ತೆಲುಗಿನ ಹಿರಿಯ ನಟ ಕೈಕಾಲ ಸತ್ಯನಾರಾಯಣ​ ನಿಧನ; ರಾಜ್​ಕುಮಾರ್ ಸಿನಿಮಾದಲ್ಲಿ ನಟಿಸಿದ್ದ ಕಲಾವಿದ

Kaikala Satyanarayana Death: ಕೈಕಾಲ ಸತ್ಯನಾರಾಯಣ ಅವರು 1935ರ ಜುಲೈ 25ರಂದು ಆಂಧ್ರ ಪ್ರದೇಶದಲ್ಲಿ ಜನಿಸಿದರು. 1959ರಂದು ಅವರು ಚಿತ್ರರಂಗಕ್ಕೆ ಕಾಲಿಟ್ಟರು. 1960ರಲ್ಲಿ ನಾಗೇಶ್ವರಮ್ಮ ಅವರನ್ನು ಮದುವೆ ಆದರು.

ತೆಲುಗಿನ ಹಿರಿಯ ನಟ ಕೈಕಾಲ ಸತ್ಯನಾರಾಯಣ​ ನಿಧನ; ರಾಜ್​ಕುಮಾರ್ ಸಿನಿಮಾದಲ್ಲಿ ನಟಿಸಿದ್ದ ಕಲಾವಿದ
ರಾಜ್​ಕುಮಾರ್-ಸತ್ಯನಾರಾಯಣ್
Follow us
TV9 Web
| Updated By: Digi Tech Desk

Updated on:Dec 23, 2022 | 9:53 AM

ತೆಲುಗಿನ ಹಿರಿಯ ನಟ ಕೈಕಾಲ ಸತ್ಯನಾರಾಯಣ (Kaikala Satyanarayana Death) ಅವರು ಇಂದು ಮುಂಜಾನೆ (ಡಿಸೆಂಬರ್ 23) ಹೈದರಾಬಾದ್​ನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಅವರು ಕಳೆದ ಕೆಲವು ತಿಂಗಳಿಂದ ಹಲವು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಚಿಕಿತ್ಸೆ ಫಲಕಾರಿ ಆಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಸತ್ಯನಾರಾಯಣ ಅವರ ನಿಧನ ಸುದ್ದಿ ಕೇಳಿ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. 1962ರಲ್ಲಿ ತೆರೆಗೆ ಬಂದ ರಾಜ್​ಕುಮಾರ್ ನಟನೆಯ ‘ಸ್ವರ್ಣಗೌರಿ’ ಚಿತ್ರದಲ್ಲಿ ಅವರು ಶಿವನ ಪಾತ್ರ ಮಾಡಿದ್ದರು ಎಂಬುದು ವಿಶೇಷ.

ಕೈಕಾಲ ಸತ್ಯನಾರಾಯಣ ಅವರು 1935ರ ಜುಲೈ 25ರಂದು ಆಂಧ್ರ ಪ್ರದೇಶದಲ್ಲಿ ಜನಿಸಿದರು. 1959ರಂದು ಅವರು ಚಿತ್ರರಂಗಕ್ಕೆ ಕಾಲಿಟ್ಟರು. 1960ರಲ್ಲಿ ನಾಗೇಶ್ವರಮ್ಮ ಅವರನ್ನು ಮದುವೆ ಆದರು. ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಈಗ ಸತ್ಯನಾರಾಯಣ ಅವರು ನಿಧನ ಹೊಂದಿರುವ ಸುದ್ದಿ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳಿಗೆ ಸಾಕಷ್ಟು ದುಃಖ ನೀಡಿದೆ.

ನಂದಮೂರಿ ಕಲ್ಯಾಣ್​ ರಾಮ್ ಅವರು ಸತ್ಯಾನಾರಾಯಣ್ ಅವರ ನಿಧನ ವಾರ್ತೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. ‘ಕೈಕಾಲ ಸತ್ಯನಾರಾಯಣ್ ಅವರು ನಿಧನ ಹೊಂದಿದ್ದಾರೆ ಎಂಬ ವಿಚಾರ ಹೇಳಲು ಬೇಸರ ಆಗುತ್ತಿದೆ. ಅವರು ಓರ್ವ ಅದ್ಭುತ ನಟ. ತೆಲುಗಿನಲ್ಲಿ ಹಲವು ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ’ ಎಂದು ನಂದಮೂರಿ ಕಲ್ಯಾಣ್​ ರಾಮ್ ಬರೆದುಕೊಂಡಿದ್ದಾರೆ.

ಸತ್ಯನಾರಾಯಣ ಅವರ ಸಿನಿ ಜರ್ನಿ

1959ರಲ್ಲಿ ತೆರೆಗೆ ಬಂದ ‘ಸಿಪಾಯಿ ಕೂತುರು’ ಚಿತ್ರದಲ್ಲಿ ಸತ್ಯನಾರಾಯಣ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಡಿಎಲ್​ ನಾರಾಯಣ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸತ್ಯನಾರಾಯಣ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ನಾರಾಯಣ ಅವರಿಗೆ ಸಲ್ಲುತ್ತದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಲೇ ಇಲ್ಲ. ಎನ್​ಟಿಆರ್ ಜತೆ ಹಲವು ಸಿನಿಮಾಗಳಲ್ಲಿ ಸತ್ಯನಾರಾಯಣ್ ನಟಿಸಿದ್ದಾರೆ. ಅವರು ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. 750ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಪ್ರಶಸ್ತಿಗಳನ್ನು ಕೂಡ ಅವರು ಗೆದ್ದಿದ್ದಾರೆ.

ಇದನ್ನೂ ಓದಿ: Gandasi Nagaraj Death: ಜಗ್ಗೇಶ್​ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್​ ನಿಧನ

2019ರಲ್ಲಿ ತೆರೆಗೆ ಬಂದ ಮಹೇಶ್ ಬಾಬು ನಟನೆಯ ‘ಮಹರ್ಷಿ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಸತ್ಯನಾರಾಯಣ್ ಅವರು ಕಾಣಿಸಿಕೊಂಡಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ಇದಾದ ಬಳಿಕ ಅವರು ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:37 am, Fri, 23 December 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ