AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಲ್ಕಿ 2898 ಎಡಿ’ ಸಿನಿಮಾದ ಅತಿಥಿ ಪಾತ್ರಗಳಲ್ಲಿ ನಟಿಸಿರುವ ನಟರ ಪಟ್ಟಿ

ಕಲ್ಕಿ 2898 ಎಡಿ ಸಿನಿಮಾದಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾಣಿ ಅಂಥಹಾ ಸ್ಟಾರ್ ನಟರು ನಟಿಸಿದ್ದಾರೆ. ಮಾತ್ರವಲ್ಲ ಈ ಸಿನಿಮಾದ ಅತಿಥಿ ಪಾತ್ರಗಳಲ್ಲಿ ಹಲವು ಸ್ಟಾರ್ ನಟ-ನಟಿಯರು ಕಾಣಿಸಿಕೊಂಡಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾದ ಅತಿಥಿ ಪಾತ್ರಗಳಲ್ಲಿ ನಟಿಸಿರುವ ನಟರ ಪಟ್ಟಿ
ಕಲ್ಕಿ 2898 ಎಡಿ
ಮಂಜುನಾಥ ಸಿ.
|

Updated on: Jun 27, 2024 | 1:20 PM

Share

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಸಿನಿಮಾ ಘೋಷಣೆಯಾದಾಗಲೇ ಈ ಸಿನಿಮಾದ ತಾರಾಗಣದಿಂದ ಭಾರಿ ಕುತೂಹಲ ಕೆರಳಿಸಿತ್ತು. ಸಿನಿಮಾವನ್ನು ಮೊದಲು ಘೋಷಿಸಿದಾಗ ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಅವರುಗಳು ಸಿನಿಮಾದ ಭಾಗವಾಗಿದ್ದರು. ಅದಾದ ಬಳಿಕ ಈ ತಂಡಕ್ಕೆ ದಿಶಾ ಪಟಾನಿ ಹಾಗೂ ಕಮಲ್ ಹಾಸನ್ ಸಹ ಸೆರಿಕೊಂಡರು. ಇಷ್ಟು ದೊಡ್ಡ ಸ್ಟಾರ್​ಗಳು ಒಂದೇ ಸಿನಿಮಾದಲ್ಲಿ ನಟಿಸಿದ ಇನ್ನೊಂದು ಸಿನಿಮಾ ಇಲ್ಲ ಎಂದು ಅಭಿಮಾನಿಗಳು ಥ್ರಿಲ್ ಆಗಿದ್ದರು. ಇದೀಗ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ನಟಿಸಿರುವ ಸ್ಟಾರ್-ನಟಿಯರನ್ನು ಅಭಿಮಾನಿಗಳು ಇನ್ನಷ್ಟು ಥ್ರಿಲ್ ಆಗಿದ್ದಾರೆ. ಅತಿಥಿ ಪಾತ್ರಗಳಲ್ಲಿ ನಟಿಸಿರುವ ಸ್ಟಾರ್ ಗಳ ಪಟ್ಟಿ ದೊಡ್ಡದಾಗಿಯೇ ಇದೆ.

‘ಕಲ್ಕಿ’ ಸಿನಿಮಾ ಪ್ರಾರಂಭವಾದಗಲೇ ಕಾಣಿಸಿಕೊಳ್ಳುವುದು ನಟಿ ಮೃಣಾಲ್ ಠಾಕೂರ್, ಅವರೊಟ್ಟಿಗೆ ಜೈರಾಮ್ ಸಹ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ಕಾಣಿಸಿಕೊಂಡು ಬೇಗನೆ ಕಣ್ಮರೆಯೂ ಆಗಿಬಿಡುತ್ತಾರೆ. ಅದಾದ ಬಳಿಕ ಪ್ರೇಕ್ಷಕರಿಗೆ ಶಾಕ್ ನೀಡುವುದು ರಾಮ್ ಗೋಪಾಲ್ ವರ್ಮಾ ಎಂಟ್ರಿ. ಹೌದು, ತಮ್ಮ ಸಿನಿಮಾಗಳಲ್ಲಿ ವರ್ಮಾ ಕಾಣಿಸಿಕೊಳ್ಳುವುದು ಬಿಟ್ಟರೆ ಪರರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ‘ಕಲ್ಕಿ’ ಸಿನಿಮಾದಲ್ಲಿ ವರ್ಮಾ ಇದ್ದಾರೆ. ನಾಯಕ ಪ್ರಭಾಸ್​ಗೆ ಒಂದು ಅಪರೂಪದ ವಸ್ತು ಮಾರುತ್ತಾರೆ.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಚಿತ್ರದಿಂದ ಅಮಿತಾಭ್ ಬಚ್ಚನ್ ವೃತ್ತಿ ಜೀವನಕ್ಕೆ ಸಿಗಲಿದೆ ಮೈಲೇಜ್?

ಅದಾದ ಬಳಿಕ ಎಂಟ್ರಿ ಕೊಡುವುದು ದುಲ್ಕರ್ ಸಲ್ಮಾನ್. ಒಂದು ವಿಶೇಷವಾದ ಪಾತ್ರದಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳುತ್ತಾರೆ. ಅವರ ಎಂಟ್ರಿಗೆ ಜನ ಚಪ್ಪಾಳೆ ಹೊಡೆದರೆ ಎಕ್ಸಿಟ್​ಗೆ ಭಾವುಕರಾಗುತ್ತಾರೆ. ಅದಾದ ಬಳಿಕ ಕಾಣಿಸಿಕೊಳ್ಳುವುದು ಟಾಲಿವುಡ್​ನ ಹಾಸ್ಯ ಚಕ್ರವರ್ತಿ ಬ್ರಹ್ಮಾನಂದಂ. ಕೆಲವೇ ದೃಶ್ಯಗಳಲ್ಲಿ ಬ್ರಹ್ಮಾನಂದಂ ಕಂಡು ಕಣ್ಮರೆ ಆಗುತ್ತಾರೆ. ಅದಾದ ಬಳಿಕ ಎಂಟ್ರಿ ಕೊಡುವುದು ಪ್ರಭಾಸ್​ರ ಡಾರ್ಲಿಂಗ್ ರಾಜಮೌಳಿ. ‘ಬಾಹುಬಲಿ’ ನಿರ್ದೇಶಕ ರಾಜಮೌಳಿಯ ಎಂಟ್ರಿ ಸಖತ್ ಫನ್ನಿ ಆಗಿದೆ. ಪ್ರಭಾಸ್ ಹಾಗೂ ರಾಜಮೌಳಿ ನಡುವಿನ ಸಂಭಾಷಣೆಯೂ ಸಖತ್ ಆಗಿದೆ ಮಿಸ್ ಮಾಡಿಕೊಳ್ಳುವಂತಿಲ್ಲ.

ಅಂದಹಾಗೆ ಈ ಸಿನಿಮಾದಲ್ಲಿ ಮಲಯಾಳಂ ಚೆಲುವೆ ಅನ್ನಾ ಬೆನ್ ಸಹ ನಟಿಸಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ‘ಕುಂಬಳಂಗಿ ನೈಟ್ಸ್’, ‘ಹೆಲನ್’, ‘ಕಪ್ಪೆಲ’ಗಳಲ್ಲಿ ನಟಿಸಿರುವ ಅನ್ನಾ ಬೆನ್ ಈ ಸಿನಿಮಾದಲ್ಲಿ ಕೈರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಫೈಟ್ ದೃಶ್ಯದಲ್ಲಿ ಮಾತ್ರವೇ ಅನ್ನಾ ಬಂದು ಬಳಿಕ ಕಣ್ಮರೆ ಆಗುತ್ತಾರೆ.

ಸಿನಿಮಾದಲ್ಲಿ ಅದ್ಧೂರಿಯಾದ ಅತಿಥಿ ಪಾತ್ರವೆಂದರೆ ಅದು ವಿಜಯ್ ದೇವರಕೊಂಡ ಅವರದ್ದು. ಅವರ ಎಂಟ್ರಿಯನ್ನು ಅತ್ಯದ್ಭುತವಾಗಿ ತೆರೆಯ ಮೇಲೆ ನಿರ್ದೇಶಕ ನಾಗ್ ಅಶ್ವಿನ್ ತೋರಿಸಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ, ಪ್ರಭಾಸ್ ವಿರುದ್ಧ ಫೈಟ್ ಮಾಡುತ್ತಾರೆ. ಸಿನಿಮಾದಲ್ಲಿ ಕೀರ್ತಿ ಸುರೇಶ್ ಇಲ್ಲ ಆದರೆ ಅವರ ಧ್ವನಿ ಇದೆ. ಪ್ರಭಾಸ್ ಆಪ್ತ ಬುಜ್ಜಿಗೆ ಕೀರ್ತಿ ಸುರೇಶ್ ಧ್ವನಿ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ