
ನಟ ಜೂನಿಯರ್ ಎನ್ಟಿಆರ್ (Jr NTR) ಅವರು ‘ವಾರ್ 2’ ಸಿನಿಮಾದಲ್ಲಿ ನಟಿಸಿದ್ದರು. ಕೆಲವು ವಾರಗಳ ಹಿಂದೆ ಬಿಡುಗಡೆ ಆದ ಆ ಸಿನಿಮಾದಿಂದ ಅಭಿಮಾನಿಗಳಿಗೆ ನಿರಾಸೆ ಆಯಿತು. ಆದರೆ ಈಗ ಅವರು ಮುಂದಿನ ಸಿನಿಮಾ ಬಗ್ಗೆ ಗಮನ ಹರಿಸಿದ್ದಾರೆ. ಪ್ರಶಾಂತ್ ನೀಲ್ (Prashanth Neel) ಜೊತೆಗಿನ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ನಡುವೆ ಜೂನಿಯರ್ ಎನ್ಟಿಆರ್ ಅವರು ತುಂಬಾ ಸ್ಲಿಮ್ ಆಗಿದ್ದಾರೆ. ಅಭಿಮಾನಿಗಳಿಗೆ ಅಚ್ಚರಿ ಆಗುವ ರೀತಿಯಲ್ಲಿ ಬಾಡಿ ಟ್ರಾನ್ಸ್ಫಾರ್ಮೇಷನ್ ಮಾಡಿಕೊಳ್ಳುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾ (Dragon Movie) ಸಲುವಾಗಿ ಈ ರೀತಿ ಅವರು ಬದಲಾಗುತ್ತಿದ್ದಾರೆ.
ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮಾಗಿಲ್ಲ. ಆದರೆ ಸದ್ಯಕ್ಕೆ ಇದನ್ನು ‘ಡ್ರ್ಯಾಗನ್’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾದ ಶೂಟಿಂಗ್ ಶುರುವಾಗಿ ಹಲವು ತಿಂಗಳು ಕಳೆದಿವೆ. ಅದರ ನಡುವೆ ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ ಸಿನಿಮಾಗೆ ಸಮಯ ನೀಡಿದ್ದರು. ಆದರೆ ಈಗ ಅವರು ‘ಡ್ರ್ಯಾಗನ್’ ಚಿತ್ರದ ಕೆಲಸದಲ್ಲಿಯೇ ಸಂಪೂರ್ಣ ತೊಡಗಿಕೊಂಡಿದ್ದಾರೆ.
‘ವಾರ್ 2’ ಸಿನಿಮಾದ ಪ್ರಚಾರದ ವೇಳೆಯೇ ಜೂನಿಯರ್ ಎನ್ಟಿಆರ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ತುಂಬ ತೆಳ್ಳಗಾಗಿದ್ದು ಅಭಿಮಾನಿಗಳ ಗಮನಕ್ಕೆ ಬಂದಿತ್ತು. ಅವರನ್ನು ಕಂಡು ಹಲವರಿಗೆ ಬೇಸರ ಆಗಿತ್ತು. ಆದರೆ ಜೂನಿಯರ್ ಎನ್ಟಿಆರ್ ಅವರು ಕಾರಣ ಇಲ್ಲದೇ ಈ ರೀತಿ ಸ್ಲಿಮ್ ಆಗಿಲ್ಲ. ‘ಡ್ರ್ಯಾಗನ್’ ಸಿನಿಮಾದಲ್ಲಿನ ಪಾತ್ರದ ಸಲುವಾಗಿ ಅವರು ಇಷ್ಟು ಸ್ಲಿಮ್ ಆಗಿದ್ದಾರೆ.
#JrNTR hardwork 🤩💥pic.twitter.com/O6l9mfAPFb
— RamOnX (@RamXinema) September 16, 2025
ಜೂನಿಯರ್ ಎನ್ಟಿಆರ್ ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದನ್ನು ನೋಡಿದ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಜೂನಿಯರ್ ಎನ್ಟಿಆರ್ ಅವರ ಪರಿಶ್ರಮಕ್ಕೆ ಎಲ್ಲರೂ ಭೇಷ್ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನು ನೋಡಿದ ಬಳಿಕ ‘ಡ್ರ್ಯಾಗನ್’ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಜಾಸ್ತಿ ಆಗುವಂತಿದೆ.
ಇದನ್ನೂ ಓದಿ: ‘ವಾರ್ 2’ ಸೋತರೂ ಜೂ ಎನ್ಟಿಆರ್ಗೆ ಮತ್ತೊಂದು ಅವಕಾಶ ಕೊಟ್ಟ ವೈಆರ್ಎಫ್
‘ವಾರ್ 2’ ಸೋಲಿನಿಂದ ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರ ಆಯಿತು. ಆ ಬೇಸರವನ್ನು ಮರೆಸುವ ರೀತಿಯಲ್ಲಿ ‘ಡ್ರ್ಯಾಗನ್’ ಸಿನಿಮಾ ಮೂಡಿಬರಬೇಕಿದೆ. ‘ಕೆಜಿಎಫ್’ ಯಶಸ್ಸಿನಿಂದ ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿಸಿಕೊಂಡ ಪ್ರಶಾಂತ್ ನೀಲ್ ಅವರು ಡ್ಯಾಗನ್ ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದರಿಂದ ನಿರೀಕ್ಷೆ ಡಬಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.