Kichcha Sudeep: ‘K46’ ಟೀಸರ್​ ಬಗ್ಗೆ ದೊಡ್ಡ ಅಪ್​ಡೇಟ್ ನೀಡಿದ ನಟ ಕಿಚ್ಚ ಸುದೀಪ್  

ಈ ಟೀಸರ್ ಯಾವಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿ ಮೂಡಿತ್ತು. ಅದಕ್ಕೆ ಸುದೀಪ್ ಕಡೆಯಿಂದಲೇ ಅಪ್​ಡೇಟ್ ಸಿಕ್ಕಿದೆ.

Kichcha Sudeep: ‘K46’ ಟೀಸರ್​ ಬಗ್ಗೆ ದೊಡ್ಡ ಅಪ್​ಡೇಟ್ ನೀಡಿದ ನಟ ಕಿಚ್ಚ ಸುದೀಪ್  
ಸುದೀಪ್

Updated on: Jun 24, 2023 | 11:27 AM

‘ವಿಕ್ರಾಂತ್​ ರೋಣ’ (Vikrant Rona) ರಿಲೀಸ್ ಆದ ಬಳಿಕ ದೀರ್ಘ ಗ್ಯಾಪ್​ ಮಾಡಿದ್ದ ಕಿಚ್ಚ ಸುದೀಪ್ ಅವರು ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಸುದೀಪ್​ ನಟನೆಯ 46ನೇ ಸಿನಿಮಾ ಕುರಿತು ಮೇ 24ರಂದು ಮಾಹಿತಿ ಹೊರಬಿದ್ದಿತ್ತು. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ‘ವಿ ಕ್ರಿಯೇಷನ್ಸ್​’ (V Creations) ಜೊತೆ ಅವರು ಕೈ ಜೋಡಿಸಿದ್ದರು. ಈ ಚಿತ್ರವನ್ನು ಕಲೈಪುಲಿ ಎಸ್​. ಧಾನು ನಿರ್ಮಾಣ ಮಾಡುತ್ತಿದ್ದಾರೆ. ‘ಕಬಾಲಿ’, ‘ಅಸುರನ್​’, ‘ತುಪಾಕಿ’ ರೀತಿಯ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ‘ವಿ ಕ್ರಿಯೇಷನ್ಸ್​’ ಸಂಸ್ಥೆಗೆ ಇದೆ. ಈಗ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ಸಿಕ್ಕಿದೆ.

ಸುದೀಪ್ ಅವರು ಇತ್ತೀಚೆಗೆ ಚಿತ್ರದ ಟೀಸರ್ ಶೂಟ್​ನಲ್ಲಿ ಭಾಗಿ ಆಗಿದ್ದರು. ಈ ಟೀಸರ್​ನ ಕೆಲಸಗಳು ಭರದಿಂದ ಸಾಗಿದ್ದವು. ಈ ಟೀಸರ್ ಯಾವಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿ ಮೂಡಿತ್ತು. ಅದಕ್ಕೆ ಸುದೀಪ್ ಕಡೆಯಿಂದಲೇ ಉತ್ತರ ಸಿಕ್ಕಿದೆ. ಈ ಬಗ್ಗೆ ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

‘K46 ಚಿತ್ರದ ಟೀಸರ್ ಸಿದ್ಧವಾಗಿದೆ. ತಂಡ ಸಾಕಷ್ಟು ಕಷ್ಟಪಟ್ಟಿದೆ. ಅದನ್ನು ನಿಮ್ಮ ಮುಂದಿಡಲು ಎಗ್ಸೈಟ್ ಆಗಿದ್ದೇವೆ. ದಿನಾಂಕ ಘೋಷಣೆ ಜೂನ್ 27ರಂದು ಆಗಲಿದೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಆ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು. ಈಗ ಜೂನ್ 25ರಂದು ದೊಡ್ಡ ಮಟ್ಟದಲ್ಲಿ ಅನೌನ್ಸ್​ಮೆಂಟ್ ಮಾಡಲಾಗುತ್ತಿದೆ. ಆ ಬಗ್ಗೆಯೂ ಸುದೀಪ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Kichcha Sudeep: ಗ್ರ್ಯಾಂಡ್ ಎಂಟ್ರಿ ಕೊಟ್ಟ ಕಿಚ್ಚ-ಪ್ರಿಯಾ ದಂಪತಿ; ನವ ಜೋಡಿಗೆ ವಿಶ್

‘ವಿಕ್ರಾಂತ್ ರೋಣ’ ರಿಲೀಸ್ ಆದ ಬಳಿಕ ಸುದೀಪ್ ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲು ವಿಳಂಬ ಮಾಡಿದರು. ರಾಜಕೀಯ ಪ್ರಚಾರದಲ್ಲೂ ತೊಡಗಿಕೊಂಡರು. ಈ ಮಧ್ಯೆ ಹಲವು ಸಿನಿಮಾದ ಟೀಸರ್-ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆದರು. ಈಗ ಸುದೀಪ್ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

Published On - 10:36 am, Sat, 24 June 23

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us