AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಬೇಕಿತ್ತಾ?’; ‘ಕಲ್ಕಿ 2898 ಎಡಿ’ ನಿರ್ಮಾಪಕನ ಹೇಳಿಕೆಯಿಂದ ಚಿಂತೆಗೆ ಒಳಗಾದ ಪ್ರಭಾಸ್ ಫ್ಯಾನ್ಸ್

ಸಿನಿಮಾ ರಿಲೀಸ್ ಸಂದರ್ಭದಲ್ಲಿ ನಿರ್ಮಾಪಕರು ಯಾವುದೇ ವಿವಾದ ಮಾಡಿಕೊಳ್ಳಲು ಆಸಕ್ತಿ ತೋರಿಸುವುದಿಲ್ಲ. ಅದರಲ್ಲೂ ದೊಡ್ಡ ಬಜೆಟ್ ಸಿನಿಮಾ ಎಂದಾಗ ನಿರ್ಮಾಪಕರು ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ಆದರೆ, ಅಶ್ವಿನಿ ದತ್ ಅವರು ಈಗ ಓಪನ್ ಸ್ಟೇಟ್​ಮೆಂಟ್ ನೀಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

‘ಇದು ಬೇಕಿತ್ತಾ?’; ‘ಕಲ್ಕಿ 2898 ಎಡಿ’ ನಿರ್ಮಾಪಕನ ಹೇಳಿಕೆಯಿಂದ ಚಿಂತೆಗೆ ಒಳಗಾದ ಪ್ರಭಾಸ್ ಫ್ಯಾನ್ಸ್
ಕಲ್ಕಿ
ರಾಜೇಶ್ ದುಗ್ಗುಮನೆ
|

Updated on:May 11, 2024 | 3:17 PM

Share

ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಚುನಾವಣಾ ಕಾರಣದಿಂದ ಈ ಸಿನಿಮಾದ ರಿಲೀಸ್ ದಿನಾಂಕ್ ಜೂನ್ 27ಕ್ಕೆ ಮುಂದೂಡಲ್ಪಟ್ಟಿದೆ. ಈ ಮಧ್ಯೆ ಚಿತ್ರದ ನಿರ್ಮಾಪಕ ಮಾಡಿರೋ ಟ್ವೀಟ್ ಒಂದು ಸಖತ್ ವೈರಲ್ ಆಗಿದೆ. ‘ಕಲ್ಕಿ 2898 ಎಡಿ’ ಚಿತ್ರವನ್ನು ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಮಾಡುತ್ತಿರುವ ಅಶ್ವಿನಿ ದತ್ ಅವರು ನಾರಾ ಚಂದ್ರಬಾಬು ನಾಯ್ಡು ಅವರ ತೆಲಗು ದೇಶಂ ಪಾರ್ಟಿಯನ್ನು ಬೆಂಬಲಿಸಿದ್ದಾರೆ. ಒಂದೊಮ್ಮೆ ವೈಎಸ್​ ಜಗನ್ ಅವರ ವೈಎಸ್​ಆರ್​ಸಿ ಪಕ್ಷ ವಿಜಯ ಸಾಧಿಸಿದರೆ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ.

ಸಿನಿಮಾ ರಿಲೀಸ್ ಸಂದರ್ಭದಲ್ಲಿ ನಿರ್ಮಾಪಕರು ಯಾವುದೇ ವಿವಾದ ಮಾಡಿಕೊಳ್ಳಲು ಆಸಕ್ತಿ ತೋರಿಸುವುದಿಲ್ಲ. ಅದರಲ್ಲೂ ದೊಡ್ಡ ಬಜೆಟ್ ಸಿನಿಮಾ ಎಂದಾಗ ನಿರ್ಮಾಪಕರು ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ಆದರೆ, ಅಶ್ವಿನಿ ದತ್ ಅವರು ಈಗ ಓಪನ್ ಸ್ಟೇಟ್​ಮೆಂಟ್ ನೀಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ತೆಲುಗು ನಾಡಿನಲ್ಲಿ ರಾಜಕೀಯ ಹೈಡ್ರಾಮಾಗಳು ನಡೆಯೋದು ತುಂಬಾನೇ ಕಾಮನ್. ಒಂದೊಮ್ಮೆ ಟಿಡಿಪಿ ಸೋತು ವೈಎಸ್​ಆರ್​ಸಿ ಗೆದ್ದರೆ ಸಿನಿಮಾಗೆ ಸಮಸ್ಯೆ ಆಗಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಈ ರೀತಿಯ ಸ್ಟೇಟ್​ಮೆಂಟ್​ಗಳ ಅಗತ್ಯವಿತ್ತೇ ಎನ್ನುವ ಪ್ರಶ್ನೆಯನ್ನು ಕೆಲವರು ಕೇಳಿದ್ದಾರೆ.

ಟ್ವೀಟ್​ನಲ್ಲಿ ಏನಿದೆ?

‘ನಾರಾ ಚಂದ್ರಬಾಬು ನಾಯ್ಡು ಅವರ ಗೆಲುವು, ನಾಳಿನ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ನಾಳಿನ ಯುವಕರ ಉದ್ಯೋಗಕ್ಕಾಗಿ, ನಾಳಿನ ರಾಜ್ಯದ ಅಭಿವೃದ್ಧಿಗಾಗಿ, ನಮ್ಮ ತೆಲುಗು ಜನರ ಸ್ವಾಭಿಮಾನಕ್ಕಾಗಿ, ನಮ್ಮ ತೆಲುಗು ದೇಶದ ಪುನರುಜ್ಜೀವನಕ್ಕಾಗಿ’ ಎಂದಿದ್ದಾರೆ ಅಶ್ವಿನ್ ದತ್.

ಇದನ್ನೂ ಓದಿ: ‘ಕಲ್ಕಿ’ ಸಿನಿಮಾ ಕರ್ನಾಟಕ ವಿತರಣೆ ಹಕ್ಕು ಖರೀದಿಸಿದ ನಿರ್ಮಾಣ ಸಂಸ್ಥೆ

ರಿಲೀಸ್ ದಿನಾಂಕ ಮುಂದಕ್ಕೆ..

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮೇ 9ರಂದು ‘ಕಲ್ಕಿ 2898 ಎಡಿ’ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ, ನಿರ್ಮಾಪಕರು ರಿಸ್ಕ್ ತೆಗೆದುಕೊಂಡಿಲ್ಲ. ಆಂಧ್ರ ಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಎರಡೂ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಬಾಕ್ಸ್ ಆಫೀಸ್​ನಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಸಿನಿಮಾ ರಿಲೀಸ್ ದಿನಾಂಕ ಜೂನ್ 27ಕ್ಕೆ ಮುಂದಕ್ಕೆ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:15 pm, Sat, 11 May 24

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್