ಜೂನಿಯರ್ ಮಹೇಶ್ ಬಾಬು ಕಂಡ ಎಗ್ಸೈಟ್​​​ಮೆಂಟ್​​​ನಲ್ಲಿ ಅಭಿಮಾನಿ ಮಾಡಿದ್ದೇನು ನೋಡಿ

ಸ್ಟಾರ್ ನಟರನ್ನು ಭೇಟಿ ಮಾಡುವುದು ಅಭಿಮಾನಿಗಳಿಗೆ ಕಷ್ಟ. ಹೀಗಾಗಿ, ಅವರಂತೆ ಕಾಣುವ ಜೂನಿಯರ್ ಕಲಾವಿದರಿಗೆ ಈಗ ಭಾರಿ ಬೇಡಿಕೆ. ಇತ್ತೀಚೆಗೆ, ಜೂನಿಯರ್ ಮಹೇಶ್ ಬಾಬು ಅವರನ್ನು ನಿಜವಾದ ಸ್ಟಾರ್ ಎಂದೇ ಭಾವಿಸಿ ಅಭಿಮಾನಿಯೊಬ್ಬರು ಅಪ್ಪಿಕೊಂಡ ವಿಡಿಯೋ ವೈರಲ್ ಆಗಿದೆ. ಇದು ಜೂನಿಯರ್ ಕಲಾವಿದರು ಅಭಿಮಾನಿಗಳ ಆಸೆ ಈಡೇರಿಸುವ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಜೂನಿಯರ್ ಮಹೇಶ್ ಬಾಬು ಕಂಡ ಎಗ್ಸೈಟ್​​​ಮೆಂಟ್​​​ನಲ್ಲಿ ಅಭಿಮಾನಿ ಮಾಡಿದ್ದೇನು ನೋಡಿ
ಜೂನಿಯರ್ ಮಹೇಶ್ ಬಾಬು

Updated on: Jan 31, 2026 | 8:55 AM

ಸ್ಟಾರ್ ಹೀರೋಗಳು ಎದುರಾದರೆ ಸಾಕು ಅಭಿಮಾನಿಗಳು ಬಂದು ಮುತ್ತಿಕೊಳ್ಳುತ್ತಾರೆ. ಹೀಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಭದ್ರತೆಯೊಂದಿಗೆ ಬರುತ್ತಾರೆ. ಹೀಗಾಗಿ ಎಲ್ಲರಿಗೂ ಭೇಟಿಯ ಅದೃಷ್ಟ ಸಿಗೋದಿಲ್ಲ. ಈ ಕಾರಣದಿಂದಲೇ, ಅವರಂತೆ ಕಾಣೋ ಜೂನಿಯರ್ ಆರ್ಟಿಸ್ಟ್​​​ಗಳಿಗೂ ಸಾಕಷ್ಟು ಬೇಡಿಕೆ ಇರುತ್ತದೆ.ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಜೂನಿಯರ್ ಮಹೇಶ್ ಬಾಬು (Mahesh Babu) ಅವರನ್ನು ನೋಡಿದ ಅಭಿಮಾನಿ ಸಖತ್ ಖುಷಿಯಾಗಿದ್ದಾರೆ. ಅವರನ್ನು ಎತ್ತಾಡಿಸಿದ್ದಾರೆ.

ಮಹೇಶ್ ಬಾಬು ಅವರು ಸ್ಟಾರ್ ನಟ. ಅವರ ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಾರೆ. ಅವರನ್ನು ಭೇಟಿ ಮಾಡೋದು ಅಸಾಧ್ಯವಾದ ಮಾತು. ಹೀಗಾಗಿ, ಜೂನಿಯರ್ ಮಹೇಶ್ ಬಾಬು ಅವರಲ್ಲಿ ತಮ್ಮ ಹೀರೋನ ಕಾಣುತ್ತಿದ್ದಾರೆ ಅಭಿಮಾನಿಗಳು. ಆಂಧ್ರ ಪ್ರದೇಶದ ಏಳೂರಲ್ಲಿ ಜಾತ್ರೆ ನಡೆದಿದ್ದು, ಇದಕ್ಕೆ ತೆಲುಗು ನಟರ ದಂಡೇ ನೆರೆದಿತ್ತು. ಆದರೆ, ಯಾರೊಬ್ಬರೂ ಒರಿಜಿನಲ್ ಆಗಿರಲಿಲ್ಲ.

ಇದನ್ನೂ ಓದಿ: ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ ಜಾಗ ಇಲ್ಲವೆ? ಸತ್ಯವೇನು?

ಜೂನಿಯರ್ ಮಹೇಶ್ ಬಾಬು, ಜೂನಿಯರ್ ಬಾಲಯ್ಯ, ಜೂನಿಯರ್ ಪವನ್ ಕಲ್ಯಾಣ್ ಸೇರಿದಂತೆ ಅನೇಕರು ಒಂದೆಡೆ ಸೇರಿದ್ದರು. ಈ ವೇಳೆ ಜೂನಿಯರ್ ಮಹೇಶ್ ಬಾಬು ಅವರು ವೇದಿಕೆ ಮೇಲೆ ಮಾತನಾಡಲು ಆರಂಭಿಸಿದರು. ಅವರನ್ನು ನೋಡಿ ಅಭಿಮಾನಿ ಖುಷಿಪಟ್ಟಿದ್ದಾನೆ. ಮಹೇಶ್ ಬಾಬು ಅವರನ್ನೇ ನೋಡಿದಂತಾಗಿ ಹೋಗಿ ಅವರನ್ನು ತಬ್ಬಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹೇಶ್ ಬಾಬು ಅವರು ಸದ್ಯ ರಾಜಮೌಳಿ ಜೊತೆ ‘ವಾರಣಾಸಿ’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ 2027ರ ಏಪ್ರಿಲ್ 7ರಂದು ರಿಲೀಸ್ ಆಗಲಿದೆ. ಸಿನಿಮಾಗೆ ಈಗಾಗಲೇ ಶೂಟಿಂಗ್ ನಡೆಯುತ್ತಿದೆ. ದೊಡ್ಡ ಬಜೆಟ್​​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.