ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಪ್ರಭಾಸ್ ಫ್ಯಾನ್ಸ್ ಜೊತೆ ಸಾಮಾನ್ಯರೂ ಸಿನಿಮಾನ ಮೆಚ್ಚಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಜನರು ಹೊಗಳುತ್ತಿದ್ದಾರೆ. ಈ ಸಿನಿಮಾ ಸೆಟ್ಟೇರಿ ಮೂರು ವರ್ಷ ಕಳೆದಿತ್ತು. ಈ ಚಿತ್ರದ ಜರ್ನಿ ಹೇಗಿತ್ತು ಎಂಬುದನ್ನು ಒಂದೇ ಒಂದು ಫೋಟೋ ಮೂಲಕ ನಿರ್ದೇಶಕ ನಾಗ್ ಅಶ್ವಿನ್ ಅವರು ವಿವರಿಸಿದ್ದಾರೆ.
ನಾಗ್ ಅಶ್ವಿನ್ ಅವರು ಕೆಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅವರು ಇದೇ ಮೊದಲ ಬಾರಿಗೆ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅದುವೇ ‘ಕಲ್ಕಿ 2898 ಎಡಿ’ ಸಿನಿಮಾ. ಈ ಚಿತ್ರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿರುವುದರಿಂದ ಸಹಜವಾಗಿಯೇ ಅವರಿಗೆ ಖುಷಿ ಆಗಿದೆ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ನಾಗ್ ಅಶ್ವಿನ್ ಅವರು ಹರಿದ ಚಪ್ಪಲಿ ಫೋಟೋ ಹಂಚಿಕೊಂಡಿದ್ದಾರೆ.
ಸ್ಲಿಪ್ಪರ್ ಫೋಟೋನ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ನಾಗ್ ಅಶ್ವಿನ್ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ಇದು ತುಂಬಾನೇ ದೀರ್ಘ ರಸ್ತೆ’ ಎಂದು ಬರೆದುಕೊಂಡಿದ್ದಾರೆ. ಈ ಚಪ್ಪಲಿ ಒಂದಷ್ಟು ಕಡೆಗಳಲ್ಲಿ ಹರಿದು ಹೋಗಿದೆ. ಒಂದಷ್ಟು ಭಾಗ ಕಿತ್ತೇ ಹೋಗಿದೆ. ಇದು ಸಿನಿಮಾಗಾಗಿ ನಾಗ್ ಅಶ್ವಿನ್ ಹಾಕಿರೋ ಶ್ರಮ ಅನ್ನೋದು ಗೊತ್ತಾಗುತ್ತದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಾಗ್ ಅಶ್ವಿನ್ ಅವರ ಈ ಚಪ್ಪಲಿ ಫೋಟೋ ವೈರಲ್ ಆಗುತ್ತಿದೆ. ಅನೇಕರು ನಾಗ್ ಅಶ್ವಿನ್ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಅವರು ಹಾಕಿದ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಅನೇಕರು ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಸಿನಿಮಾದ ಅತಿಥಿ ಪಾತ್ರಗಳಲ್ಲಿ ನಟಿಸಿರುವ ನಟರ ಪಟ್ಟಿ
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ ಮೊದಲಾದವರು ನಟಿಸಿದ್ದಾರೆ. ಮಹಾ ಭಾರತದಿಂದ ಆರಂಭ ಆಗುವ ಕಥೆ 2898 ಎಡಿವರೆಗೆ ಸಾಗುತ್ತದೆ. ಸೈನ್ಸ್ ಫಿಕ್ಷನ್ ಸ್ಟೈಲ್ನಲ್ಲಿ ಸಿನಿಮಾ ಮೂಡಿ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:24 pm, Thu, 27 June 24