ಮಗಳು? ವೈರಲ್ ಆಯ್ತು ಹೇಳಿಕೆ

ಅಮಿತಾಭ್ ಗೆಲುವು ಕಾಣುವುದಿಲ್ಲ ಎಂದು ಹೇಳಿದವರಿಗೆ ​ಅವರ ಗೆಲುವು ಉತ್ತರ ನೀಡಿತ್ತು. 1975ರಲ್ಲಿ ರಿಲೀಸ್ ಆದ ‘ಶೋಲೆ’ ಸಿನಿಮಾ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರವನ್ನು ಫ್ಯಾನ್ಸ್ ಈಗಲೂ ಮೆಚ್ಚಿಕೊಳ್ಳುತ್ತಾರೆ. ಅಮಿತಾಭ್ ಯಶಸ್ಸಿನ ಬಗ್ಗೆ ಜಯಾ ಮೊದಲೇ ಊಹಿಸಿದ್ದರು. 90ರ ದಶಕದಲ್ಲಿ ಅಮಿತಾಭ್ ಸಂಪೂರ್ಣ ನಷ್ಟ ಅನುಭವಿಸಿದಾಗ ಅಮಿತಾಭ್ ಬೆಂಬಲಕ್ಕೆ ನಿಂತರು ಜಯಾ. ನಂತರ ಅಮಿತಾಭ್ ಮತ್ತೆ ಬೌನ್ಸ್ ಬ್ಯಾಕ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ