ಅಲ್ಲು ಅರ್ಜುನ್ ವಿವಾದ ತಣ್ಣಗಾಗುವ ಮೊದಲೇ ದೊಡ್ಡ ನಿರ್ಧಾರ ತೆಗೆದುಕೊಂಡ ಜೂನಿಯರ್ ಎನ್​ಟಿಆರ್

‘ಪುಷ್ಪ 2’ ಪ್ರೀಮಿಯರ್‌ನಲ್ಲಿ ನಡೆದ ದುರ್ಘಟನೆಯ ನಂತರ, ತೆಲುಗು ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವುದು ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ, ಜೂನಿಯರ್ ಎನ್​ಟಿಆರ್ ಅವರು ಅಭಿಮಾನಿಗಳನ್ನು ಭೇಟಿ ಮಾಡಲು ಯೋಜನೆ ರೂಪಿಸಿದ್ದಾರೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಸೂಕ್ತ ಅನುಮತಿ ಪಡೆದ ನಂತರವೇ ಈ ಭೇಟಿ ನಡೆಯಲಿದೆ.

ಅಲ್ಲು ಅರ್ಜುನ್ ವಿವಾದ ತಣ್ಣಗಾಗುವ ಮೊದಲೇ ದೊಡ್ಡ ನಿರ್ಧಾರ ತೆಗೆದುಕೊಂಡ ಜೂನಿಯರ್ ಎನ್​ಟಿಆರ್
ಜೂನಿಯರ್ ಎನ್​ಟಿಆರ್
Edited By:

Updated on: Feb 05, 2025 | 3:52 PM

ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡೋದು ಎಂದರೆ ಅದು ದೊಡ್ಡ ಚಾಲೆಂಜ್ ಎಂಬಂತಾಗಿದೆ. ಹೀಗೆ ಭೇಟಿ ಮಾಡಿದರೆ ಎಲ್ಲಾದರೂ ಪರಿಸ್ಥಿತಿ ಕೈ ಮೀರಿ ಕಾಲ್ತುಳಿತಕ್ಕೆ ಎಡೆಮಾಡಿಕೊಟ್ಟರೆ ಎನ್ನುವ ಭಯ ಕಾಡುತ್ತಿದೆ. ಇದಕ್ಕೆ ಕಾರಣ ಆಗಿದ್ದು ‘ಪುಷ್ಪ 2’ ಚಿತ್ರದ ಪ್ರೀಮಿಯರ್ ವೇಳೆ ನಡೆದ ದುರ್ಘಟನೆ. ಅಲ್ಲು ಅರ್ಜುನ್ ಸಿನಿಮಾ ನೋಡಲು ಹೊದಾಗ ಉಂಟಾದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟರೆ, ಅವರ ಮಗು ಸಾಕಷ್ಟು ಗಂಭೀರಗೊಂಡಿದ್ದಾರೆ. ಅವರು ಇನ್ನೂ ಚೇತರಿಕೆ ಕಂಡಿಲ್ಲ. ಹೀಗಿರುವಾಗಲೇ ಜೂನಿಯರ್ ಎನ್​ಟಿಆರ್ ಒಂದು ಗಟ್ಟಿ ನಿರ್ಧಾರ ಮಾಡಿದ್ದಾರೆ.

ಜೂನಿಯರ್ ಎನ್​ಟಿಆರ್ ಅವರು ಇತ್ತೀಚೆಗೆ ಅಭಿಮಾನಿಗಳ ಕೈಗೆ ಸಿಕ್ಕೇ ಇಲ್ಲ. ಇದಕ್ಕೆ ಕಾರಣ ಹಲವು. ನಿತ್ಯವೂ ಅವರ ಮನೆಯ ಸಮೀಪ ಕೆಲವು ಅಭಿಮಾನಿಗಳು ಬರುತ್ತಿದ್ದಾರೆ. ಅವರ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂದು ಪ್ರಯತ್ನಿಸಿದ್ದು ಇದೆ. ಆದರೆ, ಇದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಜೂನಿಯರ್ ಎನ್​ಟಿಆರ್ ಅವರು ಅಭಿಮಾನಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಜೂನಿಯರ್ ಎನ್​ಟಿಆರ್​ ಅವರು ಪ್ರೆಸ್​ ಸ್ಟೇಟ್​ಮೆಂಟ್ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಬರೆದಿದ್ದಾರೆ. ಶೀಘ್ರವೇ ‘ಫ್ಯಾನ್​ ಮೀಟ್’ ಮಾಡೋದಾಗಿ ಅವರು ಹೇಳಿದ್ದಾರೆ. ಎಲ್ಲಾ ಒಪ್ಪಿಗೆ ಪಡೆದ ಬಳಿಕ ಅವರು ಇದನ್ನು ಆಯೋಜನೆ ಮಾಡಲಿದ್ದಾರೆ.

‘ನೀವು ತೋರುತ್ತಿರುವ ಪ್ರೀತಿಗೆ ಜೂನಿಯರ್​ ಎನ್​ಟಿಆರ್ ಅವರು ಖುಷಿ ಪಟ್ಟಿದ್ದಾರೆ. ನಟನ ಭೇಟಿ ಮಾಡಬೇಕು ಎನ್ನುವ ಅಭಿಮಾನಿಗಳ ತುಡಿತವನ್ನು ಅವರು ಅರಿತುಕೊಂಡಿದ್ದಾರೆ. ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಶೀಘ್ರವೇ ಒಂದು ಭೇಟಿಯನ್ನು ಆಯೋಜನೆ ಮಾಡಲಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಮತ್ತು ಇತರ ಸಂಬಂಧಿತ ಅಧಿಕಾರಿಗಳಿಂದ ಎಲ್ಲಾ ಅಗತ್ಯ ಅನುಮತಿಗಳನ್ನು ಪಡೆದ ಬಳಿಕ ಈ ಕಾರ್ಯಕ್ರಮ, ಆಯೋಜನೆ ಗೊಳ್ಳಲಿದೆ’ ಎಂದು ಹೇಳಲಾಗಿದೆ.

ಇದನ್ನೂ ಓದಿ: ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಕನ್ನಡದಲ್ಲೇ ಮಾತನಾಡಿದ್ದ ಜೂನಿಯರ್ ಎನ್​ಟಿಆರ್

ಸದ್ಯ ಜೂನಿಯರ್ ಎನ್​ಟಿಆರ್ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಈ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.