ಜೂನಿಯರ್ ಎನ್​ಟಿಆರ್ ಧರಿಸಿದ ಈ ವಾಚ್​ನ ಬೆಲೆ ಎಷ್ಟು ಕೋಟಿ ರೂಪಾಯಿ?

ಜೂನಿಯರ್ ಎನ್​ಟಿಆರ್ ಅವರಿಗೆ ವಾಚ್​ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಅವರ ಬಳಿ ಸಾಕಷ್ಟು ದುಬಾರಿ ವಾಚ್​​ಗಳಿವೆ. ಇದನ್ನು ವಿಶೇಷ ಸಂದರ್ಭಗಳಲ್ಲಿ ಅವರು ಧರಿಸುತ್ತಾರೆ.

ಜೂನಿಯರ್ ಎನ್​ಟಿಆರ್ ಧರಿಸಿದ ಈ ವಾಚ್​ನ ಬೆಲೆ ಎಷ್ಟು ಕೋಟಿ ರೂಪಾಯಿ?
ಜೂನಿಯರ್ ಎನ್​ಟಿಆರ್​
Follow us
ರಾಜೇಶ್ ದುಗ್ಗುಮನೆ
|

Updated on:Mar 11, 2023 | 12:26 PM

ಜೂನಿಯರ್ ಎನ್​​ಟಿಆರ್ (Jr NTR) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಕೋಟ್ಯಾಂತರ ಮಂದಿ ಹಿಂಬಾಲಿಸುತ್ತಾರೆ. ಅವರು ಸ್ಟೈಲ್ ವಿಚಾರಕ್ಕೂ ಗಮನ ಸೆಳೆಯುತ್ತಾರೆ. ಅವರು ಧರಿಸೋ ಬಟ್ಟೆ, ವಾಚ್ ಎಲ್ಲವೂ ಸಖತ್ ಸ್ಟೈಲಿಶ್ ಆಗಿರುತ್ತದೆ. ಈಗ ಅವರು ಹಾಕಿರೋ ವಾಚ್ (JR NTR Watch) ಎಲ್ಲರ ಗಮನ ಸೆಳೆಯುತ್ತಿದೆ. ಇದರ ಬೆಲೆಯನ್ನು ಕೆಲವರು ಹುಡುಕಿ ತೆಗೆದಿದ್ದಾರೆ. ವಾಚ್​ನ ಬೆಲೆ ಕೇಳಿ ಅನೇಕರು ಅಚ್ಚರಿಗೊಂಡಿದ್ದಾರೆ.

ಜೂನಿಯರ್ ಎನ್​ಟಿಆರ್ ಅವರಿಗೆ ವಾಚ್​ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಅವರ ಬಳಿ ಸಾಕಷ್ಟು ದುಬಾರಿ ವಾಚ್​​ಗಳಿವೆ. ಇದನ್ನು ವಿಶೇಷ ಸಂದರ್ಭಗಳಲ್ಲಿ ಅವರು ಧರಿಸುತ್ತಾರೆ. ಸದ್ಯ ಜೂನಿಯರ್ ಎನ್​ಟಿಆರ್ ಅವರು ಅಮೆರಿಕದಲ್ಲಿದ್ದಾರೆ. ಲಾಸ್ ಏಂಜಲೀಸ್​ನಲ್ಲಿ ನಡೆಯಲಿರುವ ‘ಆಸ್ಕರ್​ ಅವಾರ್ಡ್​’ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಅದಕ್ಕೂ ಮೊದಲು ಜೂನಿಯರ್ ಎನ್​ಟಿಆರ್ ಅವರು ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ. ಇದರಲ್ಲಿ ಅವರು ಧರಿಸಿರೋ ವಾಚ್​​ನ ಬೆಲೆ 2.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.  ಜೂನಿಯರ್ ಎನ್​ಟಿಆರ್ ಧರಿಸಿರೋದು ಪಟೆಕ್ ಫಿಲಿಪ್ ಕಂಪನಿಯ ವಾಚ್​. ಸ್ವಿಜರ್​ಲೆಂಡ್​ನಲ್ಲಿ ಈ ಕಂಪನಿಯ ಪ್ರಧಾನ ಕಚೇರಿ ಇದೆ. 1839ರಲ್ಲಿ ಕಂಪನಿ ಸ್ಥಾಪನೆ ಆಯಿತು.

View this post on Instagram

A post shared by Jr NTR (@jrntr)

ಜೂನಿಯರ್ ಎನ್​ಟಿಆರ್​ಗೆ ಕೇವಲ ವಾಚ್​ಗಳ ಮೇಲೆ ಮಾತ್ರವಲ್ಲ ಕಾರ್​ಗಳ ಬಗ್ಗೆಯೂ ಸಾಕಷ್ಟು ಕ್ರೇಜ್ ಇದೆ. ಅವರ ಬಳಿ ಅನೇಕ ದುಬಾರಿ ಹಾಗೂ ಐಷಾರಾಮಿ ಕಾರುಗಳು ಇವೆ. ಈ ಕಾರುಗಳನ್ನು ಅವರು ಆಗಾಗ ತೆಗೆಯುತ್ತಾರೆ.

ಲಾಸ್ ಏಂಜಲಿಸ್​ನಲ್ಲಿ ಜೂನಿಯರ್ ಎನ್​ಟಿಆರ್

ಜೂನಿಯರ್ ಎನ್​ಟಿಆರ್ ಅವರು ಸದ್ಯ ಅಮೆರಿಕದಲ್ಲಿದ್ದಾರೆ. ರಾಜಮೌಳಿ, ರಾಮ್ ಚರಣ್ ಕೂಡ ಅವರಿಗೆ ಸಾಥ್ ನೀಡಿದ್ದಾರೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ರೇಸ್​ನಲ್ಲಿದೆ. ಈ ಹಾಡು ಆಸ್ಕರ್ ಗೆಲ್ಲಲಿ ಎಂದು ಎಲ್ಲರೂ ಕೋರುತ್ತಿದ್ದಾರೆ. ಅಮೆರಿಕದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ.

ಇದನ್ನೂ ಓದಿ: NTR 30: ಜೂನಿಯರ್​ ಎನ್​ಟಿಆರ್​ 30ನೇ ಚಿತ್ರಕ್ಕೆ ಜಾನ್ವಿ ಕಪೂರ್​ ನಾಯಕಿ; ಇಲ್ಲಿದೆ ಫಸ್ಟ್​ ಲುಕ್​

ಆಸ್ಕರ್ ವೇದಿಕೆ ಮೇಲಿಲ್ಲ ರಾಮ್ ಚರಣ್​- ಜೂನಿಯರ್  ಎನ್​ಟಿಆರ್ ಪರ್ಫಾರ್ಮೆನ್ಸ್

ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ಆಸ್ಕರ್​ ಸಮಾರಂಭ ನಡೆಯಲಿದೆ. ಹಾಲಿವುಡ್​ ಸೇರಿದಂತೆ ಪ್ರಪಂಚದ ವಿವಿಧ ಭಾಷೆಯ ಚಿತ್ರರಂಗದ ಗಣ್ಯರೆಲ್ಲ ಆ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ. ಅಂಥ ವೇದಿಕೆಯಲ್ಲಿ ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್​ ಅವರು ‘ನಾಟು ನಾಟು..’ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಿಲ್ಲ ಎಂದು ಜೂನಿಯರ್​ ಎನ್​ಟಿಆರ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:23 pm, Sat, 11 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ