AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡಸರ ಜತೆ ಹಾಸಿಗೆ ಹಂಚಿಕೊಳ್ಳಲಾರೆ: ಬಿಗ್ ಬಾಸ್ ಆಫರ್ ತಿರಸ್ಕರಿಸಿದ ತನುಶ್ರೀ ದತ್ತ

ಬಾಲಿವುಡ್ ನಟಿ ತನುಶ್ರೀ ದತ್ತ ಅವರಿಗೆ ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರಿಂದ ಆಫರ್ ಬಂದಿತ್ತು. ಬರೋಬ್ಬರಿ 1.65 ಕೋಟಿ ರೂಪಾಯಿ ಸಂಭಾವನೆ ನೀಡುವುದಾಗಿಯೂ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ತನುಶ್ರೀ ದತ್ತ ಅವರು ಅದನ್ನು ಒಪ್ಪಿಕೊಳ್ಳಲಿಲ್ಲ. ಈ ಬಗ್ಗೆ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ.

ಗಂಡಸರ ಜತೆ ಹಾಸಿಗೆ ಹಂಚಿಕೊಳ್ಳಲಾರೆ: ಬಿಗ್ ಬಾಸ್ ಆಫರ್ ತಿರಸ್ಕರಿಸಿದ ತನುಶ್ರೀ ದತ್ತ
Tanushree Dutta
ಮದನ್​ ಕುಮಾರ್​
|

Updated on: Sep 16, 2025 | 9:02 PM

Share

ನಟಿ ತನುಶ್ರೀ ದತ್ತ (Tanushree Dutta) ಅವರು ಈಗ ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ಒಂದು ಕಾಲದಲ್ಲಿ ಅವರು ‘ಆಶಿಕ್ ಬನಾಯಾ ಆಪ್ನೆ’ ರೀತಿಯ ಸಿನಿಮಾಗಳಿಂದ ಸಖತ್ ಜನಪ್ರಿಯತೆ ಗಳಿಸಿದ್ದರು. ಆದರೆ ನಂತರದಲ್ಲಿ ಅವರು ವಿವಾದಗಳಿಂದಲೇ ಹೆಚ್ಚು ಸುದ್ದಿ ಆದರು. ಈಗಲೂ ಅವರು ಸಿನಿಮಾಗಳ ಹೊರತಾಗಿಯೇ ಸುದ್ದಿ ಆಗುತ್ತಿದ್ದಾರೆ. ಅವರಿಗೆ ಬಿಗ್ ಬಾಸ್ ಶೋಗೆ (Bigg Boss) ಹೋಗುವ ಆಫರ್ ಬಂದಿತ್ತು ಎನ್ನಲಾಗಿದೆ. ಆದರೆ ಅವರು ಆ ಅವಕಾಶವನ್ನು ತಿರಸ್ಕರಿಸಿದ್ದಾರೆ. ಅಲ್ಲದೇ ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ.

ಕನ್ನಡ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಲಿಸಿದರೆ ಹಿಂದಿಯಲ್ಲಿ ಬಿಗ್ ಬಾಸ್ ಶೋ ತುಂಬಾ ಬೋಲ್ಡ್ ಆಗಿ ನಡೆಯುತ್ತದೆ. ಮಹಿಳಾ ಸ್ಪರ್ಧಿಗಳು ಮತ್ತು ಪುರುಷ ಸ್ಪರ್ಧಿಗಳು ಒಂದೇ ಹಾಸಿಗೆಯಲ್ಲಿ ನಿದ್ರಿಸಿದ ಉದಾಹರಣೆ ಇದೆ. ಈ ಕಾರಣಕ್ಕೆ ತನುಶ್ರೀ ದತ್ತ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ಜರಿದಿದ್ದಾರೆ. ‘ನಾನು ಅಷ್ಟು ಚೀಪ್ ಅಲ್ಲ’ ಎಂದು ಅವರು ಹೇಳಿದ್ದಾರೆ.

‘ಅಂತಹ ಕಾರ್ಯಕ್ರಮಕ್ಕೆ ನಾನು ಹೋಗುತ್ತೇನೆ ಎಂದು ನಿಮಗೆ ಅನಿಸುತ್ತ? ಅಂಥ ಜಾಗದಲ್ಲಿ ನಾನು ಇರಲಾರೆ. ಆ ರೀತಿ ನಾನು ನನ್ನ ಕುಟುಂಬದ ಜೊತೆಗೂ ಇರಲ್ಲ. ನನಗೆ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಎಂದಿಗೂ ಆಸಕ್ತಿ ಬಂದಿಲ್ಲ, ಬರುವುದೂ ಇಲ್ಲ. ಅವರು ನನಗೆ 1.65 ಕೋಟಿ ರೂಪಾಯಿ ಸಂಭಾವನೆ ಆಫರ್ ಮಾಡಿದ್ದರು. ನನ್ನ ಹಾಗೆ ಇರುವ ಇನ್ನೋರ್ವ ಸೆಲೆಬ್ರಿಟಿಗೂ ಅಷ್ಟೇ ಹಣ ನೀಡಿದರು’ ಎಂದಿದ್ದಾರೆ ತನುಶ್ರೀ.

‘ಬಿಗ್ ಬಾಸ್ ಕಾರ್ಯಕ್ರಮದ ಸ್ಟೈಲಿಸ್ಟ್ ಕಡೆಯಿಂದ ನನಗೆ ಕರೆ ಬಂದಿತ್ತು. ಅವರು ಮನವಿ ಮಾಡಿದರು. ನನ್ನ ಡಯೆಟ್ ನೋಡಿಕೊಳ್ಳುವುದಾಗಿಯೂ ಅವರು ಹೇಳಿದರು. ಏನೇ ಕೊಟ್ಟರು ನಾನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಲ್ಲ ಅಂತ ಅವರಿಗೆ ಹೇಳಿದೆ’ ಎಂದಿದ್ದಾರೆ ತನುಶ್ರೀ ದತ್ತ.

ಇದನ್ನೂ ಓದಿ: ತನುಶ್ರೀ ದತ್ತಾಗೆ ಕುಟುಂದವರಿಂದಲೇ ಕಿರುಕುಳ; ಕಣ್ಣೀರು ಹಾಕಿದ ನಟಿ

‘ಗಂಡಸರು ಮತ್ತು ಹೆಂಗಸರು ಒಂದೇ ಕೋಣೆಯಲ್ಲಿ ಮಲಗುತ್ತಾರೆ. ಒಟ್ಟಿಗೆ ಫೈಟ್ ಮಾಡುತ್ತಾರೆ. ನಾನು ಅದನ್ನು ಮಾಡಲಾರೆ. ನನ್ನ ಡಯೆಟ್ ತುಂಬ ನಿಖರವಾಗಿದೆ. ಒಂದು ರಿಯಾಲಿಟಿ ಶೋಗಾಗಿ ಗಂಡಸರ ಜೊತೆ ಬೆಡ್ ಹಂಚಿಕೊಳ್ಳುವ ಮಹಿಳೆಯ ರೀತಿ ನಾನು ಕಾಣುತ್ತೇನಾ? ನಾನು ಅಷ್ಟು ಚೀಪ್ ಅಲ್ಲ. ನನ್ನ ಖಾಸಗಿತನ ಅಮೂಲ್ಯವಾದದ್ದು. ನನ್ನ ಪಾಡಿಗೆ ನೆಮ್ಮದಿಯಿಂದ ಕೆಲಸ ಮಾಡಲು ಬಿಟ್ಟರೆ ಅದಕ್ಕಿಂತ ಜಾಸ್ತಿ ಸಂಪಾದನೆ ಮಾಡುತ್ತೇನೆ ಎಂಬುದು ನನಗೆ ಗೊತ್ತು’ ಎಂದು ತನುಶ್ರೀ ದತ್ತ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ