ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಚುನಾವಣಾ ಕಾರಣದಿಂದ ಈ ಸಿನಿಮಾದ ರಿಲೀಸ್ ದಿನಾಂಕ್ ಜೂನ್ 27ಕ್ಕೆ ಮುಂದೂಡಲ್ಪಟ್ಟಿದೆ. ಈ ಮಧ್ಯೆ ಚಿತ್ರದ ನಿರ್ಮಾಪಕ ಮಾಡಿರೋ ಟ್ವೀಟ್ ಒಂದು ಸಖತ್ ವೈರಲ್ ಆಗಿದೆ. ‘ಕಲ್ಕಿ 2898 ಎಡಿ’ ಚಿತ್ರವನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿರುವ ಅಶ್ವಿನಿ ದತ್ ಅವರು ನಾರಾ ಚಂದ್ರಬಾಬು ನಾಯ್ಡು ಅವರ ತೆಲಗು ದೇಶಂ ಪಾರ್ಟಿಯನ್ನು ಬೆಂಬಲಿಸಿದ್ದಾರೆ. ಒಂದೊಮ್ಮೆ ವೈಎಸ್ ಜಗನ್ ಅವರ ವೈಎಸ್ಆರ್ಸಿ ಪಕ್ಷ ವಿಜಯ ಸಾಧಿಸಿದರೆ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ.
ಸಿನಿಮಾ ರಿಲೀಸ್ ಸಂದರ್ಭದಲ್ಲಿ ನಿರ್ಮಾಪಕರು ಯಾವುದೇ ವಿವಾದ ಮಾಡಿಕೊಳ್ಳಲು ಆಸಕ್ತಿ ತೋರಿಸುವುದಿಲ್ಲ. ಅದರಲ್ಲೂ ದೊಡ್ಡ ಬಜೆಟ್ ಸಿನಿಮಾ ಎಂದಾಗ ನಿರ್ಮಾಪಕರು ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ಆದರೆ, ಅಶ್ವಿನಿ ದತ್ ಅವರು ಈಗ ಓಪನ್ ಸ್ಟೇಟ್ಮೆಂಟ್ ನೀಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ತೆಲುಗು ನಾಡಿನಲ್ಲಿ ರಾಜಕೀಯ ಹೈಡ್ರಾಮಾಗಳು ನಡೆಯೋದು ತುಂಬಾನೇ ಕಾಮನ್. ಒಂದೊಮ್ಮೆ ಟಿಡಿಪಿ ಸೋತು ವೈಎಸ್ಆರ್ಸಿ ಗೆದ್ದರೆ ಸಿನಿಮಾಗೆ ಸಮಸ್ಯೆ ಆಗಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಈ ರೀತಿಯ ಸ್ಟೇಟ್ಮೆಂಟ್ಗಳ ಅಗತ್ಯವಿತ್ತೇ ಎನ್ನುವ ಪ್ರಶ್ನೆಯನ್ನು ಕೆಲವರು ಕೇಳಿದ್ದಾರೆ.
Vote for a better tomorrow. #RepatiKosam @ncbn @JaiTDP pic.twitter.com/xV1OXp9SfH
— Chalasani Aswini Dutt (@AshwiniDuttCh) May 10, 2024
‘ನಾರಾ ಚಂದ್ರಬಾಬು ನಾಯ್ಡು ಅವರ ಗೆಲುವು, ನಾಳಿನ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ನಾಳಿನ ಯುವಕರ ಉದ್ಯೋಗಕ್ಕಾಗಿ, ನಾಳಿನ ರಾಜ್ಯದ ಅಭಿವೃದ್ಧಿಗಾಗಿ, ನಮ್ಮ ತೆಲುಗು ಜನರ ಸ್ವಾಭಿಮಾನಕ್ಕಾಗಿ, ನಮ್ಮ ತೆಲುಗು ದೇಶದ ಪುನರುಜ್ಜೀವನಕ್ಕಾಗಿ’ ಎಂದಿದ್ದಾರೆ ಅಶ್ವಿನ್ ದತ್.
ಇದನ್ನೂ ಓದಿ: ‘ಕಲ್ಕಿ’ ಸಿನಿಮಾ ಕರ್ನಾಟಕ ವಿತರಣೆ ಹಕ್ಕು ಖರೀದಿಸಿದ ನಿರ್ಮಾಣ ಸಂಸ್ಥೆ
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮೇ 9ರಂದು ‘ಕಲ್ಕಿ 2898 ಎಡಿ’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ, ನಿರ್ಮಾಪಕರು ರಿಸ್ಕ್ ತೆಗೆದುಕೊಂಡಿಲ್ಲ. ಆಂಧ್ರ ಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಎರಡೂ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಬಾಕ್ಸ್ ಆಫೀಸ್ನಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಸಿನಿಮಾ ರಿಲೀಸ್ ದಿನಾಂಕ ಜೂನ್ 27ಕ್ಕೆ ಮುಂದಕ್ಕೆ ಹೋಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:15 pm, Sat, 11 May 24