ಹಾಕಿದ ಹಣ ತೆಗೆಯಲು ಹಳೆಯ ತಂತ್ರದ ಮೊರೆ ಹೋದ ‘ಕಲ್ಕಿ 2898 ಎಡಿ’ ಸಿನಿಮಾ ತಂಡ

|

Updated on: May 17, 2024 | 3:10 PM

ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಪ್ರಭಾಸ್ ತಂಡ ಪ್ರಚಾರ ನಡೆಸಲಿದೆ. ಇಡೀ ತಂಡದ ಜೊತೆಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ. ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಮೊದಲ ಪ್ರಮೋಷನಲ್ ಕಾರ್ಯಕ್ರಮ ನಡೆಯಲಿದೆ

ಹಾಕಿದ ಹಣ ತೆಗೆಯಲು ಹಳೆಯ ತಂತ್ರದ ಮೊರೆ ಹೋದ ‘ಕಲ್ಕಿ 2898 ಎಡಿ’ ಸಿನಿಮಾ ತಂಡ
ಕಲ್ಕಿ
Follow us on

‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಪ್ರಭಾಸ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಸೈನ್ಸ್ ಫಿಕ್ಷನ್ ಥ್ರಿಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಜೂನ್ 27ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. ಚಿತ್ರ ಹೆಚ್ಚು ಜನರನ್ನು ತಲುಪಬೇಕು ಎಂದರೆ ಪ್ರಮೋಷನ್ ತುಂಬಾನೇ ಮುಖ್ಯ. ಹೀಗಾಗಿ ಪ್ರಭಾಸ್ ತಂಡ ‘ಬಾಹುಬಲಿ’ ಪ್ರಮೋಷನ್ ತಂತ್ರವನ್ನು ಅನುಸರಿಸುತ್ತಿದೆ.

ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಪ್ರಭಾಸ್ ತಂಡ ಪ್ರಚಾರ ನಡೆಸಲಿದೆ. ಇಡೀ ತಂಡದ ಜೊತೆಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ. ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಮೊದಲ ಪ್ರಮೋಷನಲ್ ಕಾರ್ಯಕ್ರಮ ನಡೆಯಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರೀಚ್ ಆಗುವಂತೆ ತಂಡ ನೋಡಿಕೊಳ್ಳಲಿದೆ.

‘ಕಲ್ಕಿ 2898 ಎಡಿ’ ಚಿತ್ರದ ಬಜೆಟ್ 500-600 ಕೋಟಿ ರೂಪಾಯಿ ಇದೆ. ಇಷ್ಟು ದೊಡ್ಡ ಮಟ್ಟದಲ್ಲಿ ಹಣ ಮರಳಿಬರಬೇಕು ಎಂದರೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಲೇಬೇಕು. ಈ ಕಾರಣದಿಂದಲೇ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲು ತಂಡ ಮುಂದಾಗಿದೆ. ಈ ಮೂಲಕ ಹೆಚ್ಚು ಜನರನ್ನು ತಲುಪಲು ತಂಡ ನಿರ್ಧರಿಸಿದೆ.

ಪ್ರಭಾಸ್ ಅವರ ಜೊತೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಅವರುಗಳು ಕೂಡ ಪ್ರಮೋಷನ್​ ಕಾರ್ಯಕ್ರಮದಲ್ಲಿ ಭಾಗಿ ಆಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದೀಪಿಕಾ ಪಡುಕೋಣೆ ಈಗ ಪ್ರೆಗ್ನೆಂಟ್. ಹೀಗಾಗಿ ಮುಂಬೈನಲ್ಲಿ ಮಾತ್ರ ಅವರು ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ: ‘ಇದು ಬೇಕಿತ್ತಾ?’; ‘ಕಲ್ಕಿ 2898 ಎಡಿ’ ನಿರ್ಮಾಪಕನ ಹೇಳಿಕೆಯಿಂದ ಚಿಂತೆಗೆ ಒಳಗಾದ ಪ್ರಭಾಸ್ ಫ್ಯಾನ್ಸ್

‘ಕಲ್ಕಿ 2898 ಎಡಿ’ ಸಿನಿಮಾಗೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹಂಚಿಕೆದಾರರು ಇದ್ದಾರೆ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಚಿತ್ರಕ್ಕೆ ದೊಡ್ಡ ಮಟ್ಟದ ಹೈಪ್ ಸಿಕ್ಕರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ನೋಡುತ್ತಾರೆ. ‘ಬಾಹುಬಲಿ’ಗೆ ಇದೇ ರೀತಿಯ ತಂತ್ರವನ್ನು ರಾಜಮೌಳಿ ಬಳಕೆ ಮಾಡಿದ್ದರು. ‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಹೆಚ್ಚಿನ ವಿಚಾರ ತಿಳಿದುಕೊಳ್ಳೋ ಕುತೂಹಲದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.