ಬೇರೆ ಬೇರೆ ಪಕ್ಷದ ರಾಜಕೀಯ ನಾಯಕರ ಪರ ನಿಂತ ಅಲ್ಲು ಅರ್ಜುನ್-ರಾಮ್ ಚರಣ್

ನಂದ್ಯಾಳ್​ನಲ್ಲಿರುವ ಶಿಲ್ಪಾ ರವೀಂದ್ರ ಕಿಶೋರ್ ರೆಡ್ಡಿ ಅವರ ನಿವಾಸಕ್ಕೆ ಇಂದು ಅಲ್ಲು ಅರ್ಜುನ್ ಅವರು ಭೇಟಿ ಮಾಡಿದ್ದಾರೆ. ಈ ಭೇಟಿ ಸಾಕಷ್ಟು ಅಚ್ಚರಿ ಮೂಡಿಸಿದೆ. ಇದನ್ನು ತಿಳಿಯುತ್ತಿದ್ದಂತೆ ಫ್ಯಾನ್ಸ್ ಸಾವಿರಾರು ಸಂಖ್ಯೆಯಲ್ಲಿ ನೆರೆದರು. ಆ ಬಳಿಕ ಅಲ್ಲು ಅರ್ಜುನ್ ಅವರು ಫ್ಯಾನ್ಸ್​ನತ್ತ ಕೈ ಬೀಸಿದ್ದಾರೆ.

ಬೇರೆ ಬೇರೆ ಪಕ್ಷದ ರಾಜಕೀಯ ನಾಯಕರ ಪರ ನಿಂತ ಅಲ್ಲು ಅರ್ಜುನ್-ರಾಮ್ ಚರಣ್
ರಾಜಕೀಯ ನಾಯಕರ ಪರ ನಿಂತ ಅಲ್ಲು ಅರ್ಜುನ್-ರಾಮ್ ಚರಣ್
Follow us
ರಾಜೇಶ್ ದುಗ್ಗುಮನೆ
|

Updated on: May 11, 2024 | 4:13 PM

ನಟ ಅಲ್ಲು ಅರ್ಜುನ್ (Allu Arjun) ಅವರು ರಾಜಕೀಯದಿಂದ ಸದಾ ದೂರವೇ ಇದ್ದಾರೆ. ಅವರು ರಾಜಕೀಯ ಪ್ರಚಾರಕ್ಕೆ ಮುಂದಾಗುವುದಿಲ್ಲ. ಇಂದು ಅಲ್ಲು ಅರ್ಜುನ್ ಹಾಗೂ ಅವರ ಪತ್ನಿ ಸ್ನೇಹಾ ರೆಡ್ಡಿ ವೈಎಸ್​​ಆರ್​ಸಿಪಿ ಪಕ್ಷದ ನಂದ್ಯಾಳ್ ಕ್ಷೇತ್ರದ ಶಿಲ್ಪಾ ರವಿಂದ್ರ ಕಿಶೋರ್ ರೆಡ್ಡಿ ಅವರ ಭೇಟಿ ಮಾಡಿದ್ದಾರೆ. ಮತ್ತೊಂದು ಕಡೆ ರಾಮ್ ಚರಣ್ ಅವರು ಪವನ್ ಕಲ್ಯಾಣ್ ಪರ ಪ್ರಚಾರ ಮಾಡಿದ್ದಾರೆ.

ನಂದ್ಯಾಳ್​ನಲ್ಲಿರುವ ಶಿಲ್ಪಾ ರವೀಂದ್ರ ಕಿಶೋರ್ ರೆಡ್ಡಿ ಅವರ ನಿವಾಸಕ್ಕೆ ಇಂದು ಅಲ್ಲು ಅರ್ಜುನ್ ಅವರು ಭೇಟಿ ಮಾಡಿದ್ದಾರೆ. ಈ ಭೇಟಿ ಸಾಕಷ್ಟು ಅಚ್ಚರಿ ಮೂಡಿಸಿದೆ. ಇದನ್ನು ತಿಳಿಯುತ್ತಿದ್ದಂತೆ ಫ್ಯಾನ್ಸ್ ಸಾವಿರಾರು ಸಂಖ್ಯೆಯಲ್ಲಿ ನೆರೆದರು. ಆ ಬಳಿಕ ಅಲ್ಲು ಅರ್ಜುನ್ ಅವರು ಫ್ಯಾನ್ಸ್​ನತ್ತ ಕೈ ಬೀಸಿದ್ದಾರೆ. ಈ ಮೂಲಕ ಅವರು ಪರೋಕ್ಷವಾಗಿ ವೈಎಸ್​​ಆರ್​ಸಿಪಿ ಪರ ಪ್ರಚಾರ ಮಾಡಿದಂತೆ ಆಗಿದೆ.

ರಾಮ್ ಚರಣ್ ಪ್ರಚಾರ

ರಾಮ್ ಚರಣ್ ಅವರ ಚಿಕ್ಕಪ್ಪ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಿತಾಪುರಂ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಅವರ ಪರವಾಗಿ ರಾಮ್ ಚರಣ್ ಅವರು ಪ್ರಚಾರ ಮಾಡಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಮುನಿಸು ಮರೆತು ಪವನ್ ಕಲ್ಯಾಣ್​ಗೆ ಬೆಂಬಲ ಸೂಚಿಸಿದ ಅಲ್ಲು ಅರ್ಜುನ್

ರಾಜಮಂಡ್ರಿ ವಿಮಾನ ನಿಲ್ದಾಣಕ್ಕೆ ರಾಮ್ ಚರಣ್ ಆಗಮಿಸಿದರು. ರಾಮ್ ಚರಣ್ ಭೇಟಿ ವಿಚಾರ ತಿಳಿದು ಸಾವಿರಾರು ಅಭಿಮಾನಿಗಳು ರಾಜಮಂಡ್ರಿ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದರು. ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ಅಭಿಮಾನಿಗಳ ಗುಂಪನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ಸ್ವಲ್ಪ ಸಮಯ ಹಿಡಿಯಿತು. ಕುಕ್ಕುಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಪ್ರಚಾರ ನಡೆಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.