Vyjayanthi Movies: ‘ಕಲ್ಕಿ’ ಸಿನಿಮಾ ನಿರ್ಮಾಪಕರಿಂದ ಸಿನಿಮಾ ಪ್ರೇಮಿಗಳಿಗೆ ಮನವಿ

ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ ಆಗಿದೆ. ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಈ ಸಿನಿಮಾ ಮೇಲೆ 650 ಕೋಟಿ ಬಜೆಟ್ ಹೂಡಿಕೆ ಮಾಡಿದೆ. ಸಿನಿಮಾ ಬಿಡುಗಡೆ ದಿನ ವೈಜಯಂತಿ ಮೂವೀಸ್, ಸಿನಿಮಾ ಪ್ರೇಮಿಗಳ ಬಳಿ ಮನವಿಯೊಂದನ್ನು ಮಾಡಿದೆ.

Vyjayanthi Movies: ‘ಕಲ್ಕಿ’ ಸಿನಿಮಾ ನಿರ್ಮಾಪಕರಿಂದ ಸಿನಿಮಾ ಪ್ರೇಮಿಗಳಿಗೆ ಮನವಿ
ವೈಜಯಂತಿ ಮೂವೀಸ್
Follow us
|

Updated on: Jun 27, 2024 | 3:55 PM

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಇಂದು (ಜೂನ್ 27) ಬಿಡುಗಡೆ ಆಗಿದೆ. ಸಿನಿಮಾಕ್ಕೆ ಎಲ್ಲೆಡೆಗಳಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಾಸ್ ಪ್ರೇಕ್ಷಕರು, ಕ್ಲಾಸ್ ಪ್ರೇಕ್ಷಕರು, ಕೌಟುಂಬಿಕ ಸಿನಿಮಾ ಪ್ರೇಮಿಗಳು, ಸಿನಿಮಾ ವಿಮರ್ಶಕರು ಎಲ್ಲರೂ ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳನ್ನೇ ವ್ಯಕ್ತಪಡಿಸಿದ್ದಾರೆ. ಸುಮಾರು 650 ಕೋಟಿ ಬಜೆಟ್ ಅನ್ನು ಈ ಸಿನಿಮಾದ ಮೇಲೆ ಹೂಡಲಾಗಿದ್ದು, ಸಿನಿಮಾ ಬಿಡುಗಡೆ ಆದ ಬಳಿಕ ಸಿನಿಮಾದ ನಿರ್ಮಾಪಕರು ಸಿನಿಮಾ ಪ್ರೇಮಿಗಳನ್ನುದ್ದೇಶಿಸಿ ಮನವಿಯೊಂದನ್ನು ಮಾಡಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾವನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡಿದ್ದು, ಟ್ವೀಟ್​ನಲ್ಲಿ ಸಂದೇಶವೊಂದನ್ನು ವೈಜಯಂತಿ ಮೂವೀಸ್ ಹಂಚಿಕೊಂಡಿದೆ. ‘‘ಕಲ್ಕಿ’ ಸಿನಿಮಾವು ನಮ್ಮ ನಾಲ್ಕು ವರ್ಷಗಳ ಸುಧೀರ್ಘ ಪಯಣ. ನಾಗ್ ಅಶ್ವಿನ್ ಮತ್ತು ಅವರ ತಂಡದ ಅವಿತರ ಶ್ರಮದ ಫಲ. ಈ ಸಿನಿಮಾವನ್ನು ವಿಶ್ವದರ್ಜೆಯ ಗುಣಮಟ್ಟದಲ್ಲಿ ನಿರ್ಮಿಸಲು ನಾವು ಮಾಡದ ಪ್ರಯತ್ನವಿಲ್ಲ, ಪಡದ ಶ್ರಮವಿಲ್ಲ. ಕಾಂಪ್ರಮೈಸ್ ಎಂಬ ಪದವನ್ನೇ ಬಳಸದೆ ನಾವು ಈ ಪ್ರಾಜೆಕ್ಟ್ ಮೇಲೆ ಕೆಲಸ ಮಾಡಿದ್ದೇವೆ. ರಕ್ತ-ಬೆವರು ಹರಿಸಿ ನಮ್ಮ ತಂಡ ಈ ಸಿನಿಮಾವನ್ನು ನಿಮ್ಮ ಮುಂದೆ ತಂದಿದೆ’ ಎಂದಿದ್ದಾರೆ ನಿರ್ಮಾಪಕ ಅಶ್ವಿನಿ ದತ್.

‘ಎಲ್ಲರೂ ದಯವಿಟ್ಟು ಸಿನಿಮಾವನ್ನು ಗೌರವಿಸೋಣ. ಸಿನಿಮಾ ಕಲೆಗೆ ಅದಕ್ಕೆ ಸಿಗಬೇಕಾದ ಗೌರವ ನೀಡೋಣ. ಸಿನಿಮಾ ನೋಡಿದವರು ದಯವಿಟ್ಟು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸುಳಿವುಗಳನ್ನು ಬಿಟ್ಟುಕೊಡಬೇಡಿ, ಕತೆಯನ್ನು ಹಂಚಿಕೊಳ್ಳಬೇಡಿ. ಮಿನಟ್-ಟು-ಮಿನಟ್ ಅಪ್​ಡೇಟ್​ಗಳನ್ನು ನೀಡಬೇಡಿ. ಅಥವಾ ಸಿನಿಮಾದ ಪೈರಸಿ ಮಾಡಿ ಸಿನಿಮಾ ನೋಡುವ ಕುತೂಹಲವನ್ನು ಹಾಳು ಮಾಡಬೇಡಿ. ಎಲ್ಲರೂ ಜೊತೆಗೂಡಿ ಸಿನಿಮಾದ ಕತೆಯನ್ನು ರಕ್ಷಿಸೋಣ, ಬಳಿಕ ಒಟ್ಟಿಗೆ ಅದರ ಯಶಸ್ಸನ್ನು ಸಂಭ್ರಮಿಸೋಣ’ ಎಂದಿದ್ದಾರೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಸಿನಿಮಾ ಕೇವಲ ಆರಂಭವಷ್ಟೆ, ಬರಲಿದೆ ಎರಡನೇ ಭಾಗ

‘ಕಲ್ಕಿ 2898 ಎಡಿ’ ಸಿನಿಮಾವನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡಿದೆ. ಈ ಸಿನಿಮಾದ ನಿರ್ಮಾಪಕ ಅಶ್ವಿನಿ ದತ್. ವೈಜಯಂತಿ ಮೂವೀಸ್ ತೆಲುಗು ಚಿತ್ರರಂಗದ ಹಳೆಯ ಸಿನಿಮಾ ನಿರ್ಮಾಣ ಸಂಸ್ಥೆ. 1975 ರಿಂದಲೂ ವೈಜಯಂತಿ ಮೂವೀಸ್ ಸಿನಿಮಾ ನಿರ್ಮಾಣ ಮಾಡುತ್ತಾ ಬರುತ್ತಿದೆ. ಈ ನಿರ್ಮಾಣ ಸಂಸ್ಥೆಯಿಂದ ಹೊರಬಂದಿರುವ ಬಹುತೇಕ ಸಿನಿಮಾಗಳು ಬ್ಲಾಕ್ ಬಸ್ಟರ್​ ಸಿನಿಮಾಗಳಾಗಿವೆ.

‘ಕಲ್ಕಿ’ ಸಿನಿಮಾ ಭಾರತದ ಈವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿದೆ. ಈ ಸಿನಿಮಾಕ್ಕೆ 650 ಕೋಟಿ ರೂಪಾಯಿಗಳನ್ನು ವೈಜಯಂತಿ ಮೂವೀಸ್ ವೆಚ್ಚ ಮಾಡಿದೆ. ಬರೋಬ್ಬರಿ ನಾಲ್ಕು ವರ್ಷ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ ಬಳಿಕ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್, ನಿರ್ಮಾಪಕ ಅಶ್ವಿನಿ ದತ್ ಅವರ ಅಳಿಯ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ