ಐಶ್ವರ್ಯಾನ ಹೊರಗಿನವರು ಎಂದ್ರಾ ಅಮಿತಾಭ್ ಮೊಮ್ಮಗಳು? ವೈರಲ್ ಆಯ್ತು ಹೇಳಿಕೆ

‘ವಾಟ್ ದಿ ಹೆಲ್ ನವ್ಯಾ 2’ ಶೋಗೆ ಈ ಬಾರಿ ನವ್ಯಾ ತಾಯಿ ಶ್ವೇತಾ ಹಾಗೂ ಅಜ್ಜಿ ಜಯಾ ಆಗಮಿಸಿದ್ದರು. ಈ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಶೋಗೆ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಅಥವಾ ಅಮಿತಾಭ್ ಬಚ್ಚನ್ ಅವರನ್ನು ಕರೆಸುವ ಬಗ್ಗೆ ಪ್ರಶ್ನೆ ಮಾಡಲಾಗಿದೆ.

ಐಶ್ವರ್ಯಾನ ಹೊರಗಿನವರು ಎಂದ್ರಾ ಅಮಿತಾಭ್ ಮೊಮ್ಮಗಳು? ವೈರಲ್ ಆಯ್ತು ಹೇಳಿಕೆ
ಐಶ್ವರ್ಯಾ-ನವ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 02, 2024 | 7:33 AM

ನವ್ಯಾ ನವೇಲಿ ನಂದ (Navya Naveli) ಅವರು ಅಮಿತಾಭ್ ಬಚ್ಚನ್ ಮೊಮ್ಮಗಳು ಎನ್ನುವ ಕಾರಣಕ್ಕೆ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಆದರೆ, ಅವರು ಚಿತ್ರರಂಗದ ಜೊತೆ ಕನೆಕ್ಷನ್ ಹೊಂದಿಲ್ಲ. ಅವರ ಸಂಪೂರ್ಣ ಗಮನ ಉದ್ಯಮದ ಮೇಲೆ ಇದೆ. ಇತ್ತೀಚೆಗೆ ನಂದಾ ಅವರು ‘ವಾಟ್ ದಿ ಹೆಲ್ ನವ್ಯಾ’ ಹೆಸರಿನ ಪಾಡ್​ಕಾಸ್ಟ್ ಆರಂಭಿಸಿದ್ದರು. ಈ ಶೋಗೆ ಅವರ ಕುಟುಂಬದ ಅನೇಕರು ಬಂದು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕುಟುಂಬದ ಹೊರಗಿನವರನ್ನೂ ಕರೆಯುವುದಾಗಿ ಹೇಳಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ.

‘ವಾಟ್ ದಿ ಹೆಲ್ ನವ್ಯಾ 2’ ಶೋಗೆ ಈ ಬಾರಿ ನವ್ಯಾ ತಾಯಿ ಶ್ವೇತಾ ಹಾಗೂ ಅಜ್ಜಿ ಜಯಾ ಆಗಮಿಸಿದ್ದರು. ಈ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಶೋಗೆ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಅಥವಾ ಅಮಿತಾಭ್ ಬಚ್ಚನ್ ಅವರನ್ನು ಕರೆಸುವ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ಬಹುಶಃ ಮೂರನೇ ಸೀಸನ್ ಇದ್ದರೆ ನಾನು ಅವವರನ್ನು ಆಮಂತ್ರಿಸುತ್ತೇನೆ. ಕೇವಲ ಕುಟುಂಬದವರು ಮಾತ್ರವಲ್ಲ ಕುಟುಂಬದ ಹೊರಗಿನವರಿಗೂ ಆಮಂತ್ರಣ ನೀಡುತ್ತೇನೆ. ಅದು ಸಖತ್ ಫನ್ ಆಗಿರುತ್ತದೆ. ಬೇರೆ ಬೇರೆ ಕ್ಷೇತ್ರದವರ ಅನುಭವ ತಿಳಿದುಕೊಳ್ಳಲು ಖುಷಿ ಇದೆ’ ಎಂದಿದ್ದಾರೆ ನವ್ಯಾ.

ಇದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಹೊರಗಿನವರು ಎಂದು ನವ್ಯಾ ಬಳಕೆ ಮಾಡಿರೋದು ಐಶ್ವರ್ಯಾ ರೈಗೆ ಎಂದು ಕೆಲವರು ಹೇಳಿದ್ದಾರೆ. ಆದರೆ, ಅಸಲಿಗೆ ನವ್ಯಾ ಹಾಗೆ ಹೇಳಿಯೇ ಇಲ್ಲ ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ ಇದನ್ನು ಐಶ್ವರ್ಯಾ ರೈ ಫ್ಯಾನ್ಸ್ ಒಪ್ಪುತ್ತಿಲ್ಲ.

ಇದನ್ನೂ ಓದಿ: ನವ್ಯಾ ನವೇಲಿ ನಂದಾಗೆ ಶನಾಯ ಕಪೂರ್ ಅವರ ಬೆಲ್ಲಿ ಡ್ಯಾನ್ಸ್ ವಿಡಿಯೋ ನೋಡಿ “ಹೊಟ್ಟೆ ನೋವು” ಬಂದದ್ದು ಯಾಕೆ?

‘ಈ ಶೋನಲ್ಲಿ ವಿಜ್ಞಾನಿಯನ್ನು ಹೊಂದಲು ನಾನು ಇಷ್ಟಪಡುತ್ತೇನೆ. ಇಂದು ವಿಜ್ಞಾನದ ಅರ್ಥವೇನು, ನಾವು ಯಾವ ಹೊಸ ಆವಿಷ್ಕಾರಗಳನ್ನು ಹೊಂದಿದ್ದೇವೆ ಎಂಬುದರ ಕುರಿತು ಮಾತನಾಡಲು ನಾನು ಇಷ್ಟಪಡುತ್ತೇನೆ. ನಾನು ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರನ್ನು ಕರೆಯಲು ಇಷ್ಟಪಡುತ್ತೇನೆ. ಕೆಲವು ವಿಷಯಗಳ ಬಗ್ಗೆ ಅವರ ಅಭಿಪ್ರಾಯ ಪಡೆಯಲು ನಾನು ಬಯಸುತ್ತೇನೆ. ಇದು ನಮ್ಮ ಮೂವರಿಗೂ (ನವ್ಯಾ, ಶ್ವೇತಾ, ಜಯಾ) ಜ್ಞಾನವನ್ನು ನೀಡುತ್ತದೆ’ ಎಂದಿದ್ದಾರೆ ಅವರು.  ಐಶ್ವರ್ಯಾ ರೈ ಹಾಗೂ ಅಭಿಷೇಕ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನಲಾಗುತ್ತಿದೆ. ಬಚ್ಚನ್ ಕುಟುಂಬದವರು ಕೂಡ ಐಶ್ವರ್ಯನಾ ಹೊರಗಿನವರ ರೀತಿ ನೋಡುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.