AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ 2898 ಎಡಿ’ ಸಿನಿಮಾ ಕೇವಲ ಆರಂಭವಷ್ಟೆ, ಬರಲಿದೆ ಎರಡನೇ ಭಾಗ

‘ಕಲ್ಕಿ 2898 ಎಡಿ’ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿರಲಿಲ್ಲ. ಆದರೆ ಈ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಈ ಕುರಿತು ನೀಡಿರುವ ಸುಳಿವುಗಳೇನು?

‘ಕಲ್ಕಿ 2898 ಎಡಿ’ ಸಿನಿಮಾ ಕೇವಲ ಆರಂಭವಷ್ಟೆ, ಬರಲಿದೆ ಎರಡನೇ ಭಾಗ
ಮಂಜುನಾಥ ಸಿ.
|

Updated on: Jun 27, 2024 | 2:40 PM

Share

ಪ್ರಭಾಸ್ ಸೇರಿದಂತೆ ಭಾರತದ ಕೆಲವು ದಿಗ್ಗಜ ಸ್ಟಾರ್ ನಟರು ನಟಿಸಿರುವ ಬಹುಕೋಟಿ ಬಜೆಟ್ ಸಿನಿಮಾ ‘ಕಲ್ಕಿ 2898 ಎಡಿ’ ಇಂದು (ಜೂನ್ 27) ಬಿಡುಗಡೆ ಆಗಿದ್ದು ಮೊದಲ ದಿನ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಮೊದಲ ಶೋ ನೋಡಿರುವ ಹಲವರು ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಆಗಲಿದೆ ಎಂದಿದ್ದಾರೆ. ಈ ಸಿನಿಮಾದ ಕತೆ ನಡೆಯುವುದು ಕಲಿಯುಗದ ಅಂತ್ಯದಲ್ಲಿ, ನಿರ್ದೇಶಕ ನಾಗ್ ಅಶ್ವಿನ್ ಹೇಳಿದ್ದಂತೆ 6000 ವರ್ಷಗಳ ನಡುವೆ ನಡೆವ ಕತೆ. ಹಲವು ಪಾತ್ರ, ಮಾಹಿತಿ ಒಳಗೊಂಡ ಕತೆ ಇದು. ಇದನ್ನು ಮೂರು ಗಂಟೆಯ ಸಿನಿಮಾದಲ್ಲಿ ಹೇಳಲು ಸಾಧ್ಯವಾ? ಖಂಡಿತ ಇಲ್ಲ. ಹಾಗಾಗಿಯೇ ಬರುತ್ತಿದೆ ‘ಕಲ್ಕಿ 2898 ಎಡಿ’ ಭಾಗ ಎರಡು.

ಹೌದು, ‘ಕಲ್ಕಿ 2898 ಎಡಿ’ ಸಿನಿಮಾ ಎರಡು ಭಾಗಗಳಲ್ಲಿ ಬರುತ್ತಿದೆ. ದೊಡ್ಡ ಬಜೆಟ್​ ಸಿನಿಮಾಗಳನ್ನು ಎರಡು ಭಾಗಗಳಲ್ಲಿ ತೆರೆಗೆ ತರುವುದು ಫ್ಯಾಷನ್ ಆಗಿದೆ. ಅದೇ ಫ್ಯಾಷನ್ ಅನ್ನು ‘ಕಲ್ಕಿ 2898 ಎಡಿ’ ಸಿನಿಮಾ ಸಹ ಅಳವಡಿಸಿಕೊಂಡಿದೆ. ‘ಕಲ್ಕಿ’ಯಂಥಹಾ ಹೆಚ್ಚು ಪಾತ್ರಗಳಿರುವ, ದೊಡ್ಡ ಸಂದೇಶವಿರುವ, ಪೌರಾಣಿಕ ಕತೆ, ಕಾಲ್ಪನಿಕ ಕತೆಗಳ ಸಂಯೋಗವಿರುವ ಕತೆಯನ್ನು ಎರಡು ಭಾಗಗಳಲ್ಲಿ ಹೇಳುವುದೇ ಸೂಕ್ತವೆನಿಸಿದ ಕಾರಣ ನಾಗ್ ಅಶ್ವಿನ್ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಚಿತ್ರಕ್ಕೆ ಹಾಕಿದ ಶ್ರಮ ತೋರಿಸಲು ಹರಿದ ಚಪ್ಪಲಿ ಫೋಟೋ ಹಂಚಿಕೊಂಡ ನಿರ್ದೇಶಕ  

ಸಿನಿಮಾದ ಅಂತ್ಯದಲ್ಲಿ ಈ ಬಗ್ಗೆ ಸ್ಪಷ್ಟನೆ ಸೂಚನೆ ನೀಡಲಾಗಿದೆ. ಚಿತ್ರತಂಡ ಈ ವರೆಗೆ ‘ಕಲ್ಕಿ’ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂದು ಹೇಳಿಕೊಂಡಿರಲಿಲ್ಲ. ಆದರೆ ಸಿನಿಮಾ ನೋಡಿದವರಿಗೆ ಇದು ಖಾತ್ರಿಯಾಗಿದೆ. ಏಕೆಂದರೆ ಸಿನಿಮಾದಲ್ಲಿ ನಾಯಕಿಯನ್ನು ಕಾಪಾಡುವ ಜವಾಬ್ದಾರಿ ಅಮಿತಾಬ್ ಬಚ್ಚನ್ ಅವರದ್ದಾಗಿರುತ್ತದೆ, ಅಮಿತಾಬ್ ಬಚ್ಚನ್ ಪಾತ್ರವನ್ನು ಪ್ರಭಾಸ್ ಪಾತ್ರ ತಡೆಯುತ್ತಿರುತ್ತದೆ. ಅಂತ್ಯದಲ್ಲಿ ಪ್ರಭಾಸ್​ ಪಾತ್ರಕ್ಕೆ ಹಳೆಯ ನೆನಪುಗಳು ಬರುತ್ತವೆ ಆದರೆ ನಾಯಕಿಯನ್ನು ಆಕೆಯ ಗುರಿಗೆ ತಲುಪಿಸುವುದಿಲ್ಲ. ಬದಲಿಗೆ ಹೊತ್ತುಕೊಂಡು ಹೋಗಲಾಗುತ್ತದೆ.

ಮಾತ್ರವಲ್ಲದೆ, ಸಿನಿಮಾದ ವಿಲನ್ ಯಾಸ್ಕಿನ್​ನ ಅಂತ್ಯ ಸಹ ಇನ್ನೂ ಆಗಿಲ್ಲ. ಈ ಭಾಗದಲ್ಲಿ ಯಾಸ್ಕಿನ್​ನ ಕಮಾಂಡರ್ ಮಾನಸ್ ಅನ್ನು ಮಾತ್ರವೇ ಪ್ರಭಾಸ್ ಪಾತ್ರ ಕೊಂದಿದೆ. ಯಾಸ್ಕಿನ್ ಹಾಗೂ ಅವನ ದೊಡ್ಡ ಸೈನ್ಯ ಇನ್ನೂ ಜೀವಂತವಾಗಿದೆ. ಅಲ್ಲದೆ ವಯಸ್ಸಾಗಿ ಸಾಯುವಂತಾಗಿದ್ದ ವಿಲನ್ ಯಾಸ್ಕಿನ್​ಗೆ ಬಲ ಬಂದಿದೆ. ಆತ ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದಾನೆ. ಹಾಗಾಗಿ ಮುಂದಿನ ಭಾಗದಲ್ಲಿ ಯಾಸ್ಕಿನ್ ಹಾಗೂ ಅಶ್ವತ್ಥಾಮ ಹಾಗೂ ಪ್ರಭಾಸ್ ನಡುವೆ ಯುದ್ಧ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ