ಜೂ ಎನ್​ಟಿಆರ್ ಹುಟ್ಟುಹಬ್ಬಕ್ಕೆ ಬಳ್ಳಾರಿಯಲ್ಲಿ ಅದ್ಧೂರಿ ಬೈಕ್ ರ್ಯಾಲಿ

ಜೂ ಎನ್​ಟಿಆರ್ ಮೇ 20ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಒಂದು ದಿನ ಮುಂಚಿತವಾಗಿ ಅದ್ಧೂರಿ ಬೈಕ್ ರ್ಯಾಲಿ ನಡೆಸಿದ್ದಾರೆ. ಅದೂ ಬಳ್ಳಾರಿಯಲ್ಲಿ.

ಜೂ ಎನ್​ಟಿಆರ್ ಹುಟ್ಟುಹಬ್ಬಕ್ಕೆ ಬಳ್ಳಾರಿಯಲ್ಲಿ ಅದ್ಧೂರಿ ಬೈಕ್ ರ್ಯಾಲಿ

Updated on: May 19, 2024 | 10:25 PM

ಟಾಲಿವುಡ್​ನ (Tollywood) ಸ್ಟಾರ್ ನಟ ಆಗಿದ್ದ ಜೂ ಎನ್​ಟಿಆರ್ (Jr NTR), ‘RRR’ ಸಿನಿಮಾದ ಬಳಿಕ ಭಾರತದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ‘ಆರ್​ಆರ್​ಆರ್’ ಸಿನಿಮಾ ಜೂ ಎನ್​ಟಿಆರ್ ಅವರನ್ನು ಗ್ಲೋಬಲ್ ನಟನನ್ನಾಗಿ ಮಾಡಿದೆ. ಮೊದಲೇ ಜೂ ಎನ್​ಟಿಆರ್​ಗೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದರು, ಈಗ ಅಭಿಮಾನಿಗಳ ಸಂಖ್ಯೆ ಎರಡು ಪಟ್ಟಾಗಿದೆ. ಜೂ ಎನ್​ಟಿಆರ್ ಅಭಿಮಾನಿಗಳು, ಅವರ ಸಿನಿಮಾಗಲ ಪಾತ್ರಗಳಂತೆ ರಫ್ ಆಂಟ್ ಟಫ್. ಮೇ 20 ರಂದು ಜೂ ಎನ್​ಟಿಆರ್ ಹುಟ್ಟುಹಬ್ಬವಿದ್ದು ಒಂದು ದಿನ ಮುಂಚಿತವಾಗಿಯೇ ಅಭಿಮಾನಿಗಳು ಸಂಭ್ರಮ ಶುರುವಿಟ್ಟುಕೊಂಡಿದ್ದಾರೆ. ಬಳ್ಳಾರಿಯಲ್ಲಿ ಜೂ ಎನ್​ಟಿಆರ್ ಅಭಿಮಾನಿಗಳು ಬೈಕ್ ರ್ಯಾಲಿ ಮಾಡಿದ್ದಾರೆ.

ಹಲವಾರು ಮಂದಿ ಯುವಕರು, ಜೂ ಎನ್​ಟಿಆರ್ ಚಿತ್ರ ಹೊಂದಿರುವ ಹಳದಿ ಬಣ್ಣದ ಬಾವುಟಗಳನ್ನು ಹಿಡಿದು ಬೈಕ್​ಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆಯುದ್ದಕ್ಕೂ ‘ಜೈ ಎನ್​ಟಿಆರ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಬಳ್ಳಾರಿ ಕರ್ನಾಟಕದ್ದೇ ಆದರು, ಅಲ್ಲಿ ತೆಲುಗಿನ ಪ್ರಭಾವ ಜೋರಾಗಿದೆ. ಹಾಗಾಗಿ ಅಲ್ಲಿ ಜೂ ಎನ್​ಟಿಆರ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿದ್ದಾರೆ. ಎನ್​ಟಿಆರ್ ಅನ್ನು ಕಾಣಲು ಬಳ್ಳಾರಿಯಿಂದ ಹಲವು ಹಯುವಕರು ಹೈದರಾಬಾದ್​ಗೆ ಸಹ ತೆರಳಿದ್ದಾರಂತೆ.

ಇದು ಬಳ್ಳಾರಿಯ ಕತೆಯಾದರೆ ಜಪಾನ್​ನಲ್ಲಿಯೂ ಸಹ ಜೂ ಎನ್​ಟಿಆರ್ ಅಭಿಮಾನಿಗಳು ಒಂದು ದಿನ ಮುಂಚಿತವಾಗಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಜೂ ಎನ್​ಟಿಆರ್​ರ ಬೇರೆ ಬೇರೆ ಸಿನಿಮಾಗಳ ಪಾತ್ರಗಳ ಪೋಸ್ಟರ್​ಗಳನ್ನು ಕಟ್ಟಿ, ಜೂ ಎನ್​ಟಿಆರ್​ ಅವರ ಪೋಸ್ಟರ್​ಗಳನ್ನು ಕಟ್ಟಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇಂದು ನಡೆದ ಎಸ್​ಆರ್​​ಎಚ್ ಪಂದ್ಯದ ನಡುವೆ ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದ ಹಾಡನ್ನು ಸಹ ಕೇಳಿಲಾಯ್ತು.

ಇದನ್ನೂ ಓದಿ:‘ದೇವರ’ ಹಾಡು ಬಿಡುಗಡೆ, ಭಯ ಹುಟ್ಟಿಸುತ್ತಿರುವ ಜೂ ಎನ್​ಟಿಆರ್

ಆಂಧ್ರ-ತೆಲಂಗಾಣಗಳಲ್ಲಂತೂ ಜೂ ಎನ್​ಟಿಆರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಲು ತಯಾರಿ ನಡೆಸಿದ್ದಾರೆ. ರಕ್ತದಾನ ಶಿಬಿರಗಳು, ಅನ್ನದಾನಗಳು ಜೋರಾಗಿ ಆಯೋಜಿಸಲಾಗಿದೆ. ಜೂ ಎನ್​ಟಿಆರ್ ಹುಟ್ಟುಹಬ್ಬದ ಪ್ರಯುಕ್ತ ಈಗಾಗಲೇ ‘ದೇವರ’ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಹೊಸ ಸಿನಿಮಾದ ಘೋಷಣೆ ಸಹ ಆಗುವ ಸಾಧ್ಯತೆ ಇದೆ. ಜೊತೆಗೆ ‘ವಾರ್ 2’ ಸಿನಿಮಾದ ಅಪ್​ಡೇಟ್ ಸಹ ಹೊರಬೀಳುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ